spot_img
spot_img

ದಲಿತರ ಕೇರಿಗಳನ್ನು ಸುಧಾರಣೆ ಮಾಡಿ – ನಾಗರಿಕ ಹಕ್ಕುಗಳ ಡಿವೈಎಸ್ ಪಿ  ಸುನೀಲ ಕಾಂಬಳೆ

Must Read

ಸಿಂದಗಿ: ದಲಿತರ ಕೇರಿಗಳನ್ನು ಸುಧಾರಣೆ ಮಾಡಿ ಎಲ್ಲರಂತೆ ಅವರು ಕೂಡಾ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಎಸ್‍ಸಿಪಿಟಿಎಸ್‍ಪಿ ಯೋಜನೆಯಡಿ ಸಾಕಷ್ಟು ಅನುದಾನ ನೀಡುತ್ತಿದೆ ಆದರೆ ಕೆಲವು ಅಧಿಕಾರಿಗಳ ನಿರ್ಲಕ್ಷದಿಂದ ದಲಿತರಿಲ್ಲದ ವಾರ್ಡುಗಳಲ್ಲಿ ಕಾಮಗಾರಿಗಳನ್ನು ಹಾಕಿ ಬಿಲ್ಲು ಎತ್ತಿ ಹಾಕಿದ್ದಾರೆ ಎನ್ನುವ ದೂರಿನನ್ವಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಯಲದ ಪರಿಶೀಲನೆ ಮಾಡಲಾಗಿದ್ದು ಇದರಲ್ಲಿ ಲೋಪ ಕಂಡು ಬಂದರೆ ಅಂಥವರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಿ ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಯಲದ ಡಿವೈಎಸ್‍ಪಿ ಸುನೀಲ ಕಾಂಬಳೆ ಖಡಕ್ಕಾಗಿ ಸೂಚಿಸಿದರು .

ಪಟ್ಟಣದ 7,15, 18, 22 ವಾರ್ಡುಗಳಲ್ಲಿರುವ ದಲಿತರ ಕೇರಿಗಳಲ್ಲಿ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿ, ಸರಕಾರ ಪ್ರತಿ ಬಾರಿ ವಾರ್ಡುಗಳ ವಿಂಗಣೆ ಮಾಡುತ್ತವೆ ಅದರಲ್ಲಿ ದಲಿತರ ಕೇರಿಗಳು ಕೂಡಾ ಜನರಲ್ ವಾರ್ಡು ಎಂದು ಘೋಷಣೆ ಮಾಡುತ್ತದೆ ಅಲ್ಲಿ ವಾರ್ಡ ಸದಸ್ಯರು ಮುಖ್ಯವಲ್ಲ ಎಲ್ಲಿ ಎಸ್‍ಸಿ ಜನರಿರುತ್ತಾರೆ ಅವರ ಕೇರಿಗಳನ್ನು ಆಯ್ಕೆ ಮಾಡಿಕೊಂಡು ಕಾಮಗಾರಿಗಳನ್ನು ಹಾಕಿಕೊಳ್ಳಬೇಕು ಅದನ್ನು ಬಿಟ್ಟು ಅಧಿಕಾರಿಗಳು ಪುರಸಭೆ ಸದಸ್ಯರ ಒತ್ತಡಕ್ಕೆ ಮಣಿದು ಎಲ್ಲೆಂದರಲ್ಲಿ ಕಾಮಗಾರಿಗಳನ್ನು ಹಾಕುತ್ತಿರುವುದರಿಂದ ಸ್ವಾತಂತ್ರ್ಯ ದೊರೆತು 75 ವರ್ಷಗಳು ಗತಿಸಿದರು ಕೂಡಾ ದಲಿತರ ಕೇರಿಗಳು ಮಾತ್ರ ಹಳೆ ಶತಮಾನದಲ್ಲಿ ಇದ್ದದ್ದು ನಾಚಿಕೆ ಪಡುವಂತಾಗಿದೆ ಅಲ್ಲದೆ ವಾರ್ಡ 7 ರಲ್ಲಿ ಕೆಲವು ಕಾಮಗಾರಿಗಳು ಕೈಗೊಂಡಿದ್ದೇವೆ ಎಂದು ಬಿಲ್ಲು ಎತ್ತಿ ಹಾಕಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಕಾಮಗಾರಿಗಳು ಆಗಿಲ್ಲ ಎನ್ನುವುದಕ್ಕೆ ಇಲ್ಲಿ ಜನರು ಹೇಳುವ ಹೇಳಿಕೆಯ ಮೇಲೆ ಗೊತ್ತಾಗುತ್ತದೆ ಎಂದು ಪುರಸಭೆ ಕಿರಿಯ ಅಭಿಯಂತರ ಲಿಂಗರಾಜ ಗುಡಿಮನಿ ಅವರನ್ನು ತರಾಟೆಗೆ ತೆಗೆದುಕೊಂಡರು.

ದೂರುದಾರ ಡಿಎಸ್‍ಎಸ್ ಉತ್ತರ ವಲಯ ಸಂಚಾಲಕ ಅಶೋಕ ಸುಲ್ಪಿ ಮಾತನಾಡಿ, ಪೌರಸೇವಾ ನೌಕರರು ಇರುವ ಕೇರಿಗಳಲ್ಲಿಯೇ ಗಟಾರುಗಳು ತುಂಬಿವೆ ಸ್ವಚ್ಚತೆ ಎಂಬುದು ಮರೆತಂತಾಗಿದೆ ನೌಕರರನ್ನು ವಿಚಾರಿಸಿದರೆ ಅಧಿಕಾರಿಗಳ ಸೂಚನೆಯ ಮೆರೆಗೆ ಕೆಲಸ ಮಾಡಬೇಕಾಗುತ್ತದೆ ಬೇರೆ ಬೇರೆ ವಾರ್ಡುಗಳಲ್ಲಿ ನಿಯೋಜನೆ ಮಾಡಿದ್ದಾರೆ ಎಂದು ಪ್ರತಿನಿತ್ಯ ಉತ್ತರಗಳು ಕೇಳಿ ಬರುತ್ತಿವೆ ಹೀಗಿರುವಾಗ ದಲಿತರಿಗಾಗಿಯೇ ಸರಕಾರ ಎಸ್‍ಸಿಪಿಟಿಎಸ್‍ಪಿ ಯೋಜನೆಯಡಿ ಸಾಕಷ್ಟು ಅನುದಾನ ನೀಡುತ್ತಿದೆ ಆದರೆ ಪುರಸಭೆಯ ಅಧ್ಯಕ್ಷರ ಶಿಫಾರಸ್ಸಿನಲ್ಲಿ ಯಾವೊಬ್ಬ ಸದಸ್ಯರು ಧ್ವನಿ ಎತ್ತುತ್ತಿಲ್ಲ ಅವರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಜೈಭೀಮ ನಗರದಲ್ಲಿ 2011ರಲ್ಲಿ ಬಜಂತ್ರಿ ತಹಶೀಲ್ದಾರರು ಕಾಮಗಾರಿ ಮಾಡಿಸಿದನ್ನು ಬಿಟ್ಟರೆ ಇಲ್ಲಿಯವರೆಗೆ ಯಾವುದೇ ಕೆಲಸ ಮಾಡಿಲ್ಲ ಅದೇ ಹೆಸರುಗಳ ಮೇಲೆ ಬಿಲ್ಲುಗಳನ್ನು ಎತ್ತಿ ಹಾಕುತ್ತಿದ್ದಾರೆ ಅಲ್ಲದೆ ಹೊಲೇರ ಓಣಿ, ಮಾದರ ಓಣಿ, ವಡ್ಡರ ಓಣಿ ಮುಖ್ಯ ದಲಿತರ ಕೇರಿಗಳು ಅಲ್ಲಿನ ವಾಸ್ತವ ಸ್ಥಿತಿ ಅರಿತು ಯಾವೊಬ್ಬ ಅಧಿಕಾರಿಗಳು ದಲಿತರಿಗಾಗಿ ಬರುವಂತ ಅನುದಾನ ಸರಿಯಾಗಿ ಬಳಕೆ ಮಾಡುವಲ್ಲಿ ವಿಫಲರಾಗಿದ್ದಾರೆ. 22ನೇ ವಾರ್ಡನಲ್ಲಿ ಎಸ್‍ಟಿ ಜನರಿಲ್ಲದಿದ್ದರು ಅಲ್ಲಿ ರೂ 1.63 ಲಕ್ಷ ಅನುದಾನ ಹಾಕಿದ್ದಾರೆ. ಹೀಗೆ ಹಲವು ಕಡೆಗಳಲ್ಲಿಯೂ ಇಂತಹ ಪ್ರಮಾದಗಳು ಸಾಕಷ್ಟಿವೆ ಇವುಗಳ ಬಗ್ಗೆ ಸರಿಯಾಗಿ ಪರಿಶೀಲಿಸಿ ಸೂಕ್ತ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಚಾಲಕ ಚಂದ್ರಕಾಂತ ಜಾಬನವರ, ಪ್ರವೀಣ ಆಲಹಳ್ಳಿ, ಮಹೇಶ ಜಾಬನವರ, ಮಿನಾಕ್ಷಿ ಅಂಬಣ್ಣ ಸುಲ್ಪಿ ಅವರು ದಲಿತರ ಕೇರಿಗಳ ಬಗ್ಗೆ ನಿಗಾ ವಹಿಸಿ ಸುಸಜ್ಜಿತ ಕೇರಿಗಳನ್ನು ನಿರ್ಮಾಣ ಮಾಡಲು ಸೂಚಿಸಿ ಎಂದು  ವಿನಂತಿಸಿದರು.

ಈ ಸಂದರ್ಭದಲ್ಲಿ  ನಾಗರಿಕ ಹಕ್ಕು ಜಾರಿ ನಿರ್ದೇಶನಾಯಲದ ಪಿಎಸ್‍ಐ ಎಂ.ಜಿ.ಬೋಸಲೆ, ಸಿಬ್ಬಂದಿ ಎಂ.ಎಂ.ಉಮದಿ, ಎಮ್.ಪಿ.ಪತ್ತಾರ, ಸಂಪತ್ ಮೈಲಿಕರ, ಪುರಸಭೆ ಕಿರಿಯ ಅಭಿಯಂತರ ಲಿಂಗರಾಜ ಗುಡಿಮನಿ, ಎ.ಜೆ.ನಾಟೀಕಾರ, ಸಿಬ್ಬಂದಿ ಶಿವಾಜಿ ಕೊಡ್ಗೆ ಇದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!