ಮಕ್ಕಳಿಗೆ ಉತ್ತಮ ಜ್ಞಾನ ನೀಡಿದರೆ ಮಾಡಿದ ಸಾಲ ತೀರೀತು

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಸಾಲವೇ ಶೂಲ ಯಾವುದಿದರ ಮೂಲ? ಆಧ್ಯಾತ್ಮಿಕ ಪ್ರಗತಿಯಿಂದ ಧಾರ್ಮಿಕತೆ ಕಡೆಗೆ ನಡೆದಿದ್ದ ಭಾರತ ದೇಶವನ್ನು ಇಂದಿನ ವೈಜ್ಞಾನಿಕ ಚಿಂತಕರ ಸಹಾಯ,ಸಹಕಾರ,ಸಾಲದಿಂದ ಮಾನವನಿಗೆ ಸಾಲದ ಹೊರೆ ಹಾಕಿಕೊಂಡು ರಾಜಕೀಯದಿಂದ ದೇಶವನ್ನು ರಕ್ಷಣೆ ಮಾಡುವುದರಲ್ಲಿಯೇ ಭಾರತೀಯರು ಎಡವಿರೋದು.

ಇಲ್ಲಿ ಬಡತನವನ್ನು ಹಣದಿಂದ ಅಳೆಯುವ ಮೂಲಕ ನಿಜವಾದ ಜ್ಞಾನಿಗಳಿಗೆ ಸರಿಯಾದ ಶಿಕ್ಷಣದಿಂದ ಮಾರ್ಗದರ್ಶನ ಮಾಡದೆ, ಅವರನ್ನು ಹಣ,ಅಧಿಕಾರದಿಂದ ರಾಜಕೀಯವಾಗಿ ಸೆಳೆಯುತ್ತಾ ತಮ್ಮ ಮೂಲದಲ್ಲಿದ್ದ ಮುಖ್ಯ ಆಸ್ತಿಯನ್ನು ಬಿಟ್ಟು ಹೊರಬಂದವರಿಗೆ ಸ್ವಾಗತಿಸುವ ಸಂಸ್ಕೃತಿ ಬೆಳೆಯಿತು.

ಇದನ್ನೇ ಮಕ್ಕಳು ಮೊಮ್ಮಕ್ಕಳು ಮಾಡಿಕೊಂಡು ಹೊರಗಿನ ಸಾಲ ಬೆಳೆಸಿಕೊಂಡು ತೀರಿಸದೆ ಜೀವ ಹೋದರೆ ಮತ್ತೆ ಬಂದಾಗ ಹಳೇ ಜನ್ಮಕ್ಕಿಂತ ಹೆಚ್ಚು ಸಾಲದ ಹೊರೆ ಹುಟ್ಟುವಾಗಲೇ ಅನುಭವಿಸುತ್ತಾ ಭ್ರಷ್ಟಾಚಾರ, ಅಸತ್ಯ, ಅನ್ಯಾಯ, ಅಧರ್ಮ ದಿಂದ ಜೀವನ ನಡೆಸುವವರ ಸಂಖ್ಯೆ ಬೆಳೆದಿದೆ. ಹಿಂದುಳಿದಿರೋದು ನಮ್ಮ ಜ್ಞಾನ.

- Advertisement -

ಇದು ನಮ್ಮೊಳಗೇ ಇದ್ದರೂ ಬೆಳೆಸಿಕೊಳ್ಳಲು ಶಿಕ್ಷಣ ಇಲ್ಲದೆ , ಸರ್ಕಾರದ ಹಿಂದೆ ನಡೆದವರಿಗೆ ಈಗಲೂ ಜೀವನ ಸಮಸ್ಯೆಗಳಿಗೆ ಪರಿಹಾರ ಸರ್ಕಾರ ನೀಡಬೇಕೆಂದರೆ ಮುಗಿಯದ ಕಥೆ. ಕಥೆಯ ಅಂತ್ಯ ವ್ಯಥೆಯೇ ಆಗಿದ್ದರೆ ಕಷ್ಟ. ಕಷ್ಟಪಡದೆ ಸಾಲದ ಹಣವನ್ನು ದುರುಪಯೋಗ ಪಡಿಸಿಕೊಂಡರೆ ಸಾಲ ತೀರಿಸಲಾಗುವುದೆ? ಅನಾವಶ್ಯಕ ಸಾಲ ಪಡೆಯೋರೊಮ್ಮೆ ‘ಸಾಲ’ ಪದಕ್ಕೆ ಆಧ್ಯಾತ್ಮದ ಅರ್ಥ ‘ಋಣ’ ಎಂದೆನ್ನುವುದನ್ನು ತಿಳಿದರೆ ಉತ್ತಮ.

‘ಸಾಲ ಮಾಡಿ ಕೆಟ್ಟ” “ಸಾಲವೇ ಶೂಲ” ಇವು ಮಹಾತ್ಮರ ನುಡಿಮುತ್ತುಗಳಾಗಿದ್ದವು. ಈಗ ಹುಟ್ಟುವ ಮಕ್ಕಳು ಮೊಮ್ಮಕ್ಕಳ ತಲೆಗೂ ಬೆಳೆಸಿಕೊಂಡಿರುವ ಸಾಲವನ್ನು ತೀರಿಸಲು ಜ್ಞಾನವಿಲ್ಲವಾದರೆ ಜೀವ ಶಾಶ್ವತವಲ್ಲ. ಆತ್ಮ ಶಾಶ್ವತ. ಯಾಕೆ ಪ್ರತಿಯೊಂದು ಮನೆಮನೆಯಲ್ಲಿಯೂ ಆಸ್ತಿ ಅಂತಸ್ತು, ಹಣ,ಅಧಿಕಾರಕ್ಕಾಗಿ ಹೊಡೆದಾಟ,ಹೋರಾಟ, ದ್ವೇಷ,ಅಸೂಯೆ ,ಸಾವು ನೋವುಗಳು‌ ಹೆಚ್ಚಾಗುತ್ತಿದೆ? ಎಂದರೆ, ಸಾಲದ ಪ್ರಭಾವದಿಂದಾಗಿ ಹೋದ ಜೀವಕ್ಕೆ ಮುಕ್ತಿ ಸಿಗದೆ ತಿರುಗಿ ಬಂದಾಗ ತಮ್ಮವರೆ ತಮ್ಮನ್ನು ಗುರುತಿಸದೆ ಆಳೋದಾಗಿರತ್ತೆ.

ಇದಕ್ಕೆ ಬದಲಾಗಿ ಇರೋವಾಗಲೆ ಸತ್ಯ,ಧರ್ಮದ ದಾರಿಯಲ್ಲಿ ಸತ್ಕರ್ಮದಿಂದ ದುಡಿದು ಸಣ್ಣ ಸಂಪಾದನೆಯಲ್ಲಿ ಮಕ್ಕಳಿಗೂ ಜೀವನ ಸತ್ಯವನ್ನು ತಿಳಿಸಿ ಆಧ್ಯಾತ್ಮದ ದಾರಿ ಹಿಡಿದರೆ ಮೊದಲು ಕಷ್ಟವಾದರೂ ಹಿಂದಿನ ಸಾಲ ತೀರಿದ ಮೇಲೆ ಕೊನೆಗಾಲದಲ್ಲಿ ಮನಸ್ಸು,ಆತ್ಮ ಒಂದಾಗಿ ಶಾಂತವಾಗಿರುತ್ತದೆ. ಇದನ್ನು ಹಿಂದೆ ಮಹಾತ್ಮರಾದವರು ನಡೆದು ತೋರಿಸಿದ್ದಾರೆ. ಈಗ ಮಹಾತ್ಮರ ಹೆಸರಲ್ಲಿ ವ್ಯವಹಾರ ನಡೆಸುತ್ತಾ ಇನ್ನಷ್ಟು ಸಾಲ ಬೆಳೆಸಿಕೊಂಡು ಜನಸಾಮಾನ್ಯರನ್ನೂ ದಾರಿ ತಪ್ಪಿಸಿದರೆ ಇದರ ಫಲ ಜೀವವೆ ಅನುಭವಿಸುವುದಲ್ಲವೆ?

ವಿಪರ್ಯಾಸವೆಂದರೆ, ಒಬ್ಬ ರೈತ ತನ್ನ ಒಂದು ಲಕ್ಷದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ ಅವನ ಭೂಮಿಯ ಬೆಲೆ ಇಪ್ಪತ್ತು ಲಕ್ಷ ಬೆಲೆ ಬಾಳುತ್ತಿರುವ ಜ್ಞಾನ ಅವನಿಗಿಲ್ಲದೆ ಅದರ ಮೇಲೆ ಹೊರಗಿನ‌ ಒಂದು ಲಕ್ಷ ಸಾಲ ಪಡೆದು ಭೂ ಸೇವೆ ಮಾಡಲಾಗದೆ ಜೀವ ತೆಗೆದುಕೊಂಡರೆ ಆತ್ಮಹತ್ಯೆಗೆ ಕಾರಣ ಸರ್ಕಾರವಾಗುತ್ತದೆ.

ಇದನ್ನು ಮಧ್ಯವರ್ತಿಗಳು ಮನೆಮನೆಗೆ ಸುದ್ದಿ ತಲುಪಿಸಿ ಕೊನೆಯಲ್ಲಿ ರೈತ ಕುಟುಂಬಕ್ಕೆ ಸರ್ಕಾರದ ಪರಿಹಾರ ಕೊಡಿಸುತ್ತಾರೆ. ಇದರಲ್ಲಿ ಹೋದ ಜೀವ ಪುನಃ ಬಂತೆ? ಸಾಲ ತೀರಿತೆ? ಜೀವಕ್ಕೆ ಮುಕ್ತಿ ಸಿಕ್ಕಿತೆ? ಅವನ ಕುಟುಂಬ ಸಾಲ ಮಾಡೋದು ಬಿಟ್ಟಿತೆ? ಭೂಮಿಯನ್ನು ಸದ್ಬಳಕೆ ಮಾಡಿಕೊಂಡು ರೈತ ಕುಟುಂಬಗಳು ಒಗ್ಗಟ್ಟಿನಿಂದ ಬಾಳಿ ಬದುಕಿ ಸಮಾಜದಲ್ಲಿ ಸುಖ ಶಾಂತಿಯಿಂದ ಬಾಳುತ್ತಿದ್ದವರು ಈಗ ಯಾರೋ ಅಜ್ಞಾನದ ಸ್ವಾರ್ಥ ಕ್ಕೆ ಬಲಿಯಾಗಿ ಮೂಲ ಮರೆತು ಹೊರ ಬಂದ ಮೇಲೆ ಮಧ್ಯವರ್ತಿಗಳು ಅವರನ್ನು ಅಡ್ಡದಾರಿ ತೋರಿಸಿ ತಮ್ಮ ಜೀವನ ನಡೆಸಿಕೊಂಡರು.

ಕಷ್ಟಪಡದೆ ಸಾಲ ತೀರಿಸಲಾಗದೆ ಭ್ರಷ್ಟಾಚಾರಕ್ಕೆ ಸಹಕಾರ ನೀಡಿದವರಿಗೆ ಈಗಲೂ ನಮ್ಮ ಜೀವನವೂ ಭ್ರಷ್ಟಾಚಾರದ ಹಣದಲ್ಲಿ ನಡೆದಿದೆ ಎನ್ನುವ ಸತ್ಯ ಅರ್ಥವಾಗುತ್ತಿಲ್ಲ. ಭ್ರಷ್ಟ ಮುಕ್ತ ಭಾರತದ ಹೋರಾಟದಲ್ಲಿ ಭ್ರಷ್ಟಾಚಾರ ವಿದ್ದರೆ ಹೋರಾಟ ಕೇವಲ ನಾಟಕವಾಗುತ್ತದೆ. ಸಾಲ ನೀಡುವವರಿರೋವರೆಗೆ ಕೊಡುವವರೂ ಇರುತ್ತಾರೆ. ಇಷ್ಟಕ್ಕೂ ಕೊಡುವವರು ಯಾವ ಮಾರ್ಗದಲ್ಲಿ ಸಂಪಾದನೆ ಮಾಡಿದ್ದಾರೆನ್ನುವುದು ಮುಖ್ಯ.

ಅತಿಯಾದ ಹಣ, ಅಧಿಕಾರ ಶಿಷ್ಟಾಚಾರ ದಿಂದ ಗಳಿಸಲಾಗದು. ಇದನ್ನು ಹಂಚಿಕೊಂಡು ರಾಜಕೀಯ ನಡೆಸುವವರಿಗೆ ಯಾವ ಸಮಸ್ಯೆಗಳಿರುವುದಿಲ್ಲ ಇದ್ದರೂ ಹಂಚಿಕೊಂಡವರು ಅದನ್ನು ಹಂಚಿಕೊಂಡು ಅನುಭವಿಸುತ್ತಾರೆ. ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಸಾಲದ ಹೊರೆ ಹೆಚ್ಚಾದಂತೆ ಕಷ್ಟ ನಷ್ಟ ಹೆಚ್ಚುತ್ತಿದೆ.ಇದಕ್ಕೆ ಕಾರಣ ನಮ್ಮದೇ ಸಹಕಾರ.

ಎಷ್ಟು ಸಾಲಮಾಡಿದರೂ ಅದು ತೀರಿಸೋದಕ್ಕೆ ಸರ್ಕಾರ ಇರೋದಿಲ್ಲ. ಸರ್ಕಾರ ನೀಡುತ್ತಿರುವ ಸಾಲ ಪ್ರಜೆಗಳದ್ದೇ ಆದಾಗ ಸಮಾಜದ ಋಣ ತೀರಿಸಲು ಸತ್ಕರ್ಮದಿಂದ, ಸ್ವಧರ್ಮ,ಸತ್ಯ, ನ್ಯಾಯದಿಂದ ದುಡಿದು ಸೇವೆ ಮಾಡಬೇಕಿತ್ತು. ಸೇವೆಯ ಹೆಸರಲ್ಲಿ ತಮ್ಮ ಸೇವೆ ಮಾಡಿಸಿಕೊಳ್ಳುವವರ ಸಂಖ್ಯೆ ಬೆಳೆದಿದೆ. ಹೀಗೇ ಜನ್ಮಜನ್ಮದ ಋಣ ಅಥವಾ ಸಾಲ ಹನುಮಂತನ ಬಾಲದಂತೆ ಬೆಳೆದು ಮಕ್ಕಳು ಹುಟ್ಟುವಾಗಲೇ ಒಂದಷ್ಟು ಹೊತ್ತುಕೊಂಡಿರುತ್ತಾರೆ.

ಹುಟ್ಟಿದ ಮೇಲೆ ಪೋಷಕರು ಶಿಕ್ಷಣಕ್ಕಾಗಿ ಮತ್ತಷ್ಟು ಸಾಲ ಮಾಡಿ ಹೊರೆ ಹಾಕುತ್ತಾರೆ. ಇದರ ಜೊತೆಗೆ ಆಡಂಬರದ ಆಧುನಿಕತೆಯ ಜೀವನಕ್ಕೆ ದಾರಿಮಾಡಿಕೊಟ್ಟರೆ ಹಿಡಿಯೋರೆ ಇಲ್ಲವಾಗಿ , ಮಾನವೀಯತೆ ಮರೆತು ಸ್ವಾರ್ಥ ದ ಬದುಕಿನಲ್ಲಿ ಸಮಾಜ ದ್ರೋಹ,ದೇಶದ್ರೋಹದ ಕೆಲಸದಲ್ಲಿ ಹಣಸಂಪಾದನೆಗಿಳಿದವರನ್ನು ಶ್ರೀಮಂತರೆಂದು ರಾಜಕೀಯ ನಡೆಸಲು ಬಿಟ್ಟರೆ ಇದರಿಂದಾಗಿ ಮನುಕುಲದ ಸಾಲ ತೀರುವುದಿರಲಿ ಮನುಕುಲವೇ ಅಸುರೀ ಶಕ್ತಿಯ ವಶ ಆಗಿರುತ್ತದೆ.

ಕಲಿಪ್ರಭಾವದಿಂದಾಗಿ ಇದನ್ನು ಮಾನವರು ಸೂಕ್ಷ್ಮ ವಾಗಿ ಗಮನಿಸಲಾಗದೆ ಎಲ್ಲರೂ ನಡೆದ ದಾರಿಯೇ ಸರಿ ಎಂದು ಹಿಂದೆ ತಿರುಗಿ ನೋಡದೆ ಮರೆಯಾದರೂ ಇಲ್ಲಿ ಆತ್ಮಕ್ಕೆ ಮುಕ್ತಿ ಸಿಗದೆ ಅತಂತ್ರಸ್ಥಿತಿಗೆ ತಲುಪಿರುತ್ತದೆ. ಇದನ್ನು ಆಧ್ಯಾತ್ಮ ದಿಂದ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ. ಹೀಗಾಗಿ ಹಿಂದಿನ ಮಹಾತ್ಮರುಗಳು ಎಷ್ಟೇ ಕಷ್ಟ ಬಂದರೂ ಬೇಡುತ್ತಿರಲಿಲ್ಲ. ಜೀವ ಹೋಗೋ ಪರಿಸ್ಥಿತಿ ಬಂದರೂ ಪರಮಾತ್ಮನೆ ಎಲ್ಲದ್ದಕ್ಕೂ ಕಾರಣವೆಂದು ಶರಣರಾಗಿ,ದಾಸರಾಗಿದ್ದರು. ಅಂತಹ ಶಕ್ತಿ ನಮಗಿಲ್ಲ.

ಆದರೆ ಅವರ ಕಥೆ, ಪುರಾಣ ಪ್ರಚಾರವಿದೆ. ಮಧ್ಯವರ್ತಿಗಳು ತಮ್ಮ ಜೀವನದಲ್ಲಿ ಸತ್ಯ,ಧರ್ಮವನ್ನು ಅಳವಡಿಸಿಕೊಂಡು ಇಂದಿನ ಸತ್ಯಕ್ಕೂ ಅಂದಿನ ಸತ್ಯಕ್ಕೂ ವ್ಯತ್ಯಾಸ ತಿಳಿದರೆ ಈಗ ನಮ್ಮ ಸ್ಥಿತಿಗೆ ಕಾರಣ ಸಾಲವಾಗಿರುತ್ತದೆ. ಇದನ್ನು ತೀರಿಸದೆ ವಿಧಿಯಿಲ್ಲವಾದಾಗ ಸರ್ಕಾರದ ಸಾಲ ಪಡೆದವರು ಅದನ್ನು ಸದ್ಬಳಕೆ ಮಾಡಿಕೊಂಡು ತೀರಿಸುವವರೆಗೆ ಜೀವನದಲ್ಲಿ ನೆಮ್ಮದಿ ಸುಖ,ಶಾಂತಿ ಸಿಗೋದಿಲ್ಲ.

ಅನಾವಶ್ಯಕ ಸಾಲ ಮಾಡಿ ಜೀವನ ಹಾಳು ಮಾಡಿಕೊಳ್ಳದೆ ಅತ್ಯವಶ್ಯಕವಿದ್ದರೆ ಅದನ್ನು ತೀರಿಸುವ ಜ್ಞಾನಶಕ್ತಿ ಇದ್ದರೆ ಮಾತ್ರ ಪಡೆದರೆ ಉತ್ತಮ. ಇಲ್ಲಿ ಮಧ್ಯವರ್ತಿಗಳ ಪ್ರವೇಶವಾಗಿದ್ದರೆ ಕಷ್ಟ ನಷ್ಟ ಹೆಚ್ಚುತ್ತದೆ. ಮಧ್ಯವರ್ತಿಗಳು ಸಾಲದ ಪಾಲುದಾರರೆ? ಆತ್ಮನಿರ್ಭರ ಭಾರತಕ್ಕೆ ಸ್ವತಂತ್ರ ಜ್ಞಾನದ ಅಗತ್ಯವಿದೆ. ಸಾಲದಿಂದ ಆತ್ಮಶಕ್ತಿ ಕುಸಿದು, ಪರಾವಲಂಬನೆ ಹೆಚ್ಚಿದರೆ ಲಾಭ ಯಾರಿಗೆ?

ಕೊರೊನ ದಿಂದ ಜೀವನ ಬದಲಾಗಿ ಮೂಲ ಕಸುಬಿಗೆ ನಡೆದವರಿಗೆ ಹಣದ ಅಗತ್ಯವಿದೆ. ಅದನ್ನು ಸರಿಯಾಗಿ ಬಳಸಿ ದುಡಿದು ತೀರಿಸುವುದರಲ್ಲಿದೆ ಮುಂದಿನ ಜೀವನಾರೋಗ್ಯ. ಜ್ಞಾನಕ್ಕೆ ಬೆಲೆಕಟ್ಟಲಾಗದು. ಜ್ಞಾನವನ್ನು ಸದ್ಬಳಕೆ ಮಾಡಿ ಕೊಳ್ಳಲು ಪ್ರಜಾಪ್ರಭುತ್ವದಲ್ಲಿ ಸ್ವತಂತ್ರವಿದೆ.

ಇತ್ತೀಚಿನ ದಿನಗಳಲ್ಲಿ ಆಹಾರ ತಿನ್ನುವುದಕ್ಕಿಂತ ಔಷಧ ಸೇವನೆಗೆ ಔಷಧಕ್ಕೆ ಹೆಚ್ಚು ಹಣ ಸುರಿಯುತ್ತಿದ್ದಾರೆ. ಸರ್ಕಾರ ಆತ್ಮನಿರ್ಭರ ಭಾರತವೆಂದು ಔಷಧ ತಯಾರಿಕೆಯಲ್ಲಿ ಹೇಳಿ ಕೊಂಡರೆ ಪ್ರಗತಿಯ ಲಕ್ಷಣವೆ? ಇದಕ್ಕೆ ಬದಲಾಗಿ ಸರ್ಕಾರ ಆರೋಗ್ಯಕರ ವಿಚಾರವುಳ್ಳ ಶಿಕ್ಷಣ ನೀಡಿ, ರೋಗಕ್ಕೆ ಆಯುರ್ವೇದಿಕ್ ಔಷಧವನ್ನು ಜನಸಾಮಾನ್ಯರು ಕಡಿಮೆ ಬೆಲೆಯಲ್ಲಿ ಪಡೆಯುವಂತೆ ಮಾಡಿ, ಮಕ್ಕಳಿರುವಾಗಲೇ ಯೋಗಶಿಕ್ಷಣಕ್ಕೆ ಒತ್ತುಕೊಟ್ಟು ಬೆಳೆಸುವಂತೆ ಆರ್ಥಿಕ ಸಹಾಯ ಶಿಕ್ಷಣ, ಆಯುರ್ವೇದ, ಯೋಗ ಸಂಸ್ಥೆ ಗಳಿಗೆ ನೀಡಿದ್ದರೆ, ಈ ವಿದೇಶಿ ಶಿಕ್ಷಣ, ರೋಗ, ಔಷಧವನ್ನು ಉಚಿತವಾಗಿ ಕೊಡುವ ಅಗತ್ಯವಿರಲಿಲ್ಲ.

ಇದೂ ಕೂಡ ಒಂದು ರೀತಿಯ ಸಾಲದ ಪ್ರತಿಫಲ. ಈಗಲೂ ಭಾರತವನ್ನು ಸ್ಮಾರ್ಟ್ ಮಾಡಲು ಹೊರಟಿರುವುದು ಯಾರ ಜ್ಞಾನವೋ? ಯಾರ ಸಾಲವೋ? ಯಾವ ಪ್ರಗತಿಯೋ? ಪ್ರಜೆಗಳೇ ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ ಭವಿಷ್ಯವಿದೆ.

ಯಾರನ್ನು ಯಾವುದನ್ನು ನಂಬಿ ಹೊರನಡೆದೆವೋ ಅದೇ ದೊಡ್ಡ ಸಮಸ್ಯೆಗೆ ರೋಗಕ್ಕೆ ಕಾರಣವಾದರೆ ತಿರುಗಿ ಬರಲು ಕಷ್ಟವೇ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?. ಮಕ್ಕಳ ಭವಿಷ್ಯಕ್ಕೆ ಉತ್ತಮ ಜ್ಞಾನ ಬಿಟ್ಟು ಹೋದರೆ ಸಾಲ ತೀರಿಸೋ ಶಕ್ತಿಯಿರುತ್ತದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!