- Advertisement -
ಸಿಂದಗಿ: ಆ.3 ರಂದು ನಡೆಯಬೇಕಿದ್ದ ಸಿಂದಗಿ ತಾಲೂಕಿನ ಆಹೇರಿ ಗ್ರಾಮದಲ್ಲಿರುವ 220 ಕೆ ವಿ ಸ್ಟೇಷನ್ ವಿದ್ಯುತ್ ಪ್ರಸರಣದ ಉದ್ಘಾಟನಾ ಕಾರ್ಯಕ್ರಮವು ಕಾರಣಾಂತರಗಳಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಳೆ ಅವಾಂತರದಿಂದ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತಲಿನ ಗುಡ್ಡ ಕುಸಿದ ಅಪಾರ ಹಾನಿಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ವಿ. ಸುನಿಲ್‍ಕುಮಾರ್ ರವರು ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡುವುದು ಅನಿವಾರ್ಯವಾಗಿದ್ದು.
ಆದ ಕಾರಣ ಮುಂದಿನ ದಿನಾಂಕವನ್ನು ಅತೀ ಶೀಘ್ರವಾಗಿ ತಿಳಿಸಲಾಗುವುದು ದಯವಿಟ್ಟು ಕಾರ್ಯಕರ್ತರು ರೈತ ಬಂಧುಗಳು ಸಹಕರಿಸಬೇಕು ಎಂದು ಶಾಸಕ ರಮೇಶ ಭೂಸನೂರ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.