spot_img
spot_img

ನಾವು ಕಾಡು ನಾಶ ಮಾಡಿದರೆ ಪ್ರಾಣಿಗಳು ಊರಿಗೆ ಬರದೆ ಏನ್ ಮಾಡ್ತಾವೆ – ಈರಣ್ಣ ಕಡಾಡಿ

Must Read

spot_img

ಮೂಡಲಗಿ: ನಾವು ಕಾಡನ್ನು ಕಡಿದು ನಾಶ ಮಾಡತೊಡಗಿದರೆ ಕಾಡು ಪ್ರಾಣಿಗಳು ಎಲ್ಲಿಗೆ ಹೋಗಬೇಕು. ಊರೊಳಗೆ ಬರುತ್ತವೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾರ್ಮಿಕವಾಗಿ ನುಡಿದರು.

ಗುರುವಾರದಂದು ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ಎಮ್ಮೆ ಕರುವನ್ನು ಬಲಿ ಪಡೆದ ಘಟನೆಯ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗೃತೆಯಿಂದ ಇರಬೇಕು. ಚಿರತೆಯನ್ನು ಹಿಡಿಯಲು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ, ಬಲೆ ಹಾಕಲಾಗಿದೆ ಮತ್ತು ಚಿರತೆಯ ಹೆಜ್ಜೆ ಜಾಡನ್ನು ಗಮನಿಸಿ ಅದು ಆ ವ್ಯಾಪ್ತಿಯಲ್ಲಿಯೇ ಇರುವುದನ್ನು ಪತ್ತೆ ಹಚ್ಚಲಾಗಿದೆ ಮತ್ತು ಸರಿಯಾದ ಮಾಹಿತಿಯನ್ನು ತಿಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಅರಣ್ಯ ನಾಶಕ್ಕೆ ನಾವೇ ಹೊಣೆಯಾಗಿದ್ದೇವೆ ಅರಣ್ಯ ಕಡಿಮೆಯಾದಂತೆ ಕಾಡು ಪ್ರಾಣಿಗಳು ನಾಡು ಸೇರುತ್ತಿವೆ ಎಂದು ಕಡಾಡಿ ನುಡಿದರು.

ತಹಶೀಲದಾರ್ ಸೇರಿದಂತೆ ಹಲವು ಅಧಿಕಾರಿಗಳು ಧರ್ಮಟ್ಟಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳು ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಈ ಸಮಯದಲ್ಲಿ ತಹಶೀಲ್ದಾರ ದಿಲಶಾದ ಮಹಾತ್, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಗೋಕಾಕ ಅರಣ್ಯ ಇಲಾಖೆಯ ಅಧಿಕಾರಿ ಕೆಂಪಣ್ಣ ವಣ್ನೂರ, ಹಾಗೂ ಮುಖಂಡರಾದ ಮಲ್ಲಪ್ಪ ನೇಮಗೌಡರ, ಡಾ, ಬಸವರಾಜ ಪಾಲಭಾಂವಿ, ಪ್ರಕಾಶ ಮಾದರ, ಮಹಾನಿಂಗ ವಂಟಗೋಡಿ, ಜಗದೀಶ ತೇಲಿ ಸಹಿತ ಹಲವರಿದ್ದರು.

ಧರ್ಮಟ್ಟಿ ಗ್ರಾಮದ ಅನಿಲ ಮಂದ್ರೋಳಿ ಅವರ ತೋಟದಲ್ಲಿ ಚಿರತೆಯೊಂದು ಎಮ್ಮೆ ಕರುವನ್ನು ಎಳೆದೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ತುಂಬಾ ವೈರಲ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಹಾಗೂ ಸುತ್ತಮುತ್ತಲಿನ ೩೦ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ಆದೇಶದನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ರಜೆ ಘೋಷಿಸಿದ್ದಾರೆ.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!