ಬೀದರ – ನಗರದ ಬಿಗ್ ಬಜಾರ ಬಳಿ ಇರುವ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾನಿಲಯದ ಹಣಕಾಸು ವಿಭಾಗದ ಅಧಿಕಾರಿ ಮೃತ್ಯುಂಜಯ ಕಿರಣ ಅವರ ಮನೆಯ ಮೇಲೆ ಎಸಿಬಿ ಅಧಿಕಾರಿ ಗಳ ತಂಡದಿಂದ ದಾಳಿ ನಡೆಸಿದೆ.
ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ದಾಳಿಯಲ್ಲಿ ಚಿನ್ನಾಭರಣ,ಅಕ್ರಮ ಆಸ್ತಿಗಳಿಕೆ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಎಸಿಬಿ ಎಸ್ಪಿ ಅಮರನಾಥ್ ರೆಡ್ಡಿ ಮಾರ್ಗದರ್ಶನ ದಲ್ಲಿ ಬೀದರ್ ಎಸಿಬಿ ಅಧಿಕಾರಿ ಹಣಮಂತರಾಯ,ಶ್ರೀಕಾಂತ್ ಸೇರಿದಂತೆ ಹಲವು ಅಧಿಕಾರಿಗಳ ತಂಡದಿಂದ ದಾಳಿ ನಡೆಸಿದರು.
ವರದಿ: ನಂದಕುಮಾರ ಕರಂಜೆ, ಬೀದರ