spot_img
spot_img

ರೈತರ ಹಿತ ದೃಷ್ಟಿಯಿಂದ ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಗುವಂತಾಗಬೇಕು : ಇಜಾಜ ಅಹ್ಮದ್ ಕೊಟ್ಟಲಗಿ

Must Read

spot_img
- Advertisement -

ಮೂಡಲಗಿ: ರೈತರು ಬೆಳೆದಿರುವ ಕಬ್ಬಿಗೆ ನ್ಯಾಯಯುತ ವೈಜ್ಞಾನಿಕ ಬೆಲೆ ಲಭ್ಯವಾಗದೆ ಪರದಾಡುತ್ತಿರುವ ಅನ್ನದಾತರ ಪರಿಸ್ಥಿತಿಯನ್ನು ಆಮ್ ಆದ್ಮಿ ಪಕ್ಷ ಅರಭಾವಿ ಕ್ಷೇತ್ರ ವ್ಯಾಪ್ತಿಯಿಂದ ತೀವ್ರವಾಗಿ ಖಂಡಿಸುತ್ತೇವೆ ಎಂದು ಆಮ್ ಆದ್ಮಿ ಮುಖಂಡ ಇಜಾಜಅಹ್ಮದ್ ಕೊಟ್ಟಲಗಿ ಹೇಳಿದರು

ಬುಧವಾರದಂದು ಮೂಡಲಗಿ ತಹಶೀಲ್ದಾರ್ ಮುಖಾಂತರ ಕರ್ನಾಟಕ ಸರ್ಕಾರದ ಸಕ್ಕರೆ ಸಚಿವಾಲಯದ ನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಸಗೊಬ್ಬರಗಳ ದರ ದಿನದಿಂದ ದಿನಕ್ಕೆ ಏರುತಲಿದ್ದು, ಕಬ್ಬಿನ ದರ ಮಾತ್ರ ಕಳೆದ 7ವರ್ಷಗಳಿಂದ ಒಂದೇ ದರ ನಿಗದಿ ಮಾಡುತ್ತಿರುವುದು ದುರದೃಷ್ಟಕರ ಸಂಗತಿ,  ಎಫ್.ಆರ್.ಪಿ ದರದಲ್ಲಿ ರೈತರ ಕೃಷಿ ವೆಚ್ಚವನ್ನು ಕಡಿಮೆ ಮಾಡಿ ಎಚ್.ಆರ್.ಪಿ ನಿಗದಿ ಪಡಿಸಿರುವುದು ಹಾಗೂ ಕಬ್ಬು ಸಾಗಾಟ ವೆಚ್ಚವು 1ಕಿಮೀ ಯಿಂದ 100ಕಿಮೀ ಒಂದೇ ಇರುವುದು ಅವೈಜ್ಞಾನಿಕವಾಗಿದೆ ಎಂದು ಅಭಿಪ್ರಾಯ ಪಟ್ಟರು.

ನಮ್ಮ ಆಮ್ ಆದ್ಮಿ ಪಕ್ಷದ ಆಡಳಿತವಿರುವ ಪಂಜಾಬನಲ್ಲಿ ಕರ್ನಾಟಕಕ್ಕಿಂತ ರಿಕವರಿ ಕಡಿಮೆ ಇದ್ದರೂ 3800 ರೂ ಪ್ರತಿ ಟನ್ ಗೆ ದರ ನಿಗದಿ ಇದ್ದು,ಕರ್ನಾಟಕ ರೈತ ಸಂಘದವರು ಬೇಡಿಕೆ ಇಟ್ಟ ಕನಿಷ್ಠ 3800 ರೂ ಬೆಲೆ ನ್ಯಾಯಯುತವಾಗಿದೆ, ವಿದ್ಯುತ್ ತಯಾರಿಕೆ, ಎಥೆನಾಲ್, ಆಲ್ಕೋಹಾಲ್ ನಂತಹ ಕಬ್ಬಿನ ಉಪ ಉತ್ಪನ್ನಗಳಿಂದ ಅಪಾರ ಆದಾಯವಿದ್ದು,ಸರಕಾರಕ್ಕೆ 4500ರೂ ತೆರಿಗೆ ಸಂಗ್ರಹ ವಾಗುತ್ತಿದೆ, ಇದರಲ್ಲಿ ಪ್ರತಿ ಟನ್ ಗೆ 2000ರೂ ರೈತರಿಗೆ ಮರಳಿ ನೀಡುವಂತಹ ವ್ಯವಸ್ಥೆಯಾಗಬೇಕೆಂದರು. ಸರಕಾರ ಸಕ್ಕರೆ ಕಾರ್ಖಾನೆಗಳ ಹಿತವನ್ನು ಮಾತ್ರ ಕಾಯದೆ ರೈತರ ಹಿತದೃಷ್ಟಿಯನ್ನು ಕೂಡ ಗಮನದಲ್ಲಿಟ್ಟುಕೊಂಡು ಕಬ್ಬಿಗೆ ವೈಜ್ಞಾನಿಕ ಬೆಲೆ ಆದಷ್ಟು ಬೇಗ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

- Advertisement -

ಈ ಸಂಧರ್ಭದಲ್ಲಿ ಬಾಪೂ ಶೇಖ್ , ಕಮಲ್ ಗಸ್ತಿ, ಸದ್ದಾಮ ಮಂಟೂರ, ಮೋಶಿನ್ ಶೇಖ್ ಸರಿದಂತೆ ಆಮ್ ಆದ್ಮಿ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿರಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group