spot_img
spot_img

ಶರಣರ ವಚನಗಳು ನುಡಿದಂತೆ ನಡೆದ ಅನುಭಾವದ ಅಮರ ವಾಣಿಗಳು; ಪ್ರೋ. ಬಿ.ಎಸ. ಮಾರಿದ ಅಭಿಮತ

Must Read

- Advertisement -

ದಿನಾಂಕ 14.05.2023 ರಂದು ಬೆಳಗಾವಿಯ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ  ನಡೆದ ವಾರದ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ  ವಚನಗಳು ಮತ್ತು ಸಂಸ್ಕೃತಿ ಕುರಿತಾಗಿ ತಮ್ಮ ಅನುಭಾವ  ನೀಡಿದ ಹಿರಿಯ ಉಪನ್ಯಾಸಕರಾದ ಪ್ರೊ. ಬಿ.ಎಚ. ಮಾರದ ಅವರು ವಚನಗಳನ್ನು ಅಥೈ೯ಸಿ ಕೊಳ್ಳಲು ಸಾ0ಧ೯ಬಿಕ ಹಿನ್ನೆಲೆ ಮಾತ್ರ  ಸಾಲದು.

ಜೊತೆಗೆ  ಶರಣರ ಬದುಕಿನ ರೀತಿ ಅವರು ಸಮಾಜಕ್ಕೆ  ಹೇಳಹೊರಟಿರುವ ಮತ್ತು ಆಶಯವನ್ನು ಅವು ಪ್ರತಿಬಿಂಬಿಸುತ್ತವೆ ಎಂಬುದನ್ನು ಹಲವಾರು ವಚನಗಳೊಂದಿಗೆ ವಿಶ್ಲೇಷಣೆ ಮಾಡಿದರು.

ಪ್ರಭುತ್ವಕ್ಕೆ ಪ್ರಶ್ನೆ ಮಾಡುವ, ಪ್ರಾಮಾಣಿಕ ಮತ್ತು ಸತ್ಯ ಶುದ್ಧ ಕಾಯಕದ, ದೈವದ ಮೇಲಿನ ನಂಬಿಕೆಯನ್ನು ಹೆಚ್ಚಿಸುವ, ಪಾಪ ರಹಿತ ಹಾಗೂ ನೈತಿಕ ಬದುಕಿಗೆ ಪ್ರಾಧಾನ್ಯತೆ ನೀಡುವ ಶರಣರ ವಚನಗಳು ಸಾರ್ವತ್ರಿಕ  ಸಂದೇಶಗಳಾಗಿ ನಮ್ಮ ಬದುಕನ್ನು ರೂಪಿಸಬಲ್ಲವು ಎಂಬುದು ಅವರ ಉಪನ್ಯಾಸದ ಪ್ರಮುಖ ಆಕರ್ಷಣೆಯಾಗಿತ್ತು.

- Advertisement -

ಲಿಂಗಾಯತ ಸಂಘಟನೆಯ ಪೂರ್ವದ ಅಧ್ಯಕ್ಷರಾಗಿದ್ದ ಶರಣರಾದ ಸದಾಶಿವ ದೇವರಮನಿ ವಿಶ್ವ ತಾಯಂದಿರ ದಿನದ ಕುರಿತಾಗಿ ಮಾತನಾಡುತ್ತ ಕುಟುಂಬದ ಮತ್ತು ಒಟ್ಟಾರೆ ಸಮಾಜದ ಸಂಘರ್ಷ ನಿವಾರಣೆಯಲ್ಲಿ ಮಹಿಳೆಯರ ಪಾತ್ರವನ್ನು ಹಲವಾರು ನೈಜ ಸನ್ನಿವೇಶಗಳ ಮೂಲಕ ವಿಶ್ಲೇಷಿಸಿದರು. 

ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ ಅವರು  ಆರ್.ಟಿ.ಇ. ಕಾಯ್ದೆಯಂತಹ ಹಲವಾರು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ನಾವು ಮುಂದಾಗಬೇಕು ಎಂದು ತಿಳಿ‌ಸಿದರು. ಆನಂದ ಕರ್ಕಿಯವರನ್ನೊಳಗೊಂಡು ಹಲವಾರು ಶರಣರು ಮತ್ತು ಮಕ್ಕಳು ವಚನ ಗಾಯನ ಮಾಡಿದರು.

ಮಹಾದೇವಿ ಅರಳಿಯವರ ನೇತೃತ್ವದಲ್ಲಿ ಬೆಳಗಿನ ಸಾಮೂಹಿಕ ಪ್ರಾರ್ಥನೆ ನೆರವೇರಿತು. ವಿ.ಕೆ. ಪಾಟೀಲ್ ಹಾಗೂ ಅಕ್ಕಮಹಾದೇವಿ ತೆಗ್ಗಿ ವಚನ ವಿಶ್ಲೇಷಣೆ ಮಾಡಿದರು. ಸಂಘಟನೆಯ ಕಾರ್ಯದರ್ಶಿಗಳಾದ ಸುರೇಶ್ ನರಗುಂದ ವಚನ ವಿಶ್ಲೇಷಣೆಯೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.

- Advertisement -

ಶರಣೆ ಜಯಲಕ್ಸ್ಮಿ ದಾಸೋಹ ಸೇವೆ ಸಲ್ಲಿಸಿದರು ಸಂಘಟನೆಯ ಉಪಾಧ್ಯಕ್ಷರಾದ ಸಂಗಮೇಶ ಅರಳಿ ವಿ.ಬಿ. ದೊಡಮನಿ, ಮಹಾಂತೇಶ ಮೆಣಸಿನಕಾಯಿ, ಬಸವರಾಜ ಬಿಜ್ಜರಗಿ,  ವಿ ಕೆ ಪಾಟೀಲ,ಪ್ರಸಾದ ಹಿರೇಮಠ, ಬಾಬಣ್ಣ ತಿಗಡಿ  ಹೀಗೆ ಸಂಘಟನೆಯ ಕಾರ್ಯಕರ್ತರು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜಲ ಜೀವನ ಮಿಷನ್ ಅಡಿಯಲ್ಲಿ ಕಲ್ಯಾಣಿ ಪುನಶ್ಚೇತನ

ಮೂಡಲಗಿ: ಜಿಲ್ಲಾ ಪಂಚಾಯತ್ ಬೆಳಗಾವಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ, ತಾಲೂಕು ಪಂಚಾಯತ್ ಮೂಡಲಗಿ, ಗ್ರಾಮ ಪಂಚಾಯತ್ ಯಾದವಾಡ ಹಾಗೂ ಅನುಷ್ಠಾನ ಬೆಂಬಲ...
- Advertisement -

More Articles Like This

- Advertisement -
close
error: Content is protected !!
Join WhatsApp Group