ಭೌತಿಕ ಶಕ್ತಿಯಿಂದ ಬುದ್ದಿ ಬೆಳೆದರೆ, ಆಧ್ಯಾತ್ಮಶಕ್ತಿಯಿಂದ ಸತ್ಯ ಜ್ಞಾನ ಬೆಳೆಯುತ್ತದೆ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಅನುಮಂಶೀಯ ರೋಗವನ್ನು ತಡೆಗಟ್ಟಲು ಧರ್ಮ ಕಾರ್ಯದಿಂದ ಸಾಧ್ಯ. ವಿಜ್ಞಾನ ಜಗತ್ತಿನಲ್ಲಿ ಹೆಚ್ಚಾಗುತ್ತಿರುವ ಅಸಂಖ್ಯಾತ ಹೊಸಹೊಸ ರೋಗಕ್ಕೆ ಕಾರಣವೆ ಅಜ್ಞಾನದ ವ್ಯವಹಾರಿಕ ಜೀವನ ಶೈಲಿ,ಆಹಾರ ವಿಹಾರವಾಗಿದೆ. ಹಿಂದಿನ ಕಾಲದಲ್ಲಿಯೂ ರೋಗವಿತ್ತು.

ಅದಕ್ಕೆ ಧಾರ್ಮಿಕ ರೀತಿಯಲ್ಲಿ ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳುವ ಜ್ಞಾನವಿತ್ತು. ಆದರೆ, ಯಾವಾಗ ಮಾನವನ ಅಜ್ಞಾನ ಹೆಚ್ಚಾಗುತ್ತಾ ಭೌತಿಕಾಸಕ್ತಿಯಲ್ಲಿ ವಿಪರೀತ ಬುದ್ದಿಶಕ್ತಿ ಬೆಳೆದು ಆಸೆ ಆಕಾಂಕ್ಷೆಗಳು ಗಗನದೆತ್ತರ ಹೋಯಿತೋ ಅಲ್ಲಿರುವ ಗ್ರಹಗಳಿಂದ ಗ್ರಹಚಾರವೂ ಸುತ್ತಿಕೊಂಡು ರೋಗಗಳು ಬೆಳೆದವು.

ನಮ್ಮ ಹಿಂದಿನ ಹಿರಿಯರ ಕಾಯಕದಲ್ಲಿದ್ದ ಶ್ರದ್ದೆ, ಭಕ್ತಿ, ಪ್ರೀತಿ, ವಿಶ್ವಾಸ, ನಂಬಿಕೆಯಿಂದ ದೂರವಾದ ಮನಸ್ಸಿನಲ್ಲಿ ಹಿರಿಯರ ಜ್ಞಾನವಿರೋದಿಲ್ಲ. ಆದರೂ ಅವರ ಆಸ್ತಿ,ಅಂತಸ್ತು ಮಕ್ಕಳು ಪಡೆಯುವುದರಿಂದ ಅದರ ಸದ್ಬಳಕೆ ಮಾಡಿಕೊಳ್ಳದೆ ಸ್ವಾರ್ಥಕ್ಕಷ್ಟೇ ಬಳಸಿ ಅವರ ಧರ್ಮ, ಕರ್ಮದಿಂದ ಜ್ಞಾನದಿಂದ ದೂರವಿದ್ದರೆ ಅವರಲ್ಲಿದ್ದ ರೋಗವೂ ಬಳುವಳಿಯಾಗಿ ಬರುತ್ತದೆ.

- Advertisement -

ಜೀವ ಹೋದ ಮೇಲೆ ಅದರ ಜೊತೆಗೆ ಅವರಲ್ಲಿದ್ದ ಎಲ್ಲಾ ಜೀವಶಕ್ತಿ, ಪ್ರಾಣಶಕ್ತಿ, ದೈವಶಕ್ತಿ, ಅಸುರಶಕ್ತಿಯು ಪ್ರಕೃತಿಯಲ್ಲಿ ವಿಲೀನವಾಗುತ್ತದೆ. ಹೀಗಾಗಿ ಜ್ಞಾನಿಗಳು ಮೃತದೇಹವನ್ನು ದಹನಕ್ರಿಯೆ ಮೂಲಕ ಸಂಸ್ಕಾರ ನಡೆಸೋದು. ಪಂಚಭೂತಗಳಿಂದಾದ ದೇಹವನ್ನು ತಿರುಗಿ ಪಂಚಭೂತಗಳಿಗೆ ನೀಡಿದರೆ ಆತ್ಮಕ್ಕೆ ತೃಪ್ತಿ ಮುಕ್ತಿ ಎನ್ನುತ್ತಾರೆ.

ಸಂಸಾರದಲ್ಲಿದ್ದವರಲ್ಲಿ ಹೆಚ್ಚಿನ ಮೋಹ ಮಾಯೆ ಆವರಿಸಿರುವುದರಿಂದ ಸಂನ್ಯಾಸಿಗಳು ಮೃತರಾದಾಗ ಮಾಡುವ ಸಮಾಧಿಯನ್ನು ಪೂಜಿಸಲಾಗುತ್ತದೆ. ಸಮಾಜಕ್ಕಾಗಿ ದುಡಿದ ಜೀವವನ್ನು ಸಮಾಜದ ಜನತೆ ಗೌರವದಿಂದ ಕಾಣಬೇಕಾದರೆ ಇದು ಅಗತ್ಯವೆನ್ನುತ್ತಾರೆ.

ಭೂಮಿ ಒಳಗೇ ದೇಹವನ್ನು ಸಮಾಧಿ ಮಾಡಿದಾಗ ಅವರಲ್ಲಿದ್ದ ಸಾತ್ವಿಕ ಶಕ್ತಿ ಭೂಮಿ ಒಳಗಿರುತ್ತದೆ.ಮನುಕುಲಕ್ಕೆ ಒಳಿತಾಗುತ್ತದೆ ಎನ್ನುವ ಕಾರಣವಿದಾಗಿದೆ. ಆದರೆ, ಇದರ ಬಗ್ಗೆ ಸರಿಯಾಗಿ ತಿಳಿಯದವರು ಅಸುರ ಶಕ್ತಿಯನ್ನು ಹೊಂದಿರುವವರ ದೇಹವನ್ನು ಸಮಾಧಿ ಮಾಡಿ ಭೂಮಿಯ ತೂಕ ಹೆಚ್ಚಿಸಿ ಭೂಮಿಯಲ್ಲಿ ಅಧರ್ಮ ಬೆಳೆದಿದೆ.

ಮಾನವನೊಳಗೆ ಇರುವ ಸತ್ಯಜ್ಞಾನದಿಂದ ಭೂಮಿಯಲ್ಲಿ ಶಾಂತಿ, ನೆಮ್ಮದಿ ಸಂತೋಷ, ಸುಖ ಜೀವನವಿತ್ತು. ಆಧ್ಯಾತ್ಮ ಸತ್ಯದಿಂದ ಜೀವನ ನಡೆಸಿದವರಲ್ಲಿ ಅಹಂಕಾರ ಸ್ವಾರ್ಥ ಹೆಚ್ಚಾಗಿ ಕಾಣೋದಿಲ್ಲ. ಇದನ್ನು ದೈವಗುಣವೆಂದರು. ಅನುವಂಶೀಯತೆಯು ಆಧ್ಯಾತ್ಮದ ಪ್ರಕಾರ ನಡೆದರೆ ಆರೋಗ್ಯ ಹೆಚ್ಚಾಗುತ್ತದೆ. ಭೌತಿಕದಲ್ಲಿ ನಡೆದರೆ ರೋಗ ಹೆಚ್ಚಾಗುತ್ತದೆ.

ಅಂದರೆ ಗುರುವಾದವರು ಮೊದಲು ತಮ್ಮನ್ನು ತಾವು ಆಳಿಕೊಳ್ಳಲು ಬೇಕಾದಷ್ಟು ಆಹಾರ ಸೇವಿಸಿ ಆತ್ಮರಕ್ಷಣೆಯಲ್ಲಿ ಬದುಕೋದನ್ನು ಕಲಿತರೆ ಶಿಷ್ಯರೂ ಅದೇ ಮಾರ್ಗ ಹಿಡಿಯಬಹುದು. ಗುರುವೇ ಭೌತಿಕಾಸಕ್ತಿ ಹೆಚ್ಚಿಸಿಕೊಂಡು ಅತಿಯಾದ ಸಂಪಾದನೆಯಿಂದ ಮನರಂಜನೆಗಿಳಿದರೆ ಶಿಷ್ಯರೂ ಅವರ ಹಿಂದೆ ನಡೆಯುತ್ತಾರೆ.

ಹೀಗಾಗಿ ಗುಣ, ಜ್ಞಾನವೂ ಅನುವಂಶೀಯವಾಗಿರುತ್ತದೆ. ಆಸ್ತಿ ಬೇಕು. ಕರ್ಮ, ಧರ್ಮ, ರೋಗ,ಕಷ್ಟ ನಷ್ಟ ಬೇಡವೆಂದರೆ ಪ್ರಕೃತಿ ವಿರುದ್ದ ನಡೆದಂತೆ. ಹೀಗಾಗಿ ಇತ್ತೀಚಿನ ದಿನದಲ್ಲಿ ಪಿತೃಕಾರ್ಯ ಮಾಡದೆಯೇ ಪಿತ್ರಾರ್ಜಿತ ಆಸ್ತಿ ಪಡೆದವರ ಜೀವನದಲ್ಲಿ ಸಂತೋಷ, ತೃಪ್ತಿ, ಆರೋಗ್ಯ ಕಡಿಮೆಯಾಗಿ ಸಮಾಜದಲ್ಲಿ, ಸಂಸಾರದಲ್ಲಿ ಸಮಸ್ಯೆಗಳು ಬೆಳೆಯುತ್ತಿದೆ.

ಇದಕ್ಕೆ ಪರಿಹಾರ ಮಾರ್ಗ ಧಾರ್ಮಿಕ ಕಾರ್ಯದಲ್ಲಿದೆ. ಇದು ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆಯಿಲ್ಲದೆ ನಡೆಸುವುದೂ ಅಗತ್ಯವಾಗಿದೆ. ದೇವಸ್ಥಾನ ಕಟ್ಟಿಕೊಂಡು ಜನರ ಹಣದಲ್ಲಿ ಪೂಜೆ ಮಾಡಿ ತನ್ನ ಅಧಿಕಾರ, ಹಣ , ಸ್ಥಾನಮಾನ ಬೆಳೆದಿದ್ದರೆ ನಾನೇ ದೇವರಾಗೋದಿಲ್ಲವಲ್ಲ.

ಅದಕ್ಕೆ ಪ್ರತಿಯಾಗಿ ದೈವಶಕ್ತಿ ನಮ್ಮಲ್ಲಿ ಬೆಳೆಸಿಕೊಂಡು ಸಮಾಜ ಸೇವೆಮಾಡಿದ್ದರೆ ನಮ್ಮ ಜೀವ ದೈವಶಕ್ತಿಯಲ್ಲಿ ಐಕ್ಯವಾಗುತ್ತದೆ. ಇದು ಹಿಂದಿನ ಮಹಾತ್ಮರುಗಳು ತಿಳಿದು ಕೊನೆಗಾಲದಲ್ಲಿ ಭೌತಿಕ ಸಂಪತ್ತು ತ್ಯಜಿಸಿ ಸಂನ್ಯಾಸಿಗಳಾದವರು ಈಗ ಪೂಜನೀಯರಾಗಿದ್ದಾರೆ. ಆದರೆ, ಈಗ ಮಕ್ಕಳು, ಮೊಮ್ಮಕ್ಕಳ ಕಾಲದವರೆಗೆ ಭೌತಿಕ ಆಸ್ತಿ ಮಾಡಿಟ್ಟು ತನ್ನ ನಂತರದ ಅಧಿಕಾರವನ್ನು ಅವರೆ ಪಡೆಯುತ್ತಾ ರಾಜಕೀಯದಿಂದ ನಿವೃತ್ತಿ ಪಡೆಯದೆ ದೇವರನ್ನು, ದೇಶವನ್ನು ಆಳೋರಿಗೆ ಜನಬಲ, ಹಣಬಲ ಹೆಚ್ಚಾಗಿದೆ.

ಇದೊಂದು ಸಮಾಜ ಸೇವೆ ಎನ್ನಲಾಗದು.ಸಮಾಜದ ಋಣ ಹೆಚ್ಚಾದಂತೆ ರೋಗದ ಸಮಸ್ಯೆಗೆ ಪರಿಹಾರ ಕಾಣೋದಿಲ್ಲ. ಹೀಗಾಗಿ ಯಾವುದೇ ಆಗಿರಲಿ ಅತಿಯಾದರೆ ಗತಿಗೇಡು. ರಾಜಕೀಯದಿಂದ ರೋಗ ಹೋಗೋದಿಲ್ಲ.ರಾಜಯೋಗದಿಂದ ರೋಗ ಹೋಗುತ್ತದೆ ಈಗಿನ ರಾಜಕೀಯತೆ ವಂಶಪಾರಂಪರ್ಯವಾಗಿ ಬೆಳೆದು, ವಿಪರೀತ ಭ್ರಷ್ಟಾಚಾರಕ್ಕೆ ತಿರುಗಿ, ಜನರನ್ನು ದಾರಿ ತಪ್ಪಿಸಿ ದೇಶದಲ್ಲಿ ರೋಗಿಗಳ ಸಂಖ್ಯೆ ಬೆಳೆದಿದೆ.

ಯಾವುದೇ ವ್ಯಕ್ತಿಯಾಗಲಿ, ಪಕ್ಷವಾಗಲಿ, ಧರ್ಮವಾಗಲಿ ದೇವರಾಗಲಿ ಇಡೀ ವಿಶ್ವವನ್ನು ಆಳೋದಕ್ಕಾಗದು. ದೇವನೊಬ್ಬನೆ ನಾಮ ಹಲವು ಅದ್ವೈತ ದೊಳಗೆ ದ್ವೈತ ಕಣ್ಣಿಗೆ ಕಂಡರೂ ಒಪ್ಪಿಕೊಳ್ಳಲಾಗದೆ ಭಿನ್ನಾಭಿಪ್ರಾಯ ಹೆಚ್ಚಿಸಿರೋದೆ ವಂಶಪಾರಂಪರ್ಯವಾಗಿ ಬಂದಿರುವರೋಗ ಎನ್ನಬಹುದೆ? ಮೂಲ ತತ್ವದ ಉದ್ದೇಶ ಒಗ್ಗಟ್ಟು.

ನಂತರದ ತತ್ವದಲ್ಲಿಯೂ ಒಗ್ಗಟ್ಟಿನಲ್ಲಿ ಬಲವಿದೆ ಎಂದರೆ ತಪ್ಪಲ್ಲ. ನನ್ನ ನಾನು ಅರ್ಥ ಮಾಡಿಕೊಳ್ಳಲು ನನ್ನಲ್ಲಿ ಆ ದೈವಶಕ್ತಿ ಬೆಳೆಸಿಕೊಳ್ಳಬೇಕು. ತತ್ವವನ್ನು ಪ್ರಚಾರಮಾಡಿ ನನ್ನ ನಾನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಇದು ಮುಂದೆ ಸಮಾಜಕ್ಕೆ ಅಪಾಯ. ನನ್ನ ಹಿಂದೆ ಅನೇಕರಿದ್ದಾರೆಂದರೆ ನನ್ನಲ್ಲಿ ಶಕ್ತಿಯಿದೆ ಎಂದರ್ಥ. ನನ್ನ ಹಿಂದೆ ಯಾರೂ ಇಲ್ಲವೆಂದರೆ ನನ್ನನ್ನು ಸ್ವಯಂ ಶಕ್ತಿಯೇ ನಡೆಸುತ್ತಿರೋದೆಂದರ್ಥ.

ವ್ಯಕ್ತಿಗಳನ್ನು ಬೆಳೆಸೋದು ಕಷ್ಟ.ಈ ಕಷ್ಟದ ಕೆಲಸಕ್ಕೂ ಆಧ್ಯಾತ್ಮ ಶಕ್ತಿಯಿರಬೇಕು. ಭೌತಿಕ ಶಕ್ತಿಯಿಂದ ಬುದ್ದಿ ಬೆಳೆದರೆ, ಆಧ್ಯಾತ್ಮಶಕ್ತಿಯಿಂದ ಸತ್ಯ ಜ್ಞಾನ ಬೆಳೆಯುತ್ತದೆ. ನಾನು ದೇವರನ್ನು ನಡೆಸುವುದಕ್ಕೂ, ದೇವರೆ ನನ್ನ ನಡೆಸುವುದಕ್ಕೂ ವ್ಯತ್ಯಾಸವಿದೆ. ದೇವರೆ ನನ್ನ ನಡೆಸೋದನ್ನು ವಂಶಪಾರಂಪರ್ಯವಾಗಿ ಮುಂದೆ ಹೋಗದೆ ನಾನೇ ದೇವರನ್ನು ನಡೆಸೋ ರಾಜಕೀಯ ಬೆಳೆದಾಗಲೆ ರೋಗ ಹೆಚ್ಚುವುದು.

ರೋಗ ಮಾನವನಿಗೆ ಬರದೆ ಮರಕ್ಕೆ ಬರುವುದೆ? ಎನ್ನುತ್ತಿದ್ದರು. ಆದರೆ ಈಗ ಮರಗಳಿಗೂ ಅಂಟಿಕೊಳ್ಳುವಷ್ಟು ರೋಗ ಪರಿಸರದ ಮಾಲಿನ್ಯದಿಂದ ಹೆಚ್ಚಾಗಿದೆ. ಚರಾಚರದಲ್ಲಿಯೂ ಅಡಗಿರುವ ಜೀವ ಶಕ್ತಿ ಮಾನವನೊಳಗೂ ಇದೆ. ಮಾನವ ಅದನ್ನು ದುರ್ಬಳಕೆ ಮಾಡಿಕೊಂಡರೆ ಪರಿಸರದ ಜೀವಕ್ಕೂ ಹಾನಿಯಾಗುತ್ತದೆ ಹೀಗಾಗಿ ಮಾನವನೆ ತನ್ನ ಈ ಕೆಟ್ಟಕರ್ಮಕ್ಕೆ ತಕ್ಕಂತೆ ಹೊಸಹೊಸ ರೋಗಕ್ಕೆ ಒಳಗಾಗುತ್ತಿರುವುದೆನ್ನಬಹುದು.

ಮಾಡಿದ್ದುಣ್ಣೋ ಮಹಾರಾಯ, ಏನು ಕೊಡುವೆವೋ ಅದೇ ತಿರುಗಿ ಪಡೆಯುವುದು. ಕರ್ಮಫಲಕ್ಕೆ ಕರ್ಮವೆ ಕಾರಣ. ಸತ್ಕರ್ಮ ವಾದರೆ ಸದ್ಗತಿ, ದುಷ್ಕರ್ಮವಾದರೆ ದುರ್ಗತಿ. ಇದರಿಂದಾಗಿ ಭೌತಿಕಾಸಕ್ತಿ ಧಾರ್ಮಿಕವಾಗಿ ತಿಳಿದು ಹೆಚ್ಚಿಸಿಕೊಂಡು ಯೋಗದಿಂದ ರೋಗವನ್ನು ದೂರಮಾಡಿದರೆ ಆರೋಗ್ಯಕರ ಜೀವನ ಕಾಣಬಹುದು.

ಕೊಟ್ಟು ಮರೆಯುವುದು ಮಹಾತ್ಮರು, ಕೊಟ್ಟು ಪಡೆಯುವುದು ಮಾನವರು. ಕೊಡದೆ ಪಡೆಯುವವರು ದಾನವರು. ದಾನವಕುಲ ಬೆಳೆಸಲು ಭೂಮಿಗೆ ಬಂದರೆ ಧರ್ಮವೆ? ಸಕ್ಕರೆ ಖಾಯಿಲೆ ಶ್ರೀಮಂತ ರ ರೋಗವೆನ್ನುತ್ತಿದ್ದರು. ಈಗಿದು ಬಡವರಿಗೂ ಬರುತ್ತಿದೆ. ಕಾರಣ ಬಡವರು ಶ್ರೀಮಂತರ ಹಿಂದೆ ನಡೆದು ತಮ್ಮ ಮೂಲ ಧರ್ಮ ಕರ್ಮ ಬಿಟ್ಟು ಅವರ ಹಣದ ಋಣದಲ್ಲಿದ್ದರೆ ಅವರ ಖಾಯಿಲೆಯೂ ಬಳುವಳಿಯಾಗಿ ಇರುತ್ತದೆ.

ಸೂಕ್ಮವಾದ ಆಧ್ಯಾತ್ಮ ಸತ್ಯ ಅರ್ಥ ವಾಗದೆ ಎಲ್ಲರೂ ಮಾಡುತ್ತಾರೆ. ನಾನೂ ಮಾಡುತ್ತೇನೆ ಎಂದಾಗ ಎಲ್ಲರಿಗೂ ಆಗೋದೆ ನಮಗೂ ಆಗೋದೆಲ್ಲವೆ. ರೋಗ ಎಲ್ಲರಿಗೂ ಬರುತ್ತಿದೆ ಎಂದಾಗ ಇದನ್ನು ಅನುವಂಶೀಯ ರೋಗವೆನ್ನಬಹುದೆ? ಸಾಮಾಜಿಕ ಪಿಡುಗು ಒಬ್ಬರಿಂದ ಒಬ್ಬರಿಗೆ ದಾಟುತ್ತದೆ.

ಮನುಕುಲ ಒಂದೇ ಅಲ್ಲವೆ? ಕೊರೊನ ವನ್ನೇ ಹಲವಾರು ತಳಿಗಳಲ್ಲಿ ಹೆಸರಿಸಲಾಗುತ್ತಿದೆ. ಅಂದರೆ ಆ ಆ ದೇಶದ ಜನತೆಯ ಆಹಾರ, ವಿಹಾರದಿಂದ ಹುಟ್ಟಿದ ವೈರಸ್ ಕಣ ಬದಲಾಗುತ್ತಿರುತ್ತದೆ. ಇದನ್ನು ತಡೆಯಲು ನಮ್ಮ ನಮ್ಮ ಆಹಾರ,ವಿಹಾರ,ಧರ್ಮಕರ್ಮದ ಶಿಕ್ಷಣ ಶುದ್ದವಾಗಿಟ್ಟುಕೊಂಡರೆ, ಇಂದಿನ ಜನತೆ ಅನುಭವಿಸುತ್ತಿರುವ ರೋಗ ಮುಂದಿನ ಪೀಳಿಗೆಗೆ ದಾಟದೆ ಶಾಂತವಾಗಬಹುದು.

ಹೊರಗಿನ ಔಷಧಕ್ಕಿಂತ ಒಳಗಿನ ಜ್ಞಾನದ ಔಷಧ ರೋಗದಿಂದ ಬಿಡುಗಡೆ ಕೊಡುತ್ತದೆ ಎನ್ನುವುದು ಆಧ್ಯಾತ್ಮ ಸತ್ಯ. ಇದಕ್ಕೆ ಹೆಚ್ಚು ಜನರು ಸಹಕರಿಸದ ಕಾರಣವೆ ಹೊರಗಿನಿಂದ ಔಷಧ ನೀಡಿ ತಾತ್ಕಾಲಿಕ ಪರಿಹಾರ ಕಾರ್ಯ ನಡೆದಿದೆ. ಅನುವಂಶೀಯ ರೋಗ ದೇಹದೊಳಗೆ ಬಂದ ಹಾಗೆ ದೇಶದೊಳಗೂ ಆವರಿಸಿದೆ. ಭ್ರಷ್ಟಾಚಾರವೂ ಒಂದು ರೋಗವೇ. ಇದಕ್ಕೆ ಪರಿಹಾರ ಶಿಷ್ಟಾಚಾರದ ಶಿಕ್ಷಣ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!