ಜೆಡಿಎಸ್ ಗೆ ಅಧಿಕಾರ ನೀಡಿದರೆ ರೈತರ ಕುಟುಂಬ ಮೇಲೆತ್ತುವೆ – ಕುಮಾರಸ್ವಾಮಿ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಸಿಂದಗಿ: ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗಳು ಸೆಮಿಫೈನಲ್ ಮ್ಯಾಚ್ ಆಗಿದೆ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸಂಪೂರ್ಣ ಅಧಿಕಾರ ನೀಡಿದ್ದಾದರೆ ಪಂಚತಂತ್ರ ಯೋಜನೆಗಳ ಮೂಲಕ ರೈತರ ಕುಟುಂಬಗಳನ್ನು ಮೇಲೆತ್ತುವ ಕಾರ್ಯ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಬಾಗಲಕೋಟ, ವಿಜಯಪುರ ರೈತರ 2 ಲಕ್ಷ ಜಮೀನುಗಳಿಗೆ ಸುಮಾರು 15 ಸಾವಿರ ಕೋಟಿ ವೆಚ್ಚದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, 1994ರಲ್ಲಿ ಗುತ್ತಿಬಸವಣ್ಣ ಏತನೀರಾವರಿ ಮೂಲಕ ಸಂಪೂರ್ಣ ನೀರಾವರಿ ಯೋಜನೆ ಪ್ರಥಮವಾಗಿ ಕಲ್ಪಿಸಿಕೊಟ್ಟವರು ಮಾಜಿ ಪ್ರಧಾನಿ ದೇವೇಗೌಡರು.

ದಿ.ಎಂ.ಸಿ.ಮನಗೂಳಿಯವರು ಪಕ್ಷದ ಪರವಾಗಿ ಸ್ಪರ್ಧಿಸಿ ಸೋತರು ಗೆದ್ದರು. ಪಕ್ಷವನ್ನು ಬಿಡದ ಆ ಮನುಷ್ಯ ಪಕ್ಷದ ಕಟ್ಟಾಳು ಅವರಿಗೆ ಜೀವಿತ ಅವಧಿ ಇರುವರೆಗೂ ಮಂತ್ರಿಯನ್ನಾಗಿ ಮಾಡಿದ್ದೇನೆ. ಕಳೆದ 2018ರ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಈ ಕ್ಷೇತ್ರಕ್ಕೆ 92 ಕೋಟಿ ವೆಚ್ಚದಲ್ಲಿ ತೋಟಗಾರಿಕೆ ಕಾಲೇಜು ಮಂಜೂರು ಅಲ್ಲದೆ ಆಲಮೇಲವನ್ನು ತಾಲೂಕನ್ನಾಗಿ ಘೋಷಣೆ ಮಾಡಿದ್ದೇನೆ ಅದಕ್ಕೆ ಜೆಡಿಎಸ್ ಅಭ್ಯರ್ಥಿಯ ಪರ ಮತಯಾಚನೆ ಮಾಡುವ ಹಕ್ಕು ನಮಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣವಾಗಿದೆ ವಿನಃ ಜೆಡಿಎಸ್ ಪಕ್ಷವಲ್ಲ. ವಿನಾಕಾರಣ ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಅದಕ್ಕೆ ಬಲಿಯಾಗದೇ ಅಭಿವೃದ್ಧಿಯ ಚಿಂತನೆಯುಳ್ಳ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.

- Advertisement -

ಅಭ್ಯರ್ಥಿ ನಾಜೀಯಾ ಶಕೀಲ ಅಂಗಡಿ ಮಾತನಾಡಿ, ಇಡೀ ದೇಶದಲ್ಲಿಯೇ ರೈತರ ಸಂಪೂರ್ಣ ಸಾಲ ಮಾಡಿದ ಪಕ್ಷವೆಂದರೆ ಅದು ಕುಮಾರಣ್ಣರ ಜೆಡಿಎಸ್ ಪಕ್ಷವಾಗಿದೆ. ಸಮಾಜ ಸೇವಕ ಐ. ಬಿ.ಅಂಗಡಿ ವಕೀಲರು ಮತ್ತು ದಿ.ಎಂ.ಸಿಮನಗೂಳಿಯವರು ಕಟ್ಟಾ ಜೆಡಿಎಸ್ ಪಕ್ಷದವರು ಅಂತೆಯೇ ಅವರ ಗುರಿ ಒಂದೇ ಆಗಿದ್ದವು ಜೆ.ಎಚ್.ಪಟೇಲ ಸರಕಾರದಲ್ಲಿ ಎಂ.ಎಸ್.ಐ ಎಲ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಅಕಾಲಿಕ ನಿಧನದಿಂದ ಅಂಗಡಿಯವರ ಮನೆತನವು ಯಾವ ಪಕ್ಷದ ಮನೆ ಬಾಗಿಲು ತಟ್ಟಿಲ್ಲ. ಆ ಕಾರಣಕ್ಕೆ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಅವರು ಅಂಗಡಿ ಮನತನದ ಮೇಲೆ ಇಟ್ಟ ಭರವಸೆಯನ್ನು ಹುಸಿಗೊಳಿಸುವುದಿಲ್ಲ ಅಂಗಡಿ ಮನೆಯ ಸೊಸೆ ಎಂದು ನೋಡದೇ ಮನೆ ಮಗಳೆಂದು ಮತ ನೀಡಿ ಆಶೀರ್ವದಿಸಿ ಎಂದು ಮತಯಾಚನೆ ಮಾಡಿದರು.

ಹಾಸನ ಜಿಲ್ಲೆಯ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು, ಎಂ.ಸಿ.ಮನಗೂಳಿಯವರ ಮಾತಿಗೆ ಕಟ್ಟುಬಿದ್ದು ಈ ಭಾಗದಲ್ಲಿ ಸಂಪೂರ್ಣ ನೀರಾವರಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಮನಗೂಳಿ ಮನೆತನಕ್ಕೆ ಜೆಡಿಎಸ್‍ದಿಂದ ಏನು ಅನ್ಯಾಯವಾಗಿದೆ. ಕೊನೆಯಲ್ಲಿ ಮಂತ್ರಿ ಮಾಡಿದ್ದು ನಮ್ಮ ತಪ್ಪೆ, ಅವರು ಬದುಕಿದ್ದರೆ ಅವರ ಮಕ್ಕಳನ್ನು ಬೇರೆ ಪಕ್ಷದಲ್ಲಿ ನೋಡುತ್ತಿರಲ್ಲಿಲ್ಲ ಎಂದು ಹೇಳಿದ ಅವರು ಕಾಂಗ್ರೆಸ್ ಪಕ್ಷದಲ್ಲಿ 10 ಜನ ಮುಸ್ಲಿಮರಿದ್ದಾರೆ ಎಂದರೆ ಅದು ಜೆಡಿಎಸ್ ಪಕ್ಷದ ಕೊಡುಗೆ. ಅವರನ್ನು ಬೆಳೆಸಲಿಕ್ಕೆ ಅವಕಾಶ ಕೊಡಿ. ಕೆಟ್ಟ ಸಂದೇಶ ಕಳಿಸಿ ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ. ಅವಳಿ ಜಿಲ್ಲೆಯ ರೈತರಿಗೆ ನ್ಯಾಯ ಕೊಡಿಸುವಲ್ಲಿ ಅಲ್ಲದೆ ನೀರಾವರಿ ಹರಿಸಿದ್ದು ಸತ್ಯ ಆಗಿದ್ದರೆ ಈ ಹೆಣ್ಣು ಮಗಳು ಗೆಲ್ಲುವುದು ಅಷ್ಟೆ ಸತ್ಯ ಎಂದು ಹೇಳಿದರು.

ಬಾಲ್ಕಿ ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಈ ಕ್ಷೇತ್ರದಲ್ಲಿ ಸಂಪೂರ್ಣ ಮಾಡಿದ ಮಹನೀಯರ ಪ್ರತಿಮೆಗಳನ್ನು ಪ್ರತಿಸ್ಥಾಪನೆ ಮಾಡಿದ ಪ್ರಥಮ ಕ್ಷೇತ್ರ ವಾಗಿದೆ. ಆ ಕಾರಣಕ್ಕೆ ಮನಗೂಳಿ ಮನೆತನ ಜೀವಿತಾವಧಿ ಇರುವವರೆಗೆ ಜೆಡಿಎಸ್ ಪಕ್ಷದಲ್ಲೆ ಇರಬೇಕಾಗಿತ್ತು ಆದರೆ ಯಾವ ಕಾರಣಕ್ಕೆ ಪಕ್ಷ ತೊರೆದಿದ್ದಾರೆ ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯೇ ಇರಲಿಲ್ಲ ಅ ಕಾರಣಕ್ಕೆ ಜೆಡಿಎಸ್ ಕುಟುಂಬ ಸದಸ್ಯನನ್ನು ಕಣಕ್ಕಿಳಿಸಿದೆ. ಬಿಜೆಪಿ ಪಕ್ಷವಂತೂ ಒಂದೇ ವರ್ಷದಲ್ಲಿ 2 ಮುಖ್ಯಮಂತ್ರಿ ಗಳನ್ನು ಮಾಡಿದೆ ಮುಂದೆ ಏನಾಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ ಎಂದರು

ಜೆಡಿಎಸ್ ಸಂಸದ ಅಭ್ಯರ್ಥಿ ಸುನಿತಾ ಚವ್ಹಾಣ, ಗುರುರಾಜ ಪಾಟೀಲ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಬಿ.ಜಿ.ಪಾಟೀಲ ಹಲಸಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಹಂಗರಗಿ, ಕೇದಾರಲಿಂಗಯ್ಯ ಹಿರೇಮಠ, ಬಿ.ಡಿ.ಪಾಟೀಲ, ರಾಜುಗೌಡ ಪಾಟೀಲ, ದೇವಾನಂದ ಚವ್ಹಾಣ, ಮಂಗಳಾದೇವಿ ಬಿರಾದಾರ, ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಕಸ್ತೂರಿಬಾಯಿ ದೊಡಮನಿ ಸೇರಿದಂತೆ ಅನೇಕರಿದ್ದರು.

ತಾಲೂಕಾಧ್ಯಕ್ಷ ಶಿವಣ್ಣ ಕೊಟಾರಗಸ್ತಿ ನಿರೂಪಿಸಿದರು. ಸಿದ್ದನಗೌಡ ಪಾಟೀಲ ಖಾನಾಪುರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!