ಮೂಡಲಗಿ: ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಉದ್ಘಾಟನಾ ಸಮಾರಂಭ ಸುಣಧೋಳಿಯ ಶ್ರೀ ಶಿವಾನಂದ ಸ್ವಾಮೀಜಿಗಳು ಮತ್ತು ಕಕಮರಿಯ ಶ್ರೀ ಗುರುಲಿಂಗ ಜಂಗಮ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಜರುಗಿತು.
ಗ್ರಂಥಾಲಯ ಉದ್ಘಾಟಿಸಿದ ಯುವ ನಾಯಕ ಸರ್ವೋತಮ ಜಾರಕಿಹೊಳಿ ಮಾತನಾಡಿ, ಪುಸ್ತಕ ಸ್ನೇಹ ಬೆಳೆಸುವುದದರಿಂದ ಮೆದುಳಿನ ಬೆಳವಣಿಗೆ ವೇಗ ಪಡೆಯುವುದಷ್ಟೆ ಅಲ್ಲದೆ ಬುದ್ದಿಮತ್ತೆಯೂ ಚುರುಕುಗೊಳ್ಳುತ್ತದೆ. ಕಾರಣ ಢವಳೇಶ್ವರ ಗ್ರಾಮ ಪಂಚಾಯತಿಗೆ ಬರುವ ಗ್ರಾಮದ ಗ್ರಾಮಸ್ಥರು ಮತ್ತು ಯುವಕರು ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸುಣಧೋಳಿಯ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಉಜ್ವಲವಾದ ಬದುಕನ್ನು ರೂಪಿಸಿಕೊಳ್ಳಲು ಪರಿಶ್ರಮದಿಂದ ವಿದ್ಯಾಭ್ಯಾಸವನ್ನು ಮಾಡಿದರೇ ಮಾತ್ರ ಉನ್ನತವಾದ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಗುತ್ತದೆ ಎಂದರು.
ಕಕಮರಿಯ ಶ್ರೀ ಗುರುಲಿಂಗ ಜಂಗಮ ಸ್ವಾಮೀಜಿಗಳು ಮಾತನಾಡಿ, ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ವಿವಿದ ಹುದ್ದೆಯನ್ನು ಪಡೆದುಕೊಳ್ಳುವ ಉದ್ಯೋಗ ಆಕಾಂಕ್ಷಿಗಳು ದಿನದ ಇಂತಿಷ್ಟು ಸಮಯ ಅಭ್ಯಾಸವನ್ನು ಮಾಡಲೇಬೇಕು ಅಂತಹ ಆಕಾಂಕ್ಷಿಗಳಿಗೆ ಈ ಗ್ರಂಥಾಲಯ ಬಹಳ ಉಪಕಾರಿಯಾಗುತ್ತದೆ ಎಂದು ಯುವಕರಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಮಾಜಿ ಜಿ.ಪಂ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಮಾಜಿ ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಕಲ್ಲಪ್ಪಗೌಡ ಲಕ್ಕಾರ, ಢವಳೇಶ್ವರ ಗ್ರಾ.ಪಂ ಅಧ್ಯಕ್ಷ ರಂಗಪ್ಪ ಕಳ್ಳಿಗುದ್ದಿ, ಎಮ್.ಎಮ್ ಪಾಟೀಲ, ಗಿರೀಶ ಹಳ್ಳೂರ, ದುಂಡಪ್ಪ ಕಲ್ಲಾರ, ಹನಮಂತ ನಾಯ್ಕ, ಈರಣ್ಣಾ ಜಾಲಿಬೇರಿ, ಮಹಾದೇವ ನಾಡಗೌಡ, ಸುಭಾಸ ವಂಟಗೋಡಿ, ಭೀಮಪ್ಪ ಆಡಿನ್ನವರ, ಸಂಗಪ್ಪ ಕಂಟಿಕಾರ. ತಾಲೂಕಾ ಪಂಚಾಯತಿಯ ಎಸ್.ಎಸ್.ರೊಡನ್ನವರ, ಪಿಡಿಒ ಎಚ್.ವಾಯ್.ತಾಳಿಕೋಟಿ, ಅರ್ಜುನ ಪೂಜೇರಿ ಗ್ರಂಥಪಾಲಕ ಮಹಾಲಿಂಗ ಕುಂಬಾರ, ಜಿ.ವಿ.ಹಾಲಸಕರ, ಗ್ರಾ.ಪಂ ಸದಸ್ಯರು ಮತ್ತು ಗ್ರಾಮಸ್ಥರು ಮತ್ತಿತರರು ಇದ್ದರು.