spot_img
spot_img

ಭಗೀರಥ ಮಹರ್ಷಿ ಮೂರ್ತಿಯ ಅನಾವರಣ ಕಾರ್ಯಕ್ರಮ

Must Read

- Advertisement -

ಮೂಡಲಗಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಮಹರ್ಷಿ ಭಗೀರಥ ಮೂರ್ತಿಯ ಅನಾವರಣ ಹಾಗೂ ಉಪ್ಪಾರ ಸಮಾಜದವರಿಂದ ಸತ್ಕಾರ ಸಮಾರಂಭವು ಆಗಸ್ಟ್ ೫ರಂದು ಬೆಳಿಗ್ಗೆ ೧೦ ಗಂಟೆಗೆ ಸತ್ಯಭಾಮಾ ರುಕ್ಮಿಣಿ ಬಾಳಪ್ಪ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಮೂಡಲಗಿ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ರಾಮಣ್ಣ ಹಂದಿಗುಂದ ತಿಳಿಸಿದ್ದಾರೆ.

ಶನಿವಾರ ಸತ್ಯಭಾಮಾ ರುಕ್ಕಿಣಿ ಬಾಳಪ್ಪ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಚಿತ್ರದುರ್ಗದ ಹೊಸದುರ್ಗದ ಜಗದ್ಗುರು ಚಿನ್ಮೂಲಾದ್ರಿ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿಗಳು,ಮೂಡಲಗಿಯ ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮೀಜಿ, ಸುಣದೋಳಿಯ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿಗಳು, ಬಾಗೋಜಿ ಕೊಪ್ಪದ ಡಾ.ಶಿವಲಿಂಗಮುರುಘರಾಜೇಂದ್ರ ಸ್ವಾಮೀಜಿಗಳು, ಕಟಕಭಾಂವಿಯ ಧರೇಶ್ವರ ಪುಣ್ಯಾಶ್ರಮದ ಶ್ರೀ ಅಭಿನವ ಧರೇಶ್ವರ ಸ್ವಾಮೀಜಿಗಳು, ಉಪ್ಪಾರಹಟ್ಟಿಯ ಸಿದ್ದಾರೂಢ ಮಠ ನಾಗಲಿಂಗೇಶ್ವರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸುವರು.

- Advertisement -

ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿ, ವಿಪ ಸದಸ್ಯ ಲಖನ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ,ರಾಮಣ್ಣ ಹಂದಿಗುಂದ,  ಜ್ಯೋತಿ ಬೆಳಗಿಸುವರು ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಜಗಧೀಶ ಶೆಟ್ಟರ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಗುವದು

ಸಮಾರಂಭಕ್ಕೆ ಸಮಾಜದ ಹಾಗೂ ವಿವಿಧ ಸಮಾಜದ ಮುಂಖಡರು,ಜಿಪ, ತಾಪಂ, ಪುರಸಭೆ, ಪಪಂ ಸದಸ್ಯರು ಆಗಮಿಸುವರು. ಗುಡ್ಲಮಡ್ಡಿ ಶ್ರೀ ವೀರಭದ್ರೇಶ್ವರ ಗುಡಿಯಿಂದ ಸಕಲ ವಾಧ್ಯ ಮೇಳದೊಂದಿಗೆ ನೂರಾರು ಮಹಿಳೆಯರ ಕುಂಭಮೇಳ ಮೂರ್ತಿಯ ಮೆರವಣಿಗೆ ಜರುಗುವದು ನಂತರ ಮೂರ್ತಿ ಸ್ಥಾಪನೆ ಸಮಾರಂಭ ೧೧ಗಂಟೆಗೆ ಜರುಗುವದು

ಸಮಾರಂಭದಲ್ಲಿ  ಸುಮಾರು ೭ ಸಾವಿರ ಜನಸಂಖ್ಯೆ ಸೇರುವುದು ಎಂದು ನ್ಯಾಯವಾದಿ ಲಕ್ಷ್ಮಣ ಅಡಿಹುಡಿ ತಿಳಿಸಿದ್ದಾರೆ, ಪತ್ರಿಕಾ ಗೋಷ್ಠಿಯಲ್ಲಿ ಈಶ್ವರ ಕಂಕಣವಾಡಿ, ಮಹಾದೇವ ಕಂಕಣವಾಡಿ, ಸುಭಾಸ ಗೊಡ್ಯಾಗೋಳ, ಶಿವಪ್ಪ ಅಟ್ಟಿಮಟ್ಟಿ, ಅಜ್ಜಪ್ಪ ಕಂಕಣವಾಡಿ, ಮಹಾದೇವ ಕರಗಣ್ಣಿ, ಬರಮಪ್ಪ ಕಪ್ಪಲಗುದ್ದಿ, ಅಲ್ಲಪ್ಪ ಕಂಕಣವಾಡಿ, ಯಲ್ಲಪ್ಪ ಖಾನಟ್ಟಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group