ಬಾಗಲಕೋಟೆ : ಜಿಲ್ಲೆಯ ಬೀಳಗಿ ತಾಲೂಕಿನ ತಾಲೂಕಿನ ಬಾಡಗಂಡಿಯಲ್ಲಿ ಎಸ್ ಆರ್ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ “ನಿಮ್ಮನ್ನು ಹೆತ್ತವರ ಮಂದಿರ” ವನ್ನು ಪರಮ ಪೂಜ್ಯರು ಹಾಗೂ ಸಚಿವರು ಮತ್ತು ಗಣ್ಯರೊಂದಿಗೆ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಪ.ಪೂಜ್ಯ ಫಕೀರದಿಂಗಾಲೇಶ್ವರ ಸ್ವಾಮಿಗಳು, ಹರಿಹರ ತಾಲೂಕಿನ ಎರೆ ಹೊಸಳ್ಳಿಯ ರೆಡ್ಡಿ ಗುರು ಪೀಠದ ವೇಮನಂದ ಮಹಾಸ್ವಾಮಿಗಳು, ಗೃಹ ಸಚಿವ ಡಾ ಜಿ ಪರಮೇಶ್ವರ, ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ,ಸಂಸದ ಪಿ ಸಿ ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯರಾದ ಪಿ ಎಚ್ ಪೂಜಾರ ಹಣಮಂತ ನಿರಾಣಿ ಮತ್ತು ಮಾಜಿ ಸಚಿವ ಎಸ್ ಆರ್ ಪಾಟೀಲ ಬಾಗಲಕೋಟ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಬೆಳಗಾವ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ , ಡಾ ಎಂ ಕೆ ರಮೇಶಕುಮಾರ್ ,ಡಾ ನವೀನ ಎಸ್, ಎಮ್ ಎನ್ ಪಾಟೀಲ, ಎಲ್ ಬಿ ಕುರ್ತಕೋಟಿ, ಎಸ್ ಸಿ ಮೋಟಗಿ, ದಯಾನಂದ ಪಾಟೀಲ ಸೇರಿದಂತೆ ಹಿತೈಷಿಗಳು, ಅಭಿಮಾನಿಗಳು ಬಂಧು ಮಿತ್ರರು ಉಪಸ್ಥಿತರಿದ್ದರು.