ಸಿಂದಗಿ: ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಾಗೊಮ್ಮೆ ಅಭಿವೃದ್ಧಿ ಪರ್ವವನ್ನೇ ಹರಿಸಿದೆ 2023ರ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರಿಗೆ ಅನೇಕ ಕೊಡುಗೆಗಳನ್ನು ನೀಡುವ ಭರವಸೆಯನ್ನು ಮಾಜಿ ಸಿಎಂ ಕುಮಾರಣ್ಣನವರು ಪಂಚತಂತ್ರ ಯಾತ್ರೆ ಮೂಲಕ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದಾರೆ ಅವರ ಆಸೆಗೆ ನೀರೆರೆಯುವ ನಿಟ್ಟಿನಲ್ಲಿ ಕಾರ್ಯದಲ್ಲಿ ತೊಡಗಿದ್ದೇನೆ ನನಗೊಮ್ಮೆ ಅವಕಾಶ ಕೊಡಿ ಎಂದು ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಮನವಿ ಮಾಡಿಕೊಂಡರು.
ಪಟ್ಟಣದ 23ನೇ ವಾರ್ಡಿನಲ್ಲಿರುವ ಜ್ಯೋತಿ ನಗರ, ಗೊಲಿಬಾರ ಮಡ್ಡಿ, ಬಂದಾಳ ರಸ್ತೆಯಲ್ಲಿ ಜೆಡಿಎಸ್ ಪಕ್ಷದ ಪಂಚತಂತ್ರ ಯೋಜನೆ ಕರಪತ್ರಗಳನ್ನು ಮನೆ ಮನೆಗೆ ವಿತರಣೆ ಮಾಡುತ್ತ ಮತಯಾಚಿಸಿ ಮಾತನಾಡಿ, ನಮ್ಮ ಯಜಮಾನ ಶಿವಾನಂದ ಪಾಟೀಲರು ಒಬ್ಬ ಸೈನಿಕನಾಗಿ ದೇಶ ಕಾಯುವಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿಮ್ಮಗಳ ಸೇವೆ ಮಾಡಲು ಪಣ ತೊಟ್ಟಿದ್ದರು ಅವರು ನಮ್ಮನೆಲ್ಲ ಕೈಬಿಟ್ಟರು ಅವರ ಕನಸ್ಸುಗಳನ್ನು ನನಸು ಮಾಡಲು ಅಭ್ಯರ್ಥಿಯಾಗಿ ತಮ್ಮ ಮನೆ ಬಾಗಿಲಿಗೆ ಬಂದಿರುವ ನಿಮ್ಮ ಮನೆಯ ಮಗಳಾಗಿ ಸ್ವೀಕರಿಸಿ ನನ್ನನ್ನು ಆಶಿರ್ವದಿಸಿ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿ ಎಂದು ಸೆರಗೊಡ್ಡಿ ಬೇಡಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ದಾನಪ್ಪಗೌಡ ಚನ್ನಗೊಂಡ, ಮಹಿಳಾ ಅಧ್ಯಕ್ಷೆ ಜ್ಯೋತಿ ಗುಡಿಮನಿ, ಮಲ್ಲನಗೌಡ ಪಾಟೀಲ, ಮಹಾಂತೇಶ ಪಾರಗೊಂಡ, ಭೀಮನಗೌಡ ಬಿರಾದಾರ, ಮುದುಕು ಯಂಕಂಚಿ, ಪೀರು ಸೊನ್ನದ, ಸಂಗಮೇಶ ವಡ್ಡೋಡಗಿ, ಭೀಮು ಪೂಜಾರಿ, ನಿಂಗು ಚಾಂದಕವಟೆ, ಪ್ರಕಾಶ ಪಾಟೀಲ, ಸಮತೋಷ ಶಿಸಕನಳ್ಳಿ ಸೇರಿದಂತೆ ಅನೇಕರಿದ್ದರು.