spot_img
spot_img

ಅಂತಃಕರಣ ಶುದ್ಧಿಯಿಂದ ಗುರು ಸೇವೆ ಮಾಡಿದರೆ ಗುರುಕಾರುಣ್ಯ ಬೇಗ ದೊರೆಯುತ್ತದೆ – ಶ್ರೀ ಮುಕ್ತಾನಂದ ಸ್ವಾಮೀಜಿ

Must Read

spot_img

ಮುನವಳ್ಳಿ : ಅಂತಃಕರಣ ಶುದ್ಧಿಯಿಂದ ಗುರುವಿನ ಸೇವೆ ಮಾಡಿದರೆ ಗುರುಕಾರುಣ್ಯ ಬೇಗ ದೊರೆಯುತ್ತದೆ. ಗುರು ನಮಗೆ ಬೋಧೆ ಮಾಡಿದರೆ ಅದು ಚಿತ್ತಗರ್ಭದಲ್ಲಿ ಅಚ್ಚೊತ್ತಿರುತ್ತದೆ. ಗುರುವಿನ ಉಪದೇಶ ಪಡೆಯಲು ನಮ್ಮ ಮನಸ್ಸು ಉತ್ಸುಕವಾಗಿರಬೇಕು. ಗುರುವನ್ನು ಸದಾ ಸ್ಮರಿಸುತ್ತ, ಗುರುವಿನ ಸೇವೆ ಮಾಡುತ್ತಾ ಗುರುಕೃಪೆ ಪಡೆಯಬೇಕೆಂದು ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.

ಅವರು ಶಿಂದೋಗಿ,ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಜರುಗಿದ ಗುರುಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸತ್ಸಂಗಿಗಳಾದ ಬಸವರಾಜ ಹಲಗತ್ತಿಯವರು “ಗುರುವಿನ ಸಮನಾರು ಇಲ್ಲ.ಗುರುವೇ ಗತಿ ನಮಗೆಲ್ಲ.ಗುರುವು ಅಧಿಕನು ಈ ಜಗದಲಿ.ಎಂಬ ವಿಚಾರವನ್ನು ತಿಳಿಸುತ್ತ ಸಿಂಹ ಮತ್ತು ಅದರ ಮರಿಗಳು ಕುರಿಗಳಾಗಿ ಮತ್ತೆ ಸಿಂಹಗಳಾಗಿ ಪರಿವರ್ತನೆ ಹೊಂದುವ ದೃಷ್ಟಾಂತವನ್ನು ಗುರು ತನ್ನ ಕೃಪೆಗೆ ಒಳಪಡುವ ಮನುಜರನ್ನು ಗುರುಕಾರುಣ್ಯ ನೀಡುವ ಮೂಲಕ ಭಕ್ತಿ ಶ್ರದ್ಧೆ ಮೋಕ್ಷ ಮಾರ್ಗದತ್ತ ಕೊಂಡೊಯ್ಯುವನು” ಎಂಬುದನ್ನು ತುಂಬ ಮಾರ್ಮಿಕವಾಗಿ ಹೇಳಿದರು.

ಸತ್ಸಂಗಿಗಳಾದ ಚನಬಸು ನಲವಡೆ ಮಾತನಾಡಿ “ಗುರುಕಾರುಣ್ಯ ಸದಾ ತನ್ನ ಶಿಷ್ಯಂದಿರ ಮೇಲಿರುತ್ತದೆ ಉದಾಹರಣೆಗೆ ಕುಂಬಾರ ಗಡಿಗೆ ಮಾಡುವ ಸಂದರ್ಭದಲ್ಲಿ ಹೊರಗಿನಿಂದ ಗಡಿಗೆಯ ಆಕೃತಿಗಾಗಿ ಬಡಿಯುತ್ತಿರುವನು.ಒಳಗೆ ಇನ್ನೊಂದು ಕೈಯಿಂದ ಗಡಿಗೆಯಾಗಲು ಬೇಕಾದ ನುಣುಪು ಮತ್ತು ಆಕಾರಕ್ಕೆಂದು ಹಗುರವಾಗಿ ಕೈಯಿಂದ ಕೈಯಾಡಿಸುತ್ತಿರುವನು.ಬಾಹ್ಯ ನೋಟಕ್ಕೆ ಗುರು ಶಿಷ್ಯನನ್ನು ಸಿಟ್ಟು ಮಾಡಿದರೂ ಕೂಡ ಅಂತರಾತ್ಮದಲ್ಲಿ ಆತನು ಒಳ್ಳೆಯವನಾಗಲಿ ಎಂಬ ಕನಿಕರ ಕರುಣೆ ಇದ್ದೇ ಇರುತ್ತದೆ.ಶಿಷ್ಯನಾದವನು ಮೊದಲು ಲೌಕಿಕ ಪ್ರಪಂಚದಲ್ಲಿ ಯಾವುದೇ ರೀತಿಯಲ್ಲಿರಲಿ ಗುರುಕಾರುಣ್ಯಕ್ಕೆ ಒಳಪಟ್ಟ ಮೇಲೆ ಅಲೌಕಿಕ ಜ್ಞಾನಕ್ಕೆ ಒಳಪಟ್ಟು ತನ್ನಿಂದ ಇತರರು ಕೂಡ ಗುರುವಿನೋಪಾದಿಯಲ್ಲಿ ಸಾಗಲಿ ಎಂದು ಯೋಚಿಸುವಂತೆ ಮಾಡುವುದು ಗುರುಕಾರುಣ್ಯ” ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕರುಣಿಸಿದ್ದ ಪಂತ ಬಾಳೇಕುಂದ್ರಿಯ ಪರಮಪೂಜ್ಯ ಚಿನ್ಮಯಾನಂದ ಸ್ವಾಮೀಜಿಯವರು “ ಈ ಹಿಂದಿನ ಗುರುಗಳಾಗಿದ್ದ ವಿಜಯಾನಂದ ಪೂಜ್ಯರು ಹೊರನೋಟದಲ್ಲಿ ಸಿಟ್ಟಿನ ಸ್ವಭಾವದವರೆನಿಸುತ್ತಿದ್ದರೂ ಕೂಡ ಅವರು ತಮ್ಮ ಶಿಷ್ಯರನ್ನು ಕಾಣುವ ರೀತಿ ಗುರುಕಾರುಣ್ಯಕ್ಕೆ ಉದಾಹರಣೆ ಇಂದು ನಿಮ್ಮ ಸತ್ಸಂಗ ಬಳಗದಲ್ಲಿ ಇರುವ ಎಲ್ಲ ಶಿಷ್ಯರು ಕಾರಣ.ನೀವೆಲ್ಲ ಅವರ ಅನುಗ್ರಹಕ್ಕೆ ಒಳಪಡುವ ಮೂಲಕ ಆ ಸತ್ಪರಂಪರೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತಿರುವಿರಿ.ಇದು ಗುರು ಕಾರುಣ್ಯ. ಗುರುವನ್ನು ಶಿಷ್ಯರು ಕಾಣುವ ರೀತಿ.ಅವರ ಬದುಕಿನ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಜೀವನದಲ್ಲಿ ಜರುಗಿದಾಗ ಮಾತ್ರ ಈ ರೀತಿಯ ಕಾರ್ಯ ಸಾಧ್ಯ ಎಂದು ತಾವೂ ಕೂಡ ವಿಜಯಾನಂದ ಅಪ್ಪನವರ ಗುರು ಕಾರುಣ್ಯಕ್ಕೆ ಒಳಪಟ್ಟವರು ಎಂಬುದನ್ನು ನೆನಪಿಸಿಕೊಂಡರು.

ಹಿರಿಯ ಸತ್ಸಂಗಿಗಳಾದ ಯಶವಂತ ಗೌಡರ ಮಾತನಾಡಿ “ ನಮ್ಮ ಕರ್ಮದಿಂದ ನಾವು ಅನುಭವಿಸುವ ದೈನಂದಿನ ಚಟುವಟಿಕೆಗಳು ಕಾರಣ.ನಾವೇನೇ ಕರ್ಮ ಮಾಡಿದರೂ ಅದರ ಫಲವನ್ನು ಅನುಭವಿಸುತ್ತೇವೆ ಎನ್ನುವುದಕ್ಕೆ ವ್ಯಕ್ತಿ ಹಾವು ಕಡಿದು ಸಾವನ್ನಪ್ಪುವ ಘಟನೆ ಉದಾಹರಿಸುತ್ತ ನಮ್ಮ ದುಃಖಕ್ಕೆ ನಾವೇ ಕಾರಣರು”ಎಂಬುದನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿ.ಬಿ.ಹುಲಿಗೊಪ್ಪ, ಮಂಜುನಾಥ ಭಂಡಾರಿ, ಬಸವರಾಜ ಧಾರವಾಡ, ವೈಷ್ಣವಿ ನಲವಡೆ, ಸಮೃದ್ಧಿ ನಲವಡೆ, ಗಾಯತ್ರಿ ಹೊನ್ನಳ್ಳಿ, ಸಹೋದರಿಯರಿಂದ ಸಂಗೀತ ಜರುಗಿತು. ಪಂಚನಗೌಡ ಬಿಕ್ಕನಗೌಡ್ರ, ಪಂಚಪ್ಪ ಗಂಗಣ್ಣವರ, ಕಾಶಪ್ಪ ನಲವಡೆ, ಎಂ.ಎಂ.ಶಿವಪೇಟಿ, ಬಿ.ಜಿ.ಹುಲಿಗೊಪ್ಪ, ಅನಸೂಯಾ ಹೊನ್ನಳ್ಳಿ, ಸವಿತಾ ಕೆಂದೂರ, ಜಯಶ್ರೀ ಹೊನ್ನಳ್ಳಿ, ಇಂದಿರಾ ಕದಂ, ಅನುರಾಧಾ ಬೆಟಗೇರಿ, ಸುಧಾ ಗೌಡರ, ಬಸಮ್ಮ ನಲವಡೆ, ಎಲ್.ಎಸ್.ಕಂಕಣವಾಡಿ ಸೇರಿದಂತೆ ಸತ್ಸಂಗದ ಸದಸ್ಯರು ಇದ್ದರು. ವೀರಣ್ಣ ಕೊಳಕಿ ಕಾರ್ಯಕ್ರಮ ನಿರೂಪಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!