ನಮ್ಮ ಪಾತ್ರದಲ್ಲಿ ಸತ್ಯ, ಧರ್ಮ ಇದ್ದಷ್ಟು ಉತ್ತಮ ಜೀವನ ಇರುತ್ತದೆ

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...

ರಾಜರ ಕಾಲದಲ್ಲಿ ರಾಜನೆ ದೇವರು ಎನ್ನುತ್ತಿದ್ದರು. ಈಗ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳೇ ದೇವರೆ? ಪ್ರಜೆಗಳೇ ರಾಜಕಾರಣಿಗಳಿಗೆ ದೇವರೆ? ದುಡ್ಡಿದ್ದವನೆ ದೊಡ್ಡಪ್ಪ. ಜನಬಲ, ಹಣಬಲದಿಂದ ಬಂಗಲೆಗಳಲ್ಲಿ ವಾಸ ಮಾಡೋರಿಗೆ ಜನರೆ ದೇವರಾಗುತ್ತಾರೆ.

ಅದಕ್ಕೆ ಅಭಿಮಾನಿ ದೇವತೆಗಳೆನ್ನುತ್ತಾ ಜನರನ್ನು ಆಕರ್ಷಿಸುವುದು. ಇದರಿಂದಾಗಿ ಜನಜೀವನದಲ್ಲಿ ಯಾವ ರೀತಿಯ ಬದಲಾವಣೆ ಆಗಿದೆ?ದೇಶಕ್ಕೆ ನಮ್ಮಿಂದ ಏನು ಲಾಭವಾಗಿದೆ? ನಷ್ಟವಾಗಿದೆ? ಎಂದು ಚಿಂತನೆ ಮಾಡಿದರೆ ಈಗ ಇವರ ಹಿಂದೆ ಮುಂದೆ ನಡೆದ ಮಾನವನಿಗೆ ದೊಡ್ಡ ಸಮಸ್ಯೆಗಳೇ ಹೆಚ್ಚಾಗಿದೆ.

ಸಾಮಾನ್ಯಜ್ಞಾನವಿಲ್ಲದೆ ಹಣ,ಅಧಿಕಾರ,ಸ್ಥಾನ,ಪ್ರತಿಷ್ಠೆ, ಪದವಿಗಳನ್ನು ಪಡೆಯಲು ಜನಬಲ ಇದ್ದರೆ ಸುಲಭ.ಜ್ಞಾನಬಲವಿಲ್ಲದೆ ಪಡೆದರೆ ಕಷ್ಟ ನಷ್ಟ. ರಾಜನಂತೆ ದೇಶರಕ್ಷಣೆ, ರಾಜ್ಯರಕ್ಷಣೆ ಮಾಡೋ ಕಾಲ ಹೋಯಿತು. ದೇಶರಕ್ಷಣೆ ಮಾಡೋ ಸೈನಿಕರಂತೂ ಈಗ ಇದ್ದಾರೆ.

- Advertisement -

ಆದರೆ ದೇಶದ ಒಳಗೇ ನಾಟಕವಾಡಿಕೊಂಡು ಬೆಳೆದಿರುವ ಶತ್ರುಗಳನ್ನು ಓಡಿಸುವ ಸ್ವಾತಂತ್ರ್ಯ ಇಲ್ಲವಾದರೆ ಇಲ್ಲಿ ಯಾರ ರಕ್ಷಣೆಯಾಗುತ್ತಿದೆ? ದೇವರು ಯಾರನ್ನು ರಕ್ಷಣೆ ಮಾಡುತ್ತಿರುವುದು? ಆತ್ಮವೇ ದೇವರು ಪ್ರತಿಯೊಬ್ಬರೊಳಗಿನ ಈ ಶಕ್ತಿಯನ್ನು ಮರೆತು ಹೊರಗೆ ಹುಡುಕಿದರೆ ಸಿಗುವುದಿಲ್ಲ. ಹಿಂದಿನ ಕಾಲದಿಂದಲೂ ದೇವತಾರಾಧನೆ ನಡೆಸಿಕೊಂಡು ಬಂದಿರುವವರಿಗೆ ಈಗ ಕೊರೊನ ಸಮಯದಲ್ಲಿ ಒಳಗಿರಿಸಿ ಒಳಗಿನ ದೇವರನ್ನು ಪೂಜಿಸಿ ಬೇಡಿಕೊಂಡರೆ ಜೀವರಕ್ಷಣೆ ಜೊತೆಗೆ ಆತ್ಮರಕ್ಷಣೆ ಆಗುವುದೆನ್ನುವ ಸಂದೇಶ ನೀಡಿ ಜನರನ್ನು ರಕ್ಷಿಸಿರೋದು ಸರ.

ಆ ಸಮಯದಲ್ಲಿ ಹೊರಗೆ ಇದ್ದ ವೈದ್ಯರು, ಸಮಾಜಸೇವಕರು, ರಾಜಕೀಯ ವ್ಯಕ್ತಿಗಳ ಶ್ರಮಕ್ಕೆ ಬೆಲೆಕಟ್ಟಲು ಕಷ್ಟ. ಇಲ್ಲಿ ನಾವು ದೇವರನ್ನು ಸ್ಮರಿಸಬಹುದಲ್ಲವೆ? ಸರ್ಕಾರದ ಪ್ರತಿಯೊಂದು ಹೆಜ್ಜೆ ಹಿಂದೆ ಸಾಕಷ್ಟು ಜನರ ಸಹಾಯ, ಪ್ರೇರಣೆ, ಸಹಕಾರ, ಶ್ರಮ, ವಿದ್ಯೆ, ಜ್ಞಾನ ಅಡಗಿದೆ. ಈಗ ಕೊರೊನ ಲಾಕ್ಡೌನ್ ತೆಗೆದಾಕ್ಷಣ ಮತ್ತದೇ ಜೀವನ ಶೈಲಿ ಹೋರಾಟ, ಹಾರಾಟ, ಮಾರಾಟದ ರಾಜಕೀಯತೆಯನ್ನು ಮಧ್ಯವರ್ತಿಗಳು ಹೆಚ್ಚಿಸಿ ಜನರ ಮನಸ್ಸನ್ನು ಹಾಳು ಮಾಡಿದರೆ ಅದೇ ರೀತಿಯ ರೋಗ ಹರಡುತ್ತದೆ.

ದೈವಶಕ್ತಿಯನ್ನು ಬೆಳೆಸಿಕೊಂಡು ಜೀವನದ ಸತ್ಯ ತಿಳಿಯಲು ರಾಜಕೀಯ ಬೇಕೆ? ಎಲ್ಲಾ ಅವರವರ ಮಟ್ಟಿಗೆ ಸರಿಯೆ ಇದ್ದಾರೆ ಆದರೆ ಸಮಾಜ, ದೇಶದಲ್ಲಿ ಶಾಂತಿ, ನೆಮ್ಮದಿ, ತೃಪ್ತಿ ಇಲ್ಲವೆಂದರೆ ನಮ್ಮಲ್ಲಿ ದೇವರಿಲ್ಲ. ದೈವತ್ವ ಪಡೆಯಲು ಮಹಾತ್ಮರುಗಳು ನಡೆದ ರೀತಿ ನೀತಿ ಪ್ರಚಾರಕರು ಪ್ರಚಾರ ಮಾಡುತ್ತಿದ್ದಾರೆ.

ಆದರೂ ನಮ್ಮ ನಡೆ ನುಡಿಯಲ್ಲಿ ಇರದ ಸತ್ಯ,ಧರ್ಮ ದೇವರನ್ನು ಹೇಗೆ ತೋರಿಸಬಹುದು? ನಮಗೆ ಯಾರು ಏನು ಕೊಟ್ಟರೂ ದೇವರಾದರೆ, ಶಿಕ್ಷೆ ಕೊಡುವುದೂ ದೇವರಲ್ಲವೆ? ಮಕ್ಕಳಲ್ಲಿ ಅಡಗಿರುವ ದೈವ ಶಕ್ತಿ ಬೆಳೆಸದೆ ಅವರನ್ನು ರಾಜಕೀಯದೆಡೆಗೆ ನಡೆಸೋ ಪೋಷಕರನ್ನು ಮಕ್ಕಳು ದೇವರೆನ್ನಲು ಕಷ್ಟ.

ಒಟ್ಟಿನಲ್ಲಿ ದೇವರು ಸರ್ವಾಂತರ್ಯಾಮಿ, ಸರ್ವರಕ್ಷಕ ಎನ್ನುವ ಹಿಂದೂಗಳ ನಂಬಿಕೆ ಹಿಂದುಳಿಯಲು ಕಾರಣ ನಾನೇ ದೇವರೆಂದು ಹಣಬಲ, ಜನಬಲದಿಂದ ಹೊರಗೆ ವ್ಯವಹಾರ ನಡೆಸಿರುವ ರಾಜಕೀಯತೆ. ಇದು ಎಲ್ಲಾ ಕ್ಷೇತ್ರ ತಲುಪಿ ಇದರಿಂದ ಹೊರಬರಲಾಗದೆ ಅಧರ್ಮ ಹೆಚ್ಚಿದೆ.

ತಾಯಿಯೇ ದೇವರು,ಸತ್ಯವೇ ದೇವರು,ತಂದೆಯೇ ದೇವರು, ಗುರುವೇ ದೇವರು, ನ್ಯಾಯವೇ ದೇವರು, ಧರ್ಮವೇ ದೇವರು, ಭೂಮಿ, ಪ್ರಕೃತಿ, ಆಕಾಶದವರೆಗೆ ಆವರಿಸಿರುವ ದೈವ ಶಕ್ತಿ ಮೂಲದಲ್ಲಿಯೇ ಮರೆ ಆದರೆ ಜೀವಕ್ಕೆ ಮುಕ್ತಿ ಎಲ್ಲಿ? ಜೀವ ಎಲ್ಲಿಂದ ಹುಟ್ಟಿ ಬೆಳೆಯಿತೋ ಅಲ್ಲಿಯೇ ಗುರು ಹಾಗು ಗುರಿ ಕಾಣದೆ ಹೊರಗೆ ಬಂದ ಮೇಲೆ ಕಾಣುವುದೆ?

ಜೀವಕೊಟ್ಟು ಹೆತ್ತ ತಾಯಿ ವಿದ್ಯೆ ಕೊಟ್ಟು ಜೀವನ ತೋರಿಸಿದ ತಂದೆಯ ಸರಿಯಾಗಿ ತಿಳಿಯದೆ ಹೊರಗಿನ ದೇವರನ್ನು ಬೇಡಿ,ಕಾಡಿ ಬದುಕಿದರೆ ತಿರುಗಿ ಬರೋದು ಕಷ್ಟ.ಈಗಲೂ ಕಾಲ ಮಿಂಚಿಲ್ಲ ದುಷ್ಕರ್ಮದ ಫಲ ಅನುಭವಿಸೋದಕ್ಕೂ ಸತ್ಕರ್ಮ ಮಾಡಲೇಬೇಕು.

ಹೀಗಾಗಿ ಮಕ್ಕಳಿಗೆ ಸತ್ಯ ಧರ್ಮದ ಪಾಠವಿದ್ದರೆ ದುಷ್ಟರು ಬೆಳೆಯೋದಿಲ್ಲ. ಎಲ್ಲಾ ಶಕ್ತಿ ನಮ್ಮೊಳಗಿದೆ. ನಮ್ಮನ್ನು ನಾವು ತಿಳಿಯದಿದ್ದರೆ ಜೀವನಕ್ಕೆ ಅರ್ಥವಿರೋದಿಲ್ಲ. ಬೇರೆಯವರ ಕಥೆ,ಪುರಾಣಗಳನ್ನು ಓದಿಕೊಂಡು ಸಂಶೋಧಕರಾಗಿ ಭೌತಿಕದಲ್ಲಿ ಮುಂದೆ ನಡೆದಂತೆಲ್ಲಾ ನಮ್ಮೊಳಗಿನ ಸತ್ಯ ಹಿಂದುಳಿದು ನಮ್ಮ ಕಥೆ ನಮಗೆ ಅರ್ಥ ಆಗೋದಿಲ್ಲ.

ಬೇರೆಯವರ ವ್ಯಥೆಯ ಕಥೆಯನ್ನು ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ವ್ಯಥೆಯೇ ಹೆಚ್ಚಾದರೆ ಸಮಸ್ಯೆ ಎಲ್ಲಿಂದ ಹುಟ್ಟುತ್ತಿದೆ? ಪ್ರಚಾರಕರ ನಾಟಕದ ಜೀವನ ನಿಜ ಜೀವನದಲ್ಲಿ ಯಾವ ಪರಿಣಾಮ ಬೀರುವುದೆನ್ನುವ ಬಗ್ಗೆ ಚಿಂತನೆ ನಡೆಸಿದ್ದರೆ ಇಷ್ಟು ಕ್ರಾಂತಿ  ಇರುತ್ತಿರಲಿಲ್ಲ. ಎಲ್ಲಾ ಮಾನವನ ಮನಸ್ಸಿನ ಪ್ರಭಾವ.

ಅಭಿಮಾನಿಗಳು ದೇವರಾಗಿದ್ದರೆ ನಾಟಕವಾಡೋರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದರು. ಸೂತ್ರದಾರ ಬೇರೆಯೇ ಇದ್ದಾನೆ ಇಲ್ಲಿ ಎಲ್ಲಾ ಪಾತ್ರಧಾರಿಗಳೆ. ನಮ್ಮ ನಮ್ಮ ಪಾತ್ರದಲ್ಲಿ ಸತ್ಯ ಧರ್ಮ ಎಷ್ಟಿದೆಯೋ ಅಷ್ಟು ಉತ್ತಮ ಜೀವನ.ಆಗ ನಾಟಕದ ಅಂತ್ಯವೂ ಚೆನ್ನಾಗಿರುತ್ತದೆ.ನಮ್ಮ ನಾಟಕದ ಸತ್ಯ ನಮ್ಮೊಳಗಿರುತ್ತದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!