spot_img
spot_img

ಪರಿಸರ ಸಂರಕ್ಷಿಸದಿದ್ದರೆ ಮಾನವ ಕುಲದ ವಿನಾಶ-ಡಾ.ಭೇರ್ಯ ರಾಮಕುಮಾರ್

Must Read

- Advertisement -

ಪರಿಸರ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುತ್ತಿದ್ದು, ಪರಿಸರ ಸಂರಕ್ಷಿಸದಿದ್ದರೆ ಮಾನವ ಕುಲದ ವಿನಾಶ ಖಚಿತ ಎಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.

ಅವರು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ ಸಾಲಿಗ್ರಾಮದ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪರಿಸರ ನಾಶದಿಂದಾಗಿ ಅತಿವೃಷ್ಟಿ, ಭೂಕುಸಿತ, ಸಾವು-ನೋವುಗಳು ಉಂಟಾಗಿವೆ. ಕಾಡಿನಲ್ಲಿ ವಾಸಿಸಬೇಕಾದ ಆನೆ,ಹುಲಿ ಮೊದಲಾದ ವನ್ಯ ಜೀವಿಗಳು ಹಗಲು ವೇಳೆಯೇ ಗ್ರಾಮಗಳಿಗೆ ಆಹಾರವನ್ನು ಅರಸಿ ಲಗ್ಗೆ ಇಡುತ್ತಿವೆ. ಇದರಿಂದಾಗಿ ಹಲವು ಮುಗ್ದಜನರು ಪ್ರಾಣ ತೆತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

- Advertisement -

ಪರಿಸರ ವಿನಾಶದಿಂದ ಭೂಮಿಯ ಉಷ್ಣಾಂಶ ಹೆಚ್ಚಲಿದೆ. ಮುಂದೊಂದು ದಿನ ಭೂಮಿಯು ಕೆಂಡದ ಉಂಡೆಯಾಗಲಿದೆ. ಉಷ್ಣಾಂಶದ ಹೆಚ್ಚಳದಿಂದಾಗಿ ಹಿಮಪರ್ವತಗಳು ಕರಗಿ ಭೂಪ್ರದೇಶಗಳು ಮುಳುಗಡೆಯಾಗಲಿವೆ. ಮರಗಳ ಹನನದಿಂದ ವಾಯುವಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಲಿದ್ದು ಜನರು ಶ್ವಾಸಕೋಶದ ಕ್ಯಾನ್ಸರ್, ಹೃದಯಾಘಾತ ಮೊದಲಾದ ಭೀಕರ ರೋಗಗಳಿಗೆ ತುತ್ತಾಗಲಿದ್ದಾರೆ. ಪರಿಸರ ವಿನಾಶದಿಂದ ಮುಂದಿನ ಪೀಳಿಗೆಯ ಜನತೆ ಅಪಾರ ನೋವುಗಳಿಗೆ ಸಿಲುಕಲಿದ್ದಾರೆ. ಜನಜೀವನ ಗಂಡಾಂತರಕ್ಕೆ ಸಿಲುಕಲಿದೆ ಎಂದವರು ಎಚ್ಚರಿಕೆ ನೀಡಿದರು.

‌ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕಾರ್ಯಕ್ರಮವಾಗಬಾರದು. ಪ್ರತಿಯೊಬ್ಬರೂ ತಮ್ಮ ಜನ್ಮ ದಿನದಂದು, ತಮ್ಮ ಮದುವೆ ವಾರ್ಷಿಕೋತ್ಸವ ದಂದು, ತಮ್ಮ ತಂದೆ-ತಾಯಿಗಳ ಜನ್ಮದಿನದಂದು, ತಮ್ಮ ಹಿರಿಯರ ಸ್ಮರಣೆಯಲ್ಲಿ ಪ್ರತಿ ವರ್ಷವೂ ಸಸಿಗಳನ್ನು ನೆಟ್ಟು ಪೋಷಿಸಬೇಕು. ಆ ಮೂಲಕ ಭವಿಷ್ಯದ ಪೀಳಿಗೆಗೆಉತ್ತಮ ಜೀವನ ಕಟ್ಟಿಕೊಡಬೇಕೆಂದವರು ಕರೆ ನೀಡಿದರು.

‌‌ಕನ್ನಡಪರ ಚಿಂತಕರಾದ ಡಾ.ವಿನಯ್ ಮಿರ್ಲೆ ಅವರು ಮಾತನಾಡಿ ಮಕ್ಕಳು ಕಂಫ್ಯೂಟರ್ ತಂತ್ರಜ್ಞಾನ, ಕನ್ನಡದೊಡನೆ ವ್ಯವಹಾರಿಕ ಭಾಷೆಯಾಗಿ ಆಂಗ್ಲ ಭಾಷೆ, ವಿನೂತನ ತಂತ್ರಜ್ಞಾನಗಳನ್ನು ಕಲಿತರೆ ಇಂದಿನ‌ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಗೆಲುವು ಸಾಧಿಸಬಹುದು ಎಂದು ನುಡಿದರು.

- Advertisement -

‌ಆದ್ಯಾತ್ಮಿಕ ಚಿಂತಕ ಗುಣಚಂದ್ರಕುಮಾರ್ ಜೈನ್ ಅವರು ಮಾತನಾಡಿ ಮಕ್ಕಳು ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ, ಹಿರಿಯರಲ್ಲಿ ಗೌರವ, ಕಲಿಕೆಯಲ್ಲಿ ಏಕಾಗ್ರತೆ ಬೆಳೆಸಿಕೊಳ್ಳಬೇಕೆಂದು ನುಡಿದರು.

ಸಾಲಿಗ್ರಾಮದ ಬ್ರಹ್ಮಕುಮಾರಿ ವಿಶ್ವವದ್ಯಾಲಯ ಶಾಖೆಯ ಮುಖ್ಯಸ್ಥರಾದ ಶಿಲ್ಪ ಸಹೋದರಿ ಅವರು ಮಾತನಾಡಿ ಮಕ್ಕಳು ಪರಿಸರ ಸಂರಕ್ಷಣೆಯ ಜೊತೆಗೆ ತಮ್ಮ ಮನಸ್ಸನ್ನು ಶಾಂತಿ, ಏಕಾಗ್ರತೆ, ಸಹೋದರತೆಯ ಕಡೆಗೆ ಪರಿವರ್ತಿಸಬೇಕು. ಆಗ ಅವರ ವಿದ್ಯಾರ್ಥಿ ಜೀವನ ಯಶಸ್ವಿಯಾಗುತ್ತದೆ ಎಂದು ನುಡಿದರು.‌‌

ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀಮತಿ ಕೋಮಲಾ ಅವರು ಕಾರ್ಯಕ್ರಮದ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಾಂಸೃತಿಕ ಚಟುವಟಿಕೆಗಳನ್ನು ಇದೇ ಸಂದರ್ಭದಲ್ಲಿ ಸಾಲಿಗ್ರಾಮದ ಸಾಂಸೃತಿಕ ಚಿಂತಕ ಗುಣಪಾಲಜೈನ್ ಉದ್ಘಾಟಿಸಿದರು. ಬ್ರಹ್ಮಕುಮಾರಿ ಆಶ್ರಮದ ರವಿಕುಮಾರ್ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶಾಂತಕುಮಾರಿ ಸ್ವಾಗತಿಸಿದರು ಹೆಚ್.ಎಸ್.ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು.

ರಾಘವೇಂದ್ರ ವಂದಿಸಿದರು. ನಂತರ ಒಂದು ನೂರು ಮಕ್ಕಳಿಗೆ ಪರಿಸರ ಸಂರಕ್ಷಣಾ ಪ್ರಮಾಣ ವವಚ ಭೋಧಿಸಿ, ಉಚಿತ ಸಸಿಗಳನ್ನು ವಿತರಿಸಲಾಯಿತು .ಜೊತೆಗೆ ಕಾಲೇಜಿನ ಆವರಣದಲ್ಲೂ ಸಸಿಗಳನ್ನು ನೆಡಲಾಯಿತು.

- Advertisement -
- Advertisement -

Latest News

ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ

ಮುಧೋಳ:  ನಗರ ಶಾಮೇಲ್ಸ್ ಪ್ರೌಢ ಶಾಲೆಯ  ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group