spot_img
spot_img

ಆರಿಸಿಬಂದರೆ ಚಂದ್ರಯಾನ, ಹೆಲಿಕಾಪ್ಟರ್, ಕಾರು, ೧೦೦ ಕೋಟಿ ರೂ…..!! ಅಭ್ಯರ್ಥಿ ಯೊಬ್ಬರ ಆಶ್ವಾಸನೆ ಇದು

Must Read

spot_img

ಭಾರತದಲ್ಲಿ ಚುನಾವಣೆಗಳೆಂದರೆ ಒಂದು ರೀತಿಯ ಹಬ್ಬ ಇದ್ದಂತೆ ಎಂಬ ವಾತಾವರಣವನ್ನು ನಮ್ಮ ರಾಜಕಾರಣಿಗಳು ಸೃಷ್ಟಿಸಿಬಿಟ್ಟಿದ್ದಾರೆ.

ಚುನಾವಣೆಯಲ್ಲಿ ಶತಾಯಗತಾಯ ಆರಿಸಿ ಬರಲೇಬೇಕು ಎಂಬ ಆಸೆಯಿಂದ ಮತದಾರರಿಗೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ಅವರನ್ನು ಕನಸಿನ ಲೋಕದಲ್ಲಿ ತೇಲಿಸಿಬಿಡುತ್ತಾರೆ. ಆರಿಸಿ ಬಂದ ಮೇಲೆ ಮತದಾರರನ್ನು ಹೀನಾಯವಾಗಿ ಕಾಣುವುದು ಮಾತ್ರ ಇದ್ದೇ ಇದೆ ಆ ಮಾತು ಬೇರೆ. ಆದರೂ ಮತದಾರರನ್ನು ಸೆಳೆಯಲು ರಂಗಬಿರಂಗಿ ಭರವಸೆಗಳನ್ನು ನೀಡಿ ಮತ ಗಳಿಸುವ ರಾಜಕಾರಣಿಗಳು ಈಗ ಎಲ್ಲಾ ಪಕ್ಷದಲ್ಲಿಯೂ ತುಂಬಿಕೊಂಡಿದ್ದಾರೆ.

ಆದರೆ ಇಲ್ಲೊಬ್ಬ ಅಭ್ಯರ್ಥಿ ಇದ್ದಾರೆ. ಇವರು ಮಾತ್ರ ಯಾವ ಪಕ್ಷಕ್ಕೂ ಸೇರಿದವರಲ್ಲ. ಆದರೂ ಯಾವುದೇ ಬಲಾಢ್ಯ ಪಕ್ಷ ಕೂಡ ನೀಡಲಾರದ ಆಶ್ವಾಸನೆಯನ್ನು ಚುನಾವಣೆಯಲ್ಲಿ ನೀಡುತ್ತಿದ್ದಾರೆ.

ತಮಿಳುನಾಡಿನಲ್ಲಿನ ಚುನಾವಣೆಯಲ್ಲಿ ಈ ಪಕ್ಷೇತರ ಅಭ್ಯರ್ಥಿ ಮತದಾರರಿಗಾಗಿ ನೀಡುತ್ತಿರುವ ಆಶ್ವಾಸನೆಗಳನ್ನು ಕೇಳಿದರೆ ಎಂಥ ಗಟ್ಡಿ ಗುಂಡಿಗೆಯೂ ಒಂದು ಸಲ ನಡುಗಿ ಹೋಗುವುದು ಗ್ಯಾರಂಟಿ.

ಸಾಮಾನ್ಯವಾಗಿ ಅಭ್ಯರ್ಥಿಗಳು ಮತದಾರರಿಗೆ ಯಾವ ಯಾವ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳುತ್ತಾರೆ? ಮನೆಮನೆಗೆ ನಲ್ಲಿಯಲ್ಲಿ ನೀರು, ಪ್ರತಿ ಗ್ರಾಮಕ್ಕೂ ಒಳ್ಳೆಯ ರಸ್ತೆ, ಬಸ್ ಸೌಲಭ್ಯ, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಕಲರ್ ಟಿವಿ….ಇವೇ ಮೊದಲಾದ ಆಶ್ವಾಸನೆಗಳನ್ನು ಜನರಿಗೆ ನೀಡುವುದು ಸಹಜ. ಆದರೆ ಮಧುರೈ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್.ಸರವಣನ್ ಎಂಬುವವರು ಮತದಾರರನ್ನು ಸೆಳೆಯಲು ನೀಡಿರುವ ಆಫರ್ ಗಳು ಇವು…

  • ತಾನು ಆರಿಸಿ ಬಂದರೆ ೧೦೦ ದಿನದ ಚಂದ್ರ ಲೋಕ ಟ್ರಿಪ್ !
  • ಪ್ರತಿ ಮನೆಗೂ ಒಂದು ಹೆಲಿಕಾಪ್ಟರ್ !
  • ಪ್ರತಿ ಕುಟುಂಬಕ್ಕೆ ೧ ಕೋಟಿ ರೂ. !
    ಪ್ರತಿ ಮನೆಗೂ ಒಂದು ರೊಬೋಟ್ !
  • ಪ್ರತಿಯೊಬ್ಬರಿಗೆ ಐಫೋನ್ !
  • ಪ್ರತಿ ಮನೆಗೆ ಒಂದು ೨೦ ಲಕ್ಷದ ಕಾರು !
  • ಯುವ ಉದ್ಯಮಿಗೆ ೧೦೦ ಕೋಟಿ ನೆರವು !
  • ನವ ವಧುವಿಗೆ ೧೦೦ ಚಿನ್ನದ ನಾಣ್ಯಗಳು !
  • ಕ್ಷೇತ್ರದಲ್ಲಿ ಹಿಮಾಚ್ಛಾದಿತ ಪರ್ವತಗಳ ನಿರ್ಮಾಣ !
  • ಸ್ವಿಮಿಂಗ್ ಪೂಲ್ ಇರುವ ೩ ಮಹಡಿಯ ಭಾರೀ ಮನೆ !

ಅಬ್ಬಬ್ಬಾ ! ಎಂಥಾ ಆಫರ್ ಇದು.

ಇದನ್ನು ಕೇಳಿದಾಗಿನಿಂದ ತಮಿಳುನಾಡಿನ ಜನತೆ ಕಣ್ಣು ತಿಕ್ಕಿಕೊಂಡು ಅಭ್ಯರ್ಥಿಯ ಕಡೆಗೆ ನೋಡತೊಡಗಿದ್ದಾರೆ.

ಇದನ್ನೆಲ್ಲಾ ನೀಡಲು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದ್ದು ಬಹುತೇಕ ಅಸಾಧ್ಯವಾಗಿರುವ ಈ ಆಶ್ವಾಸನೆಗಳ ಬಗ್ಗೆ ತಮಿಳುನಾಡಿನ ಜನತೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದೇ ಕುತೂಹಲಕಾರಿಯಾಗಿದೆ.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!