spot_img
spot_img

ಕಾರ್ಮಿಕ ಕಚೇರಿಯ ಉದ್ಘಾಟನೆ

Must Read

ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಗಿರಿಸಾಗರದಲ್ಲಿ ಜೈ ಭವಾನಿ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕ ಕಚೇರಿಯ ಉದ್ಘಾಟನಾ ಸಮಾರಂಭವು ಶ್ರೀ ಬಸಲಿಂಗಯ್ಯ ಹಿರೇಮಠ (ಪಟ್ಟದೇವರು) ಮತ್ತು ಶ್ರೀ ಶಿವಲಿಂಗಪ್ಪ ಹುಬ್ಬಳ್ಳಿ ಅಜ್ಜನವರ ಸಾನ್ನಿಧ್ಯದಲ್ಲಿ ಜರುಗಿತು.

ಯಾದವಾಡ ಗ್ರಾಮ ಪಂಚಾಯತ ಸದಸ್ಯ ಕಲ್ಮೇಶ ಗಾಣಿಗಿ ಮಾತನಾಡಿ, ಎಲ್ಲ ಕುಶಲಕರ್ಮಿ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಮಳೆ ಬಿಸಿಲೆನ್ನದೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಾರೆ ಇಂತಹ ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯವನ್ನು ಸಂಘಟನೆಯ ಆಡಳಿತ ಮಂಡಳಿಯವರು ಕಟ್ಟಕಡೆಯ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಿಗೆ ಸರಕಾರದಿಂದ ದೊರೆಯುವ ಸೌಲಭ್ಯದ ಸಂಪೂರ್ಣ ಮಾಹಿತಿ ನೀಡಿ ಪ್ರತಿಯೊಬ್ಬ ಕಾರ್ಮಿಕರಿಗೂ ನ್ಯಾಯ ಒದಗಿಸುವಲ್ಲಿ ತಮ್ಮ ಪಾತ್ರ ಬಹುಮುಖ್ಯವಾಗಿದೆ, ಜನಪ್ರತಿನಿಧಿಗಳಾದ ನಾವು ಕೂಡ ಸರಕಾರದ ಯಾವುದೇ ರೀತಿ ಸೌಲಭ್ಯಗಳಿದ್ದರೂ ಪ್ರಾಮಾಣಿಕವಾಗಿ ತಮ್ಮ ಮನೆ ಬಾಗಲಿಗೆ ಮುಟ್ಟುವ ಹಾಗೆ ನೋಡಿಕೊಳ್ಳುವುದಾಗಿ ಹೇಳಿದರು

ಕಾರ್ಯಕ್ರಮದಲ್ಲಿ ಇಮಾಮ್ ಭಾಗವಾನ್, ಶಂಕರ್ ತೋಟಗಿ ಹನುಮಂತ ಮೋಡಿ ಹನುಮಂತ ಹೊಸಮನಿ, ಕಲ್ಲಪ್ಪ ಮಾಲಮನಿ, ಸಂಘದ ಅಧ್ಯಕ್ಷ ರಮೇಶ್ ಧೂಮ್‍ಮಾಳಿ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಮತ್ತಿತರಿದರು.

- Advertisement -
- Advertisement -

Latest News

ಈಗಿನಿಂದಲೇ ತಟ್ಟಿದ ಚುನಾವಣೆಯ ಬಿಸಿ

ಬೀದರನ ಭಾಲ್ಕಿಯಲ್ಲಿ ತಂದೆ - ಮಗನ ವಿಭಿನ್ನ ಹೋರಾಟ ಬೀದರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ  ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ  ಭಾಲ್ಕಿ ಕ್ಷೇತ್ರವು ಎರಡು ರೀತಿಯ ಪ್ರಕರಣಗಳಿಂದ ಸುದ್ದಿಗೆ...
- Advertisement -

More Articles Like This

- Advertisement -
close
error: Content is protected !!