spot_img
spot_img

ಪರಿಸರ ಸಂರಕ್ಷಿಸದಿದ್ದರೆ ಮಾನವ ಕುಲದ ವಿನಾಶ-ಡಾ.ಭೇರ್ಯ ರಾಮಕುಮಾರ್

Must Read

- Advertisement -

ಮೈಸೂರು: ಪರಿಸರ ಸಂರಕ್ಷಿಸದಿದ್ದರೆ ಮಾನವನ ಬದುಕು ನಾಶವಾಗುವುದು ಖಚಿತ ಎಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ ನೀಡಿದರು.

ಮೈಸೂರು ಜಿಲ್ಲೆಯ ಸಾಲಿಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ  ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು ಮಾನವನು ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಾ ಬಂದಿದ್ದಾನೆ. ಮನೆಯ ಉಪಕರಣಗಳು,ಉರುವಲಾಗಿ ಬಳಸಲು ಮರಗಳ ನಾಶ ಮಾಡುತ್ತಿದ್ದಾನೆ. ರಸ್ತೆಗಳ ನಿರ್ಮಾಣಕ್ಕಾಗಿ, ರೆಸಾರ್ಟ್ಗಳ ನಿರ್ಮಾಣಕ್ಕಾಗಿ ,ಕೃಷಿ ಚಟುವಟಿಕೆಗಳಿಗಾಗಿ ಅರಣ್ಯ ನಾಶ ನಿರಂತರವಾಗಿ ನಡೆದಿದೆ. ಅರಣ್ಯ ನಾಶದಿಂದಾಗಿ ಕಾಡು ಪ್ರಾಣಿಗಳುಆಹಾರ ನೀರಿಗಾಗಿ ಜನವಸತಿ ಪ್ರದೇಶಗಳಿಗೆ ಬರುತ್ತಿವೆ. ಉಷ್ಣಾಂಶದ ಪ್ರಮಾಣ ಹೆಚ್ಚಾಗುತ್ತಿದ್ದು, ರೋಗ ರುಜಿನಗಳು ತೀವ್ರವಾಗುತ್ತಿವೆ.ಜನರು ಶುದ್ದ ಗಾಳಿಯ ಕೊರತೆಯಿಂದಾಗಿ ಹೃದಯಾಘಾತ, ಶ್ವಾಸಕೋಶದ ಕ್ಯಾನ್ಸರ್ ಮೊದಲಾದ ಭೀಕರ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಾಚೀನ ಕಾಲದಲ್ಲಿ ಎಲ್ಲಾ ಗ್ರಾಮಗಳಲ್ಲೂ ಅರಳಿಕಟ್ಟೆಗಳಿದ್ದವು. ಗ್ರಾಮೀಣ ಜನರು ಇಲ್ಲಿ ಕುಳಿತು ತಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಅರಳಿಮರಗಳು ಅತ್ಯುತ್ತಮ ಆಮ್ಲಜನಕ ನೀಡುವ ಕೇಂದ್ರ ಸ್ಥಳಗಳಾಗಿದ್ದವು. ಅದೇ ರೀತಿಬೇವಿನ ಮರಗಳ ಗಾಳಿಯೂ ರೋಗನಿರೋಧಕ ಶಕ್ತಿ ನೀಡುತ್ತಿತ್ತು.ಆದರೆ ಈಗ ಮರಗಳ ಹನನ ನಿರಂತರವಾಗಿ ನಡೆದಿದೆ. ಮನುಷ್ಯ  ಕರೋನಾ,ಚಿಕನ್ ಗುನ್ಯದಂತಹ ವಿಚಿತ್ರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಸೂರ್ಯನ ಶಾಖವನ್ನು  ನಿಯಂತ್ರಿಸುವ ಓಜೋನ್ ಪದರದಲ್ಲಿ ರಂದ್ರಗಳಾಗುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮನುಷ್ಯ ಈಗಲಾದರೂ ಪರಿಸರ ವಿನಾಶ ತಡೆಗಟ್ಟದಿದ್ದರೆ ಜಗತ್ತಿನ ಮಾನವ ಕುಲವೇ ವಿನಾಶದ ಅಂಚಿಗೆ ತಲುಪಲಿದೆ ಎಂದು ಭೇರ್ಯ ರಾಮಕುಮಾರ್  ಕಳವಳ ವ್ಯಕ್ತಪಡಿಸಿದರು.

- Advertisement -

ಪರಿಸರವನ್ನು ರಕ್ಷಿಸುವಲ್ಲಿ ಯುವಜನತೆಯ  ಪಾತ್ರ ಪ್ರಮುಖವಾದುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜನ್ಮ ದಿನದಂದು,ತನ್ಮ ತಂದೆ-ತಾಯಿಯ ಜನ್ಮ ದಿನದಂದು, ವಿವಾಹ ವಾರ್ಷಿಕೋತ್ಸವ ದಿನದಂದು, ತಾತ-ಅಜ್ಜಿಯ ಸವಿನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿ ನೆಟ್ಟು, ಪೋಷಿಸಬೇಕು. ಆ ಮೂಲಕ ಪರಿಸರ  ಸಂರಕ್ಷಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ನೀರು, ಪರಿಸರ ನೀಡಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದವರು ಕರೆ ನೀಡಿದರು.

ಗ್ರಂಥಾಲಯ ಅಧಿಕಾರಿ ಶ್ರೀಮತಿ ದಿವ್ಯ ಆರಂಭದಲ್ಲಿ ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿಕೊಟ್ಟರು. ಮಕ್ಕಳು ಪರಿಸರ ಕುರಿತಂತೆ ಹಲವು ಪ್ರಶ್ನೆಗಳನ್ನು ಅತಿಥಿಗಳಿಗೆ ಕೇಳಿ ಉತ್ತರ ಪಡೆದರು.

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group