spot_img
spot_img

ಪರಿಸರ ಸಂರಕ್ಷಿಸದಿದ್ದರೆ ಮಾನವ ಕುಲದ ವಿನಾಶ: ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ

Must Read

ಪರಿಸರ ನಾಶದಿಂದ ಮಾನವ ಕುಲ ವಿನಾಶದತ್ತ ಸಾಗುತ್ತಿದೆ. ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕಾರ್ಯವಾಗದೇ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ವಾಗಬೇಕಿದೆ ಎಂದು ಹಿರಿಯ ಸಾಹಿತಿ,ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.

ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ದ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮರಗಳ ನಾಶ ರಸ್ತೆಗಳ ನಿರ್ಮಾಣಕ್ಕೆ, ರೆಸಾರ್ಟ್ ಗಳ ನಿರ್ಮಾಣಕ್ಕೆ, ಹೊಸಬಡಾವಣೆಗಳ ನಿರ್ಮಾಣಕ್ಕೆ ನಿರಂತರವಾಗಿ ನಡೆದಿದೆ. ಇದರಿಂದಾಗಿ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದ್ದು

ಜನಸಾಮಾನ್ಯರು ಶ್ವಾಸಕೋಶದ ಕ್ಯಾನ್ಸರ್, ಪಾರ್ಶ್ವವಾಯು ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ.ಪ್ರತಿ ವರ್ಷವೂ ಭಾರತದಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸುಮಾರು ೧೫ ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಪರಿಸರ ನಾಶದಿಂದಾಗಿ ಭೂಮಿಯ ತಾಪಮಾನ ತೀವ್ರವಾಗಿ ಹೆಚ್ಚುತ್ತಿದೆ. ಹೀಗೇ ತಾಪಮಾನ ಹೆಚ್ಚುತ್ತಾ ಹೋದರೆ 2100 ರ ವೇಳೆಗೆ ಭೂಮಿಯ ಮೇಲೆ ಮನುಷ್ಯ ಬದುಕುವುದೇ ಕಷ್ಟ ವಾಗಲಿದೆ ಎಂದು ಪರಿಸರ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಇಂತಹ ವಿಷಮ ಗಳಿಗೆಯಲ್ಲಿ ನಾವು ಪರಿಸರ ನಾಶ ನಿಲ್ಲಿಸಿ, ಮುಂದಿನ ತಲೆಮಾರಿಗೆ ಉತ್ತಮ ಜೀವನ ನೀಡಬೇಕಿದೆ ಎಂದವರು ನುಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ಪರಿಸರ ಸಂರಕ್ಷಣೆ ತನ್ನ ಮೂಲಭೂತ ಕರ್ತವ್ಯ ಎಂದು ಅರಿತುಕೊಳ್ಳಬೇಕು. ತನ್ನ ಜನ್ಮದಿನದಂದು, ತಮ್ಮ ತಾಯಿಯ ಜನ್ಮದಿನದಂದು, ತನ್ನ ವಿವಾಹ ವಾರ್ಷಿಕೋತ್ಸವದಂದು, ತನ್ನ ಮಕ್ಕಳ ಜನ್ಮ ದಿನದಂದು , ತನ್ನ ತಂದೆ-ತಾಯಿಗಳ ಶ್ರಾದ್ದದ ದಿನದಂದು ಪ್ರತಿ ವರ್ಷವೂ ಒಂದೊಂದು ಸಸಿಯನ್ನು ನೆಡಬೇಕು. ಆ ಮೂಲಕ ಭವಿಷ್ಯದ ಪೀಳಿಗೆಗೆ ಸುಂದರ ಪರಿಸರ ನೀಡಬೇಕು ಎಂದು ಭೇರ್ಯ ರಾಮಕುಮಾರ್ ಕಿವಿಮಾತು ನುಡಿದರು.

ನೀವು ಧರಿಸುವ ಬಟ್ಟೆ ಸುಂದರವಾಗಿಬೇಕು, ನೀವು ಬಳಸುವ ಮೊಬೈಲ್ ಸುಂದರವಾಗಿರಬೇಕು. ನಿಮ್ಮ ಜೀವನ ಸಂಗಾತಿ , ನೀವು ಕೊಳ್ಳುವ ವಾಹನ ಸುಂದರವಾಗಿರಬೇಕೆಂದು ಅಪೇಕ್ಷೆ ಪಡುತ್ತೀರಾ. ಆದರೆ ನೀವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಶುದ್ದವಾಗಿರಬೇಕೆಂದು ನೀವೇಕೆ ಬಯಸಬಾರದು ಎಂದು ಯುವಜನತೆಯನ್ನು ಪ್ರಶ್ನಿಸಿದ ಅವರು ಪರಿಸರ ಸಂರಕ್ಷಣೆ ಯನ್ನೂ ಸಹ ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಿ ಎಂದು ಯುವ ಜನತೆಗೆ ಕಿವಿಮಾತು ನುಡಿದರು.

ಹಿರಿಯ ಧಾರ್ಮಿಕ ಪ್ರವಚನಕಾರರಾದ ಎಸ್.ಬಿ.ಗುಣಚಂದ್ರ ಕುಮಾರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಪರಿಸರ ಸಂರಕ್ಷಿಸುವ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ದ ಕಾರ್ಯ ಶ್ಲಾಘನೀಯ. ಮನುಷ್ಯರು ಪರಿಸರ ಸಂರಕ್ಷಣೆಯ ಜೊತೆಗೆ ತಮ್ಮ ಮನಸ್ಸನ್ನೂ ಸಹ ಒಳ್ಳೆಯ ಚಿಂತನೆಗಳಿಂದ ಪರಿಶುದ್ದಗೊಳಿಸಿ ಕೊಳ್ಳಬೇಕು. ಆಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ನುಡಿದರು.

ಕಾರ್ಯಕ್ರಮ ದ ಆದ್ಯಕ್ಷತೆ ವಹಿಸಿದ್ದ ಹಿರಿಯ ಸಮರ್ಪಿತ ಸಹೋದರರಾದ ಪ್ರಾಣೇಶ್ ಅಣ್ಣ ಅವರು ಮಾತನಾಡಿ ಸಮಾಜ ಹಾಗೂ ರಾಷ್ಟ್ರ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಮನುಷ್ಯನ ಮನಸ್ಸೇ ಕಾರಣ. ಪ್ರತಿ ದಿನವೂ ಮನುಷ್ಯ ಸುಮಾರು ಒಂದು ಗಂಟೆಯ ಕಾಲ ತನ್ನ ಮನಸ್ಸಿನ ಜೊತೆ ತಾನೇ ಮಾತನಾಡಬೇಕು. ತನಗೆ ಉಂಟಾದ ಎಲ್ಲ ಸುಖ-ದುಃಖಗಳನ್ನು , ಕಷ್ಟ-ಸುಖಗಳನ್ನು ಕುರಿತು ತನ್ನ ಮನಸ್ಸಿನ ಜೊತೆ ತಾನೇ ಮಾತನಾಡಿಕೊಳ್ಳಬೇಕು.ತನ್ನ ಮನಸ್ಸಿನ ಎಲ್ಲಾ ಮಲಿನ ಗುಣಗಳನ್ನೂ ತ್ಯಜಿಸುತ್ತಾ ಸಾಗಬೇಕು.ಆಗ ಆತನ ಜೀವನ ಉನ್ನತಿಯತ್ತ ಸಾಗುವುದು ಎಂದು ನುಡಿದರು.

ಭಾರತ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ದ ಅಂಗವಾಗಿ ಪ್ರಜಾಪಿರತ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯ ವು ಜೂನ್ 5. ರಿಂದ ಆಗಸ್ಟ್‌ 25 ರ ವರೆಗೆ ವಿಶ್ವದ 196 ರಾಷ್ಟ್ರಗಳ ಲ್ಲಿ ಸುಮಾರು 75 ಲಕ್ಷ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅವರು ವಿವರಿಸಿದರು.ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ದ ಸಾಲಿಗ್ರಾಮ ಶಾಖೆಯ ಹಿರಿಯ ಸಹೋದರರಾದ ಬೊಮ್ಮರಾಯಿಗೌಡ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶಾಖೆಯ ಸಂಚಾಲಕರಾದ ಶಿಲ್ಪಾ ಸಹೋದರಿ ವಂದಿಸಿದರು. ನಂತರ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಿಂದ ಸಸಿ ನೆಡಿಸಲಾಯಿತು. ಸುಮಾರು ಐವತ್ತಕ್ಕೂ ಹೆಚ್ಚು ಮಹಿಳೆಯರಿಗೆ ಸಸಿಗಳನ್ನು ವಿತರಿಸಲಾಯಿತು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!