ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ?- ಕಾಶೆಂಪೂರ ಪ್ರಶ್ನೆ

0
660

ಬೀದರ– ಇವತ್ತು ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ? ಬಿಜೆಪಿಯಲ್ಲಿ ಇಲ್ಲವಾ? ಎಲ್ಲ ಕಡೆಯೂ ಇದೆ. ನಮ್ಮ ಪಕ್ಷದಲ್ಲಿ ದೇವೇಗೌಡರ ಮಾತೇ ಕೊನೆ ಅವರು ಹೇಳಿದಂತೆ ಕೇಳುತ್ತೇವೆ ಎಂದು ಬೀದರ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ ಹೇಳಿದರು.

ಹಾಸನದಲ್ಲಿ ಜೆಡಿಎಸ್ ಟಿಕೆಟ್ ಗೊಂದಲ ವಿಚಾರ ಕುರಿತಂತೆ ಬೀದರ್ ನಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಜನ ಗೊಂದಲಕ್ಕೆ ಒಳಗಾಗಬಹುದು  ಆದರೆ ದೇವೇಗೌಡರ ಮನೆಯಲ್ಲಿ ಯಾರೂ ಗೊಂದಲಕ್ಕೆ ಒಳಗಾಗುವುದಿಲ್ಲ.

ನಾನು ದೇವೇಗೌಡ ಕುಟುಂಬಕ್ಕೆ ಬಹಳ ಹತ್ತಿರದವನು. ಅಲ್ಲಿ ಎಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತಾರೆ. ದೇವೇಗೌಡರ ವಾಣಿ ಏನು ಬರುತ್ತದೋ ಅದನ್ನು ಚಾಚೂ ತಪ್ಪದೆ ಎಲ್ಲರೂ ಪಾಲಿಸಬೇಕಾಗುತ್ತದೆ ಎಂದರು.

ಕುಮಾರಣ್ಣ, ರೇವಣ್ಣ, ಭವಾನಿ, ನಾನು, ಪ್ರಜ್ವಲ್ ಸೇರಿ ಎಲ್ಲರೂ ದೇವೇಗೌಡರ ವಾಕ್ಯ ಪಾಲಿಸುತ್ತೇವೆ. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ, ಬಿಜೆಪಿ, ಕಾಂಗ್ರೆಸ್ ನಲ್ಲೂ ಕುಟುಂಬ ರಾಜಕಾರಣ ಇದೆ. ಬೇರೆ ಪಕ್ಷ ಲೆಕ್ಕ ಹಾಕಿದರೇ ನಮ್ಮ ಪಕ್ಷ ಏನೂ ಅಲ್ಲ ಎಂದು ಕಾಶೆಂಪೂರ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ