ಕಾಳಿಕಾ ದೇವಿ ದೇವಸ್ಥಾನ ಉದ್ಘಾಟನೆ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಸಿಂದಗಿ: ಧರ್ಮ ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸಲು ಬಿಜೆಪಿ ಸರಕಾರದಲ್ಲಿ ಮಠ-ಮಂದಿರ ಹಾಗೂ ದೇವಸ್ಥಾನ ಸಮುದಾಯ ಭವನಗಳಿಗೆ ಸಾಕಷ್ಟು ಅನುದಾನ ನೀಡಿ ಸಹಕಾರಿಯಾಗಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.

ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಗ್ರಾಮ ದೇವತೆ ಕಾಳಿಕಾದೇವಿ ದೇವಸ್ಥಾನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ನನ್ನ ಅಧಿಕಾರವಧಿಯಲ್ಲಿ ಇಡೀ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ದೇವಸ್ಥಾನ ಸಮುದಾಯ ಭವನ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಕಲ್ಪಿಸಿ ಕೊಟ್ಟಿದ್ದೇನೆ. ಪ್ರತಿಯೊಂದು ಸಮಾಜದ ಅಭಿವೃದ್ಧಿಗೆ ಅನುದಾನ ಒದಗಿಸಿದ್ದು, ಕಕ್ಕಳಮೇಲಿ ಕಾಳಿಕಾ ದೇವಸ್ಥಾನಕ್ಕೂ ನನ್ನ ಅಧಿಕಾರವಧಿಯಲ್ಲಿಯೇ ಅನುದಾನ ನೀಡಿದ್ದೆ ಈಗ ಸುಂದರ ದೇವಸ್ಥಾನ ಸಮುದಾಯ ಭವನ ನಿರ್ಮಾಣವಾಗಿರುವುದು ಸಂತಸ ತಂದಿದೆ ಎಂದರು.

ನನ್ನ ಅವಧಿಯಲ್ಲಿ ಪ್ರತಿಯೊಂದು ಗ್ರಾಮದ ಜನತೆಯನ್ನು ಸಂಪರ್ಕಿಸಿ ಅನುದಾನ ಕೊಟ್ಟಿರುವೆ. ಯಾವುದೇ ಸಮುದಾಯದ ಬಗ್ಗೆ ಭೇದ -ಭಾವ ಮಾಡದೆ ಪ್ರೀತಿಯಿಂದ ಎಲ್ಲ ಸಮುದಾಯಕ್ಕೂ ಅನುದಾನ ನೀಡಿರುವುದು ಈ ನಿರ್ಮಾಣಗೊಂಡಿರುವ ಭವನಗಳು ದೇವಸ್ಥಾನಗಳು ಶಾದಿಮಹಲಗಳು ಕಲ್ಯಾಣ ಮಂಟಪಗಳು ಸಾಕ್ಷಿಯಾಗಿವೆ.

- Advertisement -

ಯಾರೇ ವಿರೋಧಿಸಿದರು ಕೂಡಾ ಅಭಿವೃದ್ಧಿ ವಿಷಯದಲ್ಲಿ ನಾನು ಯಾರ ಜೊತೆಯೂ ರಾಜಿಯಾಗಲ್ಲ ಇದು ನನ್ನ ರಾಜಕೀಯ ಸಿದ್ದಾಂತವಾಗಿದೆ ಹೀಗಾಗಿ ಜನರ ಜನ-ಮಾನಸದಲ್ಲಿ ಇದ್ದೇನೆ. ಕೊರೋನಾ ಸಂಕಷ್ಟ ಸಮಯದಲ್ಲಿ ಪ್ರತಿಯೊಂದು ಗ್ರಾಮೀಣ ಭಾಗದಲ್ಲಿಯೂ ಸಂಚರಿಸಿ ಅವರ ಕಷ್ಟಗಳಲ್ಲಿ ಭಾಗಿಯಾಗಿ ಆಲಿಸಿ ನನ್ನ ಕೈಲಾದಷ್ಟು ಸೇವೆ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಸದಾ ನಿಮ್ಮ ಬೆಂಬಲ ಇರಲಿ ಎಂದು ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಅವರನ್ನು ಕಮೀಟಿ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಬಿಂದುರಾಯಗೌಡ ಪಾಟೀಲ, ಸಂತೋಷಗೌಡ ಪಾಟೀಲ ಡಂಬಳ, ಗ್ರಾಪಂ ಅಧ್ಯಕ್ಷ ಸಂಜೀವ ಹಳ್ಳೆಪ್ಪಗೋಳ, ದೇವಪ್ಪ ಭೈರವಾಡಗಿ, ಬಸವರಾಜ ತಳವಾರ, ಶಂಕರ ಗೋರತಿ, ಹಣಮಂತ ಬಿರಾದಾರ, ಸುರೇಶ ಗೋರತಿ, ಸಿದ್ದಾರಾಮ ಪೂಜಾರಿ ಸೇರಿದಂತೆ ಕಕ್ಕಳಮೇಲಿ ಗ್ರಾಮದ ಹಿರಿಯರು, ಸರ್ವ ಸಮಾಜದ ಸಾರ್ವಜನಿಕರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!