Homeಸುದ್ದಿಗಳುಮಹಿಳೆ ಅನಾರೋಗ್ಯ ಹೊಂದಿದರೆ ಇಡೀ ಕುಟುಂಬ ಅನಾರೋಗ್ಯಕ್ಕೆ ಒಳಗಾಗುತ್ತದೆ - ಉಮಾ ಬಳ್ಳೊಳ್ಳಿ

ಮಹಿಳೆ ಅನಾರೋಗ್ಯ ಹೊಂದಿದರೆ ಇಡೀ ಕುಟುಂಬ ಅನಾರೋಗ್ಯಕ್ಕೆ ಒಳಗಾಗುತ್ತದೆ – ಉಮಾ ಬಳ್ಳೊಳ್ಳಿ

ಮೂಡಲಗಿ– ಮನೆಯ ಆರೋಗ್ಯದ ಗುಟ್ಟು ಮಹಿಳೆಯ ಕೈಯಲ್ಲಿರುತದೆ ಮಹಿಳೆಯೇ ಅನಾರೋಗ್ಯದಿಂದ ಮಲಗಿದರೆ ಮನೆಯವರ ಆರೋಗ್ಯ ಹಾಳಾಗುತ್ತದೆ ಆದ್ದರಿಂದ ಮಹಿಳೆಯರು ವರ್ಷಕ್ಕೆ ಒಂದು ಸಲವಾದರು ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಿ ಮತ್ತು ಸೂಕ್ತ ಸಮಯದಲ್ಲಿ ಔಷಧ ಪಡೆದು ಗುಣಮುಖರಾಗಿ ಎಂದು ಆರಭಾಂವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪ ಅಧಿಕಾರಿ ಉಮಾ ಬಳ್ಳೊಳ್ಳಿ ಹೇಳಿದರು.

ಅವರು ಮಂಗಳವಾರ ಬೆಳಗಾವಿಯ ಕೆ ಎಲ್ ಇ ವಿಶ್ವವಿದ್ಯಾಲಯ, ಡಾ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಜವಾಹರ ನೆಹರು ಮೆಡಿಕಲ್ ಕಾಲೇಜು, ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಎರಡನೆಯ ವರ್ಷದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಕೆ ಎಲ್ ಇ ಸಂಸ್ಥೆಯವರ ಈ ಕಾರ್ಯ ಬೆಳಕೂಡ ಕುಟುಂಬದವರ ಸಹಕಾರದಿಂದ ಉಚಿತ ಆರೋಗ್ಯದ ಶಿಬಿರಗಳು ಮನೆ ಬಾಗಿಲಿಗೆ ಬಂದಿದೆ ಇದರ ಉಪಯೋಗ ಪಡದುಕೊಳ್ಳಲು ಸಲಹೆ ನೀಡಿ, ಈಗಿನ ಕಲಬೆರಕೆ ಆಹಾರ ಸೇವನೆ, ಮಾನಸಿಕ ಒತ್ತಡ, ವಿರಾಮ ಇಲ್ಲದ ದುಡಿಮೆ, ಸಣ್ಣ ವಯಸ್ಸಿನಲ್ಲಿ ವಿವಾಹ ಇವುಗಳಿಂದ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗುತ್ತದೆ ಇಂತಹ ಉಚಿತ ಆರೋಗ್ಯ ಶಿಬಿರಗಳ ಲಾಭ ಪಡೆದು ಮುಂಜಾಗ್ರತೆಯಿಂದ ಜೀವನ ಸಾಗಿಸಬೇಕು ಎಂದರು.

ಹಿಂದಿನ ಕಾಲದಲ್ಲಿ ಒಳ್ಳೆಯ ಆಹಾರವಿತ್ತು ಖಾಯಿಲೆಗಳು ಇರಲಿಲ್ಲ ಈಗ ಒಳ್ಳೆಯ ಆಹಾರದ ಕೊರತೆ ಮತ್ತು ಆಯುಷ್ಯದ ಕೊರತೆ ಇದೆ. ಕಡಿಮೆ ಅವಧಿಯ ಕಾಲದಲ್ಲಿ ಉತ್ತಮ ಆರೋಗ್ಯ ಹೊಂದುವುದು ಸೂಕ್ತ ಎಂದರು.

ಕೆ ಎಲ್ ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ವೆಂಕಟೇಶ ಡಾಂಗೆ ಮಾತನಾಡಿ, ಕೇವಲ ಹಣ ಇದ್ದರೆ ಆರೋಗ್ಯ ಸಿಗಲಾರದು ಆಯುಷ್ಯ ಮತ್ತು ಆರೋಗ್ಯವನ್ನು ನಾವು ತುಂಬಾ ಜಾಗೃತೆಯಿಂದ ಕಾಯ್ದುಕೊಳ್ಳಬೇಕಾಗಿದೆ.ಗ್ರಾಮಿಣ ಭಾಗದ ಆರೋಗ್ಯದ ದೃಷ್ಟಿಯಲ್ಲಿ ಡಾ. ಪ್ರಭಾಕರ ಕೋರೆಯವರು ಹಳ್ಳಿ ಹಳ್ಳಿಗಳಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಗ್ರಾಮಿಣ ಭಾಗಕ್ಕೂ ವಿಸ್ತರಿಸಿದ್ದಾರೆ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಕಲ್ಲೋಳಿ ಗ್ರಾಮವನ್ನು ಕೆ ಎಲ್ ಇ ಸಂಸ್ಥೆಯವರು ದತ್ತು ಪಟ್ಟಣವಾಗಿ ಸ್ವೀಕರಿಸಿದ್ದಾರೆ, ಕೇವಲ 650 ರೂ. ಗಳನ್ನು ತುಂಬಿ ಆರೋಗ್ಯ ಕಾರ್ಡನ್ನು ಪಡೆದರೆ ಒಂದು ವರ್ಷದವರೆಗೆ ಸಂಪೂರ್ಣವಾಗಿ ಇಡೀ ಕುಟುಂಬದ ಚಿಕಿತ್ಸೆ , ಪರೀಕ್ಷೆ ಎಲ್ಲವನ್ನು ಉಚಿತವಾಗಿ ಪಡೆಯಬಹುದು.

ಒಬ್ಬರಿಗಾದರೆ 250,ಗಂಡ ಹೆಂಡತಿಗಾದರೆ 500 ಹಾಗೂ ಕುಟುಂಬಕ್ಕಾದರೆ 650ರೂಗಳಲ್ಲಿ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶ ಈರಪ್ಪ ಬೆಳಕೂಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಮಾರ್ಚ ಮೂರರಂದು ಉಚಿತ ಆರೋಗ್ಯ ಶಿಬಿರದ ಲಾಭವನ್ನು 2750 ರೋಗಿಗಳು ಪಡೆದಿದ್ದು, ಈ ಶಿಬಿರದಲ್ಲಿ ಉಚಿತ ತಪಾಸಣೆಯ ಜೊತೆಗೆ ಕೆ ಎಲ್ ಇ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಪ್ರಯೋಜನವನ್ನು ನೂರಾರು ಫಲಾನುಭವಿಗಳು ಪಡೆದಿದ್ದಾರೆ ನೀವು ಆರೋಗ್ಯವಾಗಿರುವ ಮೂಲಕ ಇಡೀ ಕುಟುಂಬವನ್ನು ಆರೋಗ್ಯವಾಗಿಡಿ ಎಂದರು.

ಇದೆ ಸಮಯದಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಉಮಾ ಬಳ್ಳೊಳ್ಳಿ, ಡಾ ವಿಜಯಲಕ್ಷ್ಮೀ ಮುದ್ದನಗೌಡರ, ಡಾ ರಕ್ಷಾಶ್ರೀ, ಡಾ ಶೈಲಾ ಪಾಶ್ಚಾಪೂರೆ ಹಾಗೂ ಸುಲೋಚನಾ ಮಠಪತಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈರಪ್ಪ ಬೆಳಕೂಡ, ಕೆ ಎಲ್ ಇ ಸಂಸ್ಥೆಯ ಉಸ್ತುವಾರಿ ಆಡಳಿತಾಧಿಕಾರಿ ಡಾ. ಅಲ್ಲಮಪ್ರಭು ಕುಡಚಿ,ಡಾ. ಆರ್ ಎಮ್ ಪಾಟೀಲ್, ಡಾ. ವಿಜಯಲಕ್ಷ್ಮೀ ಮುದ್ದನಗೌಡರ, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಪಾಂಡು ಬಂಗೆನ್ನವರ ಇದ್ದರು. ಬಸವೇಶ್ವರ ಪಿ ಯು ಕಾಲೇಜಿನ ಪ್ರಾಚಾರ್ಯ ಎಸ್ ಎಸ್ ಹೂಗಾರ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ ಬೋಜರಾಜ ಬೆಳಕೂಡ ಸ್ವಾಗತಿಸಿದರು ರಮೇಶ ಹೆಬ್ಬಾಳ ನಿರೂಪಿಸಿದರು. ಎಸ್ ಎಸ್ ಹೂಗಾರ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group