ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ ದೊರೆತಿದೆ.
ಬೆಳಗಾವಿಯ ಮಹಾತ್ಮಾ ಗಾಂಧೀಜಿ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಕ್ತಿಮಠದ ಪೂಜ್ಯರಾದ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿದ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರರವರು ,ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಶ್ರೀಮತಿ ಲೀಲಾವತಿ ಹಿರೇಮಠ ರವರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಎಸ್ ಪಿ ದಾಸಪ್ಪನವರ ರವರ ಉಪಸ್ಥಿತಿಯಲ್ಲಿ ಜರುಗಿದ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು,
ಇಲಾಖೆಯಲ್ಲಿ ಉತ್ತಮ ಕಾರ್ಯ ಮಾಡಿರುವ ಸರಳ ಸಜ್ಜನಿಕೆಯ ಸ್ನೇಹ ಜೀವಿಯಾಗಿರುವ ಆರ್ ಆಯ್ ಮೆಟ್ಯಾಲಮಠರವರು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮಾಡಿರುವರು. ಈ ಹಿಂದೆ ಮುಚ್ಚoಡಿ ಸಿ ಆರ್ ಪಿ ಯಾಗಿ ಕೆಲಸ ನಿರ್ವಹಣೆ ಮಾಡಿ ಶಿಕ್ಷಕರ ಪ್ರೀತಿಗೆ ಪಾತ್ರರಾಗಿರುವರು
ಮೆಟ್ಯಾಲಮಠ ರವರಿಗೆ ಪ್ರಶಸ್ತಿ ದೊರೆತ ನಿಮಿತ್ತ ಸಮಾನ ಮನಸ್ಕ ಶಿಕ್ಷಕರ ಗೆಳೆಯರ ಬಳಗದಿಂದ ಎಸ್ ಆಯ್ ಖುದ್ದನವರ,ಬಸವರಾಜ ಫಕೀರಪ್ಪ ಸುಣಗಾರ, ಕುಮಾರಸ್ವಾಮಿ ಚರಂತಿಮಠ, ರಾಜೇಂದ್ರ ಪಿ ಗೋಶ್ಯಾನಟ್ಟಿ, ಬಿ ಬಿ ಹಟ್ಟಿಹೋಳಿ, ಪಟೇಲ ಶಿಕ್ಷಕರು ಹೂ ಗುಚ್ಛ ನೀಡಿ ಅಭಿನಂದಿಸಿದರು
ಮೆಟ್ಯಾಲ ಮಠ ರವರಿಗೆ ತಾಲೂಕಾ ಆದರ್ಶ್ ಪ್ರಶಸ್ತಿ ದೊರೆತ ಬಗ್ಗೆ ವಿಜಯ ನಗರದ ಕನ್ನಡ ಹಾಗೂ ಮರಾಠಿ ಶಾಲೆಯ ಶಿಕ್ಷಕಿಯರು ಸಂತೋಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ