ಪ್ರಸಾದ ಮಹತ್ವ : ಉಣ್ಣುವ ಅನ್ನ ಕೇಡು ಮಾಡಬಾರದು

Must Read

ಬೆಳಗಾವಿ – ಗಾಳಿ ನೀರು ಬೆಳಕು ಹೀಗೆ ಸಷ್ಟಿಯ ಎಲ್ಲ ಕೊಡುಗೆಯೂ ಪ್ರಸಾದಮಯವಾಗಿದೆ ಹಾಗೂ ನಾವು ಉಣ್ಣುವ ಅನ್ನವನ್ನು ಕೇಡು ಮಾಡಬಾರದು ಅನ್ನವನ್ನು ಲಿಂಗಕ್ಕೆ ಎಡೆ ಮಾಡಿ ಉಂಡಾಗ ಅದು ಪ್ರಸಾದ ರೂಪವಾಗುತ್ತದೆ ತುತ್ತಿಗೊಮ್ಮೊಮ್ಮೆ ಶಿವನಾಮಸ್ಮರಣೆ ಮಾಡುತ್ತಾ ಸ್ವೀಕರಿಸಬೇಕು ಎಂದು ಪ್ರಸಾದ ಕುರಿತು ವಚನಗಳನ್ನು ವಿಶ್ಲೇಷಣೆ ಮಾಡುತ್ತಾ ಬಿಬ್ಬಿ ಬಾಚಯ್ಯನವರು ಎಲ್ಲಿ ಅನ್ನ ಉಂಡು ಉಳಿದು ನಾಶವಾಗುತ್ತದೆಯೋ ಅಲ್ಲಿಂದ ಅನ್ನವನ್ನು ತೆಗೆದು ಕೊಂಡು ಹೋಗಿ ಹಸಿದವರಿಗೆ ಹಂಚುತ್ತಿದ್ದರು ಎಂದು ಅವರ ಪ್ರಸಾದ ಕಾಯಕ ಹಾಗೂ ಪ್ರಸಾದದ ಮಹತ್ವವನ್ನು ಶರಣ ದುಂಡಪ್ಪ ಸಂಕೇಶ್ವರರು ಹೇಳಿದರು.

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ದಿನಾಂಕ 1.6.2025 ರವಿವಾರದ ಸತ್ಸಂಗದಲ್ಲಿ ಅವರು ಮಾತನಾಡಿದರು.

ವಚನ ವಿಶ್ಲೇಷಣೆಯಲ್ಲಿ ಶರಣೆಯರಾದ ಲಲಿತಾ ರುದ್ರಗೌಡರು ನಾವು ಮಾಡುವ ಕೆಲಸವನ್ನು ಹೇಳಿಕೊಳ್ಳದೆ ಮಾಡಿಯೂ ಮಾಡದಂತಿರಬೇಕೇಂದು ಹೇಳಿದರೆ, ದಾನಮ್ಮಾ ಝಳಕಿಯವರು ಅಕ್ಕ ನಾಗಮ್ಮನ ವಚನ ಹೇಳುತ್ತ ಜೀವನದಲ್ಲಿ ನಿರಾಶಾಭಾವ ಹೊಂದದೆ ನಿಂದನೆಗಳನ್ನು ಎದುರಿಸಿ ನಾವು ನಮ್ಮ ಗುರಿಯತ್ತ ಸಾಗಲು ಆತ್ಮ ವಿಶ್ವಾಸ , ಮತ್ತು ಧೈರ್ಯವನ್ನು ತುಂಬಲು ವಚನಗಳು ಎಷ್ಟೊಂದು ಪೂರಕವಾಗಿವೆ ಎಂದು ಹೇಳಿದರು.

ಶರಣೆಯರಾದ ವಸಂತಕ್ಕಾ ಗಡಕರಿ, ಶಾರದಾ ಉಡಕೇರಿ, ನಾಗರತ್ನಾ ಪಾಟಿಲ ವಚನ ಗಾಯನ ಮಾಡಿದರು. ಅಧ್ಯಕ್ಷರಾದ ಎಸ್ ಜೀ ಸಿದ್ನಾಳರು, ಶಂಕರ ಶೆಟ್ಟಿ, ಮಹಾದೇವ ಕೋರಿ, ಮೋಹನ್ ಮುನವಳ್ಳಿ ಅವರು ಕೂಡಾ ವಚನಗಳನ್ನು ವಿಶ್ಲೇಷಣೆ ಮಾಡಿದರು.
ಸುನಿತಾ ನಂದೆಣ್ಣವರ ಹಾಗೂ ಲಲಿತಾ ರುದ್ರಗೌಡರ ಪ್ರಾರ್ಥನೆ ನಡೆಸಿಕೊಟ್ಟರು. ನಿರೂಪಣೆ ಸುನಿತಾ ನಂದೆಣ್ಣವರ ಮೋಡಿದರು ಉಪಾಧ್ಯಕ್ಷರು ಕುಂದ್ರಾಳ, ಗುರವನ್ನವರ ಹಾಗೂ ಜಯಶ್ರೀ ಮುಗಳಿ, ಸರೋಜಿನಿ ನಡುವಿನ ಹಳ್ಳಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group