spot_img
spot_img

ಸಿಲಿಕಾನ್ ಸಿಟಿ ಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ

Must Read

spot_img

ಬೆಂಗಳೂರು: ರಾಜ್ಯದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಶುರುವಾಗಿದೆ – ವಿಶೇಷ ಉಡುಗೆತೊಡುಗೆಯಲ್ಲಿ ಮಕ್ಕಳು ಗಮನ ಸೆಳೆಯುತ್ತಾ ಇದ್ದರೆ ನಗರದ ಬನಶಂಕರಿ 3 ನೇ ಹಂತದ ಶ್ರೀಮತಿ ಮಹಿಮಾ ಅಜಯ್ ಬಾಯರಿ ಮತ್ತು ಅಜಯ್ ಗಣಪಯ್ಯ ಬಾಯರಿ ದಂಪತಿಯ ಸುಪುತ್ರ ಅಭಿರಾಮ್ ( 2.5 years) ವರ್ಷದ ಬಾಲಕ ಶ್ರೀ ಕೃಷ್ಣನ ವೇಷ ಧರಿಸಿ ಕೈಯಲ್ಲಿ ಡೈರಿ ಮಿಲ್ಕ್ ಚಾಕೊಲೇಟ್ ಹಿಡಿದು ಮಂದಹಾಸ ಬೀರಿದ್ದು ಹೀಗೆ.

ಹಿಂದುಗಳ ಪವಿತ್ರ ಹಬ್ಬವಾದ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣ ಮತ್ತು ರಾಧೆಯ ದೇವಾಲಯಗಳಲ್ಲಿ ನಗರದ ಇಸ್ಕಾನ್ ದೇವಾಲಯದಲ್ಲಿ ವಿಶೇಷವಾದ ಪೂಜೆ ನಡೆಯುತ್ತಿದೆ, ಹಾಗೂ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಹಾಗೂ ಪರಮಪೂಜ್ಯ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಗಳ ಆದೇಶ ಅನುಗ್ರಹದೊಂದಿಗೆ ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ರಾಯರ ಮಠದಲ್ಲಿ ಜನ್ಮಾಷ್ಟಮಿಯ ಪ್ರಯುಕ್ತ ರಾಯರ ಸನ್ನಿಧಿಯಲ್ಲಿ ಆಗಸ್ಟ್ 18 ರ ನಿನ್ನೆ ಸಂಜೆ 7: 30 ರಿಂದ ನೃತ್ಯುಷಾ ಡಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳಿಂದ”ಭರತನಾಟ್ಯ” ಪ್ರದರ್ಶನ ಸುಧೀಂದ್ರ ದೇಸಾಯಿ ಅವರ ಸಹಕಾರ ದೊಂದಿಗೆ ಕಾರ್ಯಕ್ರಮವು ವಿದುಷಿ- ಶ್ರೀಮತಿ ನಾಗಶ್ರೀ ಸಾತ್ವಿಕ್ ನಿರ್ದೇಶನದಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮ ದಲ್ಲಿ ಶ್ರೀ ಕೃಷ್ಣ ವೇಷ ಧರಿಸಿ ಸಣ್ಣಬಾಲಕ ನಿಂತಿದ್ದರೆ – ಅವನ ಸುತ್ತ ಪುಟ್ಟ ಪುಟ್ಟ ಮಕ್ಕಳು “ಭರತನಾಟ್ಯ” , ಮಾಡುವ ಮೂಲಕ ಶ್ರೀ ಮಠ ಕ್ಕೆ ಬಂದಿದ್ದ ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸಿತ್ತು.

ಶ್ರೀಮಠದಲ್ಲಿ ಆರ್ ಕೆ ವಾದೀಂದ್ರಆಚಾರ್ಯರ ನೇತೃತ್ವದಲ್ಲಿ ,
ನಂದ ಕಿಶೋರ್ ಆಚಾರ್ಯರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಅಲಂಕಾರದೊಂದಿಗೆ ಮಹಾ ಮಂಗಳಾರತಿ ನೆರವೇರಿತು.

ಎಲ್ಲೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ, ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕೃಷ್ಣ ಹಾಗೂ ರಾಧೆಯ ವೇಷ ತೊಟ್ಟ ಮಕ್ಕಳು ಗಮನ ಸೆಳೆಯುತ್ತಿದ್ದಾರೆ, ವಿವಿಧ ಸ್ಪರ್ಧೆಗಳು ಕೂಡ ನಡೆಯುತ್ತಿವೆ, ಹೀಗಾಗಿ ಕೃಷ್ಣ ಜನ್ಮಾಷ್ಟಮಿಯ ಹಬ್ಬ ಎಲ್ಲರಲ್ಲೂ ಸಡಗರ ತಂದಿದೆ.

ಆಗಸ್ಟ್ 18 ಮತ್ತು 19 ಎರಡು ದಿನಗಳ ಕಾಲ ಕೃಷ್ಣ ಜನ್ಮಾಷ್ಟಮಿಯ ಆಚರಣೆ ನಡೆಯಲಿದೆ.


ಚಿತ್ರ ಕೃಪೆ: ಮಹೇಶ್ , ಮಂಜುನಾಥ್ ಸ್ಟುಡಿಯೋ , ಬೆಂಗಳೂರು.

ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!