ಆತ್ಮವಿಶ್ವಾಸದ ನಾನು ಅತಿಯಾದರೆ ಅಹಂಕಾರವೆ ಆಗುವುದು

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಯಾರಾದರೂ ಅಡ್ಡ ಬಂದರೆ ಅದು ಅವರ ದೇಶವಿರೋಧಿ ನೀತಿಯನ್ನು ತೋರಿಸುತ್ತದೆನ್ನಬಹುದು. ದೇಶದ ಭವಿಷ್ಯ ಅವರವರ ಮೂಲ ಧರ್ಮ ಕರ್ಮದ ಶಿಕ್ಷಣದಲ್ಲಿರುತ್ತದೆ.ಭಾರತೀಯ ಪೋಷಕರು ಈಗಲೂ ಎಚ್ಚರವಾಗದೆ ಮಲಗಿದ್ದರೆ ಮಕ್ಕಳ ಭವಿಷ್ಯದ ಗತಿ ಅಧೋಗತಿ. ದೇಶದೊಳಗೆ ಇರುವ ಪ್ರಜೆಗಳಲ್ಲಿ ದೇಶದ ಜ್ಞಾನವೇ ಇಲ್ಲವಾದರೆ ನಾವು ದೇಶಭಕ್ತರಲ್ಲವೆನ್ನಬಹುದು.

ಅವರಿಗೆ ಸರ್ಕಾರದ ಸಾಲ ಸೌಲಭ್ಯಗಳನ್ನು ಪಡೆಯುವ ಯಾವ ನೈತಿಕ ಅಧಿಕಾರವಿರೋದಿಲ್ಲ. ಈವರೆಗೆ ದೇಶವನ್ನು
ಸಾಲಕ್ಕೆ ತಳ್ಳಿ ಶ್ರೀಮಂತ ರಾದವರಲ್ಲಿ ಜ್ಞಾನವಿಲ್ಲವಾದರೆ ಇದೇ ಮುಂದೆ ದೊಡ್ಡ ರೋಗಕ್ಕೆ ಕಾರಣವಾಗುತ್ತದೆ. ಇಲ್ಲಿ
ಯಾರಿಗೂ ಹೇಳೋ ಅಗತ್ಯವಿಲ್ಲ.ನಮಗೆ ನಾವೇ ತಿಳಿದು ನಮ್ಮ ಮೂಲವನ್ನು ಗಟ್ಟಿಗೊಳಿಸಿಕೊಳ್ಳಲು ಸಾಮಾನ್ಯಜ್ಞಾನ
ಸಾಕು. ಇದು ಎಲ್ಲರಲ್ಲಿಯೂ ಇದೆ. ಇದನ್ನು ಶಿಕ್ಷಣದಿಂದ ಮಕ್ಕಳಿಗೂ ನೀಡಿ ಬೆಳೆಸಿದರೆ ಮಾನವರಾಗಬಹುದು. ನಾನೆಂಬುದಿಲ್ಲ ಎಲ್ಲಾ ಪರಮಾತ್ಮನೆ ಎನ್ನುವುದು ಮಹಾತ್ಮರು. ನಾನಿದ್ದೇನೆ ಜೊತೆಗೆ ದೇವರಿದ್ದಾರೆ ಎನ್ನುವುದು
ಮಾನವರು. ದೇವರಿಲ್ಲ ನಾನೇ ಎಲ್ಲಾ ಎನ್ನುವುದು ಅಸುರರು. ಒಂದು ದೇಹದಲ್ಲಿ ಅಡಗಿರುವ ಮೂರೂ ಶಕ್ತಿ ಗಮನಿಸದೆ ಚರಾಚರದೊಳಗಿರುವ. ಈ ಶಕ್ತಿಯನ್ನು ಗಮನಿಸಲು ನಾನು ಹೋಗಬೇಕೆನ್ನುವುದೆ ಅದ್ವೈತ. ಅದ್ವೈತ ಎಂದರೆ ಒಂದೆ ಎಂದಾಗ ದೇಶ ಒಂದೆ .ಇದನ್ನು ಯಾರು ಎರಡಾಗಿಸಲು ಸಾಧ್ಯ? ದೇಶದ ಈ ಸ್ಥಿತಿಗೆ ‘ನಾನು’ ಕಾರಣವೆ? ಸತ್ಯ ನಾನೆಂಬ ಅತಿಯಾದ ಅಹಂಕಾರವೆ ಕಾರಣ. ಆತ್ಮವಿಶ್ವಾಸದ ನಾನು ಅತಿಯಾದರೂ ಅಹಂಕಾರವೆ ಆಗೋದು. ಸತ್ಯ ಧರ್ಮದ ವಿಚಾರದಲ್ಲಿ ನಾನೇಸರಿ ಎನ್ನುವ ಅಹಂ
ಸರ್ವನಾಶ ಮಾಡುತ್ತದೆ.’ ಅಹಂ ಬ್ರಹ್ಮಾಸ್ಮಿ’ ಇದನ್ನು ನಾವೆಲ್ಲರೂ ಬ್ರಹ್ಮನ ಒಂದಂಶವೆಂದರೆ ಸತ್ಯ.ನಾನೇ ಬ್ರಹ್ಮ ಎಂದರೆ ಅಸತ್ಯ. ಇಲ್ಲಿ ನಿರಾಕಾರ ಬ್ರಹ್ಮ ಎಲ್ಲರ ಒಳಗಿದ್ದು ನಡೆಸಿರುವಾಗ ನಾನೊಬ್ಬನೆ ಬ್ರಹ್ಮ ಎಂದರೆ
ತಪ್ಪು. ಹೀಗೆ ನಾನೇ ಎಲ್ಲಾ ರೀತಿಯ ಸಹಕಾರ,ಅಸಹಕಾರಕ್ಕೆ ಕಾರಣವಾದಾಗ ಹೊರಗಿನ ಸರ್ಕಾರ. ಏನು ಮಾಡಲು ಸಾಧ್ಯ? ದೇಶಕ್ಕೆ ಬಂದಿರೋ ಆಪತ್ತಿಗೆ ನಾನು ಕಾರಣವಾದಾಗ ಅದರಿಂದ ಬಿಡುಗಡೆ
ಪಡೆಯಲು ನಾನೆಂಬ ಅಹಂ ಬಿಟ್ಟು ನಾವೆಲ್ಲರೂ ಒಂದೇ ಎನ್ನುವ ಒಗ್ಗಟ್ಟು ಬೆಳೆಸಬೇಕು.
ಇದನ್ನು ಬೆಳೆಸಿರುವ ರಾಜಕೀಯದಲ್ಲಿ ರಾಜಯೋಗಕ್ಕೆ ಅವಕಾಶ ನೀಡಿದರೆ, ಮುಂದಿನ ಭಾರತ ಸ್ವತಂತ್ರ. ಇಲ್ಲವಾದರೆ ಅತಂತ್ರ. ಇದಕ್ಕಾಗಿಯೇ ರಾಜಯೋಗದ ಶಿಕ್ಷಣ ದೇಶದ ಪ್ರಜೆಗಳಿಗೆ ಅಗತ್ಯವಿದೆ. ರೋಗಕ್ಕೆ ಹೊರಗಿನಿಂದ ಕೊಡುವ ಲಸಿಕೆ ದೇಹಕ್ಕೆ ಸೇರಿಸಬಹುದು.ಆದರೆ ಅಜ್ಞಾನದಿಂದ ಬೆಳೆಯುತ್ತಿರುವ ರೋಗಕ್ಕೆ ಔಷಧ ಶಿಕ್ಷಣದ ಬದಲಾವಣೆಯೊಳಗಿರುವಾಗ ಅದನ್ನು ಬಿಡದಿದ್ದರೆ ಜೀವ ಒಮ್ಮೆ ಹೋಗೋದೆ ಅದರ ಜೊತೆಗೆ ಅಜ್ಞಾನವೂ ಹೋಗಿ ಮತ್ತೆ ಹುಟ್ಟುತ್ತದೆ. ಒಂದು ಸತ್ಯ ದೇಶದೊಳಗೆ ನಾನಿದ್ದೇನೆಯೇ ಹೊರತು, ದೇಶವೆ ನನ್ನೊಳಗಿಲ್ಲ
ದೇಶಭಕ್ತಿ ಬೆಳೆಸಿಕೊಂಡರೆ ನಾನು ಸುರಕ್ಷಿತ. ವಿದೇಶ ವ್ಯಾಮೋಹದಲ್ಲಿ ಜೀವ ಅಸುರಕ್ಷಿತ.

ಫೋಟೋದಲ್ಲಿ ಜೊತೆಯಿರುವುದಕ್ಕೂ ಕಷ್ಟದಲ್ಲಿ ಜೊತೆಯಿರುವುದಕ್ಕೂ ತುಂಬಾ ವ್ಯತ್ಯಾಸ ಇರುತ್ತದೆ.••• ಹಣ, ಅಂತಸ್ತು, ಸೌಂದರ್ಯ, ಅಧಿಕಾರ , ಆಸ್ತಿ ಮತ್ತು ಇನ್ನು ಇತರಗಳಿಂದ ಸಂತೋಷವನ್ನು ಖರೀದಿಸಲು ಎಂದಿಗೂ ಸಾಧ್ಯವಿಲ್ಲ. ಪ್ರಪಂಚದಲ್ಲಿ ನಮ್ಮವರು ಅಂತ ಇರುವುದು ಕನ್ನಡಿ ಮಾತ್ರ. ಅದರ ಎದುರು ನಾವು ಅತ್ತರೆ, ಅದು ನಗುವುದಿಲ್ಲ. ತಾನೂ ನಮ್ಮೊಂದಿಗೆ ಅಳುತ್ತದೆ. ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಏನು ಮಾಡಬೇಕು ಎನ್ನುವ ಪ್ರಶ್ನೆಗೆ. *ಒಬ್ಬ ಜ್ಞಾನಿ ಹೇಳಿದ ಸುಂದರವಾದ ನುಡಿ “ಕಾಲು” ಎಳೆಯುವುದು ಬಿಟ್ಟು, “ಕೈಯನ್ನು” ಎಳೆಯಬೇಕು” ಎಂದನು.*
ಎಷ್ಟೊಂದು ಅರ್ಥಗರ್ಭಿತ ವಾಗಿದೆ. ಅಲ್ಲವೆ?

- Advertisement -

ಸಂಸಾರ ರಥ ಸರಿಯಾಗಿ ನಡೆಯಲು,ಗಂಡ ಹೆಂಡತಿಯರ ಮಧ್ಯ ಜಗಳ ನಡೆದರೆ, ಒಬ್ಬರು ತಲೆಬಾಗಲೇಬೇಕು.ಇದರಲ್ಲಿ ಅಹಂಕಾರ ಅಡ್ಡ ಬರಬಾರದು. ಗೌರವ, ಅಧಿಕಾರಗಳು ಸಿಗುವುದು ಸಮಯ ಹಾಗೂ ಪರಿಸ್ಥಿತಿಗಳಿಗೆ ಹೊರತು ನಮಗಲ್ಲ. ಆದರೆ ನಾವು ಅದನ್ನು ನಮ್ಮದೇ ಎಂದು ತಿಳಿದು ಮೋಸ ಹೋಗುತ್ತೇವೆ.

ನಾನು ಈ ದೇಶದ ಪ್ರಜೆಯಾಗಿ ಸಾಮಾನ್ಯಸತ್ಯ ಹೊರ ಹಾಕಲು ಸ್ವಾತಂತ್ರ್ಯ ವಿದೆ. ಆದರೆ, ಅದನ್ನು ಅರ್ಥಮಾಡಿಕೊಂಡು ಸಹಕರಿಸುವ
ನಮ್ಮ ಶಿಕ್ಷಣ ನಮಗೆ ನೀಡಿಲ್ಲವೆಂಬುದೆ ವಿಪರ್ಯಾಸ. ಕಾರಣ, ಇಲ್ಲಿ ಸನಾತನ ಸತ್ಯ ಪುರಾತನ ಇತಿಹಾಸ,ವಿನೂತನ ಸತ್ಯ ವಿದೇಶಿ ವಿಜ್ಞಾನಕ್ಕೆ ಕೊಡುವ ಗೌರವ ಸಾಮಾನ್ಯರ ವಾಸ್ತವ ಸತ್ಯಕ್ಕೆ ಸಿಗದೆ ಜೀವನ ನರಕವಾಗಿ ಪರಿವರ್ತನೆ ಮಾಡಿರೋದು ನಾನೆಂಬ ಅಹಂಕಾರ ಸ್ವಾರ್ಥದ ರಾಜಕೀಯತೆ.ರಾಜಕಾರಣಿಗಳಲ್ಲ.ಪ್ರಜೆಗಳೆ ಇದಕ್ಕೆ ಕಾರಣ. ನನ್ನ ನಾನರಿತು ನಡೆಯಲು ಸರ್ಕಾರ ಬೇಕೆ? ಪ್ರಶ್ನೆಗೆ ಉತ್ತರ ಒಳಗಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!