ಮೂಡಲಗಿ ತಾಲೂಕಾ ಪ್ರಾದೇಶಿಕ ಪತ್ರಕರ್ತರ ಸಂಘದ ಉದ್ಘಾಟನೆ

Must Read

ಮೂಡಲಗಿ– ಪ್ರಾದೇಶಿಕ ಪತ್ರಿಕೆಗಳ ಪತ್ರಕರ್ತರಿಂದ ರಚಿಸಲಾದ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಉದ್ಘಾಟನೆಯು ದಿ. ೦೬ ರಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ( ಸರ್ಕಾರಿ ಆಸ್ಪತ್ರೆ) ದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆಯ ಮೂಲಕ ಉದ್ಘಾಟನೆಯಾಗಲಿದೆ.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಮೂಡಲಗಿಯ ಸಂಸ್ಥಾನ ಪೀಠದ ಶ್ರೀ ದತ್ತಾತ್ರಯಬೋಧ ಸ್ವಾಮೀಜಿ ವಹಿಸಲಿದ್ದಾರೆ.

ಉದ್ಘಾಟನೆಯನ್ನು ತಹಶೀಲ್ದಾರ ಡಿ ಜಿ ಮಹಾತ್ ನೆರವೇರಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಭಾಸ ಕಡಾಡಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷ ಹನುಮಂತ ಗುಡ್ಲಮನಿ, ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ಹಾದಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ತಾಲೂಕಾ ಪಂಚಾಯತ ಸಿಇಓ ಎಫ್ ಜಿ ಚಿನ್ನನ್ನವರ, ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್ ಐ ಸೋಮೇಶ ಗೆಜ್ಜಿ, ಹೆಸ್ಕಾಂ ಎಇಇ ಎಮ್ ಎಸ್ ನಾಗನ್ನವರ, ಪಶು ವೈದ್ಯಾಧಿಕಾರಿ ಡಾ. ಎಮ್ ಬಿ ವಿಭೂತಿ, ಸಿಡಿಪಿಓ ಯಲ್ಲಪ್ಪಾ ಗದಾಡಿ, ಕೃಷಿ ಅಧಿಕಾರಿ ಎಂ ಎಂ ನದಾಫ, ಉಪನೋಂದಣಾಧಿಕಾರಿ ಹರಿಯಪ್ಪ ನಾಯಕ, ಕಾರ್ಮಿಕ ಇಲಾಖೆ ಅಧಿಕಾರಿ ಪಾಂಡುರಂಗ ಮಾವರಕರ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಆಗಮಿಸಲಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷ ಮಹಾಲಿಂಗಯ್ಯ ನಂದಗಾಂವಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group