ಮೂಡಲಗಿ – ನೇಕಾರ ಎನ್ನುವಂಥ ಜೀವಿ ಇಂದು ಇರದಿದ್ದರೆ ಮಾನವ ಕುಲವೇ ಅಂಧಕಾರದಲ್ಲಿ ಇರುತ್ತಿತ್ತು. ನೇಕಾರಿಕೆ ಕೇವಲ ಒಂದು ಉದ್ಯೋಗವಲ್ಲ ಮಾನವನ ಮಾನ ಮುಚ್ಚುವ ಪವಿತ್ರ ಕಾರ್ಯವಾಗಿದೆ ಎಂದು ಪತ್ರಕರ್ತ ಉಮೇಶ ಬೆಳಕೂಡ ಹೇಳಿದರು.
ಬಿಜೆಪಿಯ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ನೇಕಾರ ಪ್ರಕೋಷ್ಠದ ವತಿಯಿಂದ ರಾಷ್ಟ್ರೀಯ ನೇಕಾರ ದಿನವನ್ನು ಶ್ರೀ ನೀಲಕಂಠ ಮಠದಲ್ಲಿ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.ಲ್ಲರ ಮಾನ ಮುಚ್ಚುವ ನೇಕಾರರು ಇಂದು ಕಷ್ಟದಲ್ಲಿದ್ದಾರೆ. ನಾವೆಲ್ಲ ಸೇರಿ ನೇಕಾರರಿಗೆ ಸರ್ಕಾರಿ ಸೌಲಭ್ಯಗಳು ಸಿಗುವಂತೆ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.
ಶಿವು ಮುರಗೋಡ ಮಾತನಾಡಿ, ನೇಕಾರರ ಬದುಕಿಗೆ ಒಳ್ಳೆಯದಾಗಲು ನಾವೆಲ್ಲ ಶ್ರಮಿಸಬೇಕು ಎಂದರು.
ಜಗದೀಶ ಓಂಕಾರಿ ಹಾಗೂ ಈಶ್ವರ ಮುರಗೋಡ ಮಾತನಾಡಿದರು.
ನೀಲಕಂಠ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಮಾರಂಭದಲ್ಲಿ ನೇಕಾರರಾದ ರತ್ನಪ್ಪಾ ಕುಂಬಾರ, ಸದಾಶಿವ ಮುಗಳಖೋಡ, ಮಡಿವಾಳ ಜಿಡ್ಡಿ ಹಾಗೂ ಈರಪ್ಪ ಬೆಳವಿ ಇವರನ್ನು ಶಿವಾನಂದ ಶ್ರೀಗಳು ಸತ್ಕರಿಸಿದರು.
ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ನೇಕಾರ ಪ್ರಕೋಷ್ಠದ ಸಂಚಾಲಕ ಮಹಾಲಿಂಗ ಒಂಟಗೋಡಿ ವಂದಿಸಿದರು.
ಈ ಸಂದರ್ಭದಲ್ಲಿ ಕುರುಹಿನಶೆಟ್ಟಿ ಸಮಾಜದ ಹಿರಿಯರಾದ ಗೊಡಚಪ್ಪಾ ಮುರಗೋಡ, ಸುಭಾಸ ಬೆಳಕೂಡ, ಸದಾಶಿವ ಬೆಳಕೂಡ, ಈಶ್ವರ ಮುಗಳಖೋಡ, ಚನ್ನಪ್ಪಾ ವಂಟಗೂಡಿ, ಸುರೇಶ ಮುರಗೋಡ, ರಮೇಶ ವಂಟಗೂಡಿ, ಮಂಜು ಬೆಳವಿ, ಮಹಾದೇವ ಮುಗಳಖೋಡ ಸೇರಿದಂತೆ ಅನೇಕ ಬಾಂಧವರು ಉಪಸ್ಥಿತರಿದ್ದರು