ಕಲ್ಲೋಳಿ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಗಣಕಯಂತ್ರದ ಜ್ಞಾನ ಅಗತ್ಯ ಎಂದು ರಾಚವಿ ಬೆಳಗಾವಿ ಸಿಂಡಿಕೇಟ್ ಸದಸ್ಯರು ಹಾಗೂ ಸ್ಥಳೀಯ ತನಿಖಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಶಾಸ್ತ್ರಿ ಹೇಳಿದರು.
ಸಮೀಪದ ಕಲ್ಲೋಳಿ ಪಟ್ಟಣದ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ನೂತನ ಗಣಕಯಂತ್ರದ ಕೊಠಡಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಪ್ರತಿ ರಂಗದಲ್ಲೂ ಗಣಕಯಂತ್ರ ಅನಿವಾರ್ಯವಾಗಿದೆ. ಇದರ ಜ್ಞಾನ ಇದ್ದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಗಣಕಯಂತ್ರದ ತರಬೇತಿ ಪಡೆದು, ಆಯಾ ತರಗತಿ ಅಭ್ಯಾಸಕ್ಕೂ ಬಳಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್ನರಾದ ಬಸಗೌಡ ಶಿ. ಪಾಟೀಲ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನ ವೇಗದ ಜೊತೆಗೆ ಹೆಜ್ಜೆ ಹಾಕಲು ಇಂದಿನ ಯುವ ಪೀಳಿಗೆಗೆ ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಭವಿಷ್ಯವನ್ನು ರೂಪಿಸಿಕೊಳ್ಳಲು ಗಣಕಯಂತ್ರಗಳು ಸಹಾಯಕವಾಗಿವೆ. ಸೂಕ್ತ ರೀತಿಯಲ್ಲಿ ವಿದ್ಯಾರ್ಥಿಗಳು ಗಣಕಯಂತ್ರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಳಗಾವಿ ರಾಚವಿ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾದ ಡಾ. ಎಸ್.ಬಿ.ಉಕ್ಕಲಿ, ರಾಚವಿ ಸಹಾಯಕ ಪ್ರಾದ್ಯಾಪಕೀ ಡಾ. ಮಂಜುಳಾ ಜಿ.ಕೆ, ಬೆಳಗಾವಿ ರಾಚವಿ ಪ್ರಥಮ ದರ್ಜೆ ಸಹಾಯಕ ಸಂತೋಷ ಪಾಟೀಲ, ಸಂಸ್ಥೆಯ ಹಿರಿಯ ನಿರ್ದೇಶಕರುಗಳಾದ ಬಿ.ಎಸ್.ಗೊರೋಶಿ, ಬಿ.ಎಸ್.ಕಡಾಡಿ, ಸಾತಪ್ಪ ಖಾನಾಪೂರ, ಆಡಳಿತಾಧಿಕಾರಿ ಡಾ. ಸುರೇಶ ಹನಗಂಡಿ, ಕಾಲೇಜಿನ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಹಾಜರಿದ್ದರು.
ಪ್ರೊ. ಡಿ.ಎಸ್.ಹುಗ್ಗಿ ನಿರೂಪಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ವಂದಿಸಿದರು.