ಬೆಳಗಾವಿ: ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ಉದ್ಘಾಟನೆ, ಪದಾಧಿಕಾರಿಗಳ, ಪದಗ್ರಹಣ, ಮಹಿಳಾ ದಿನಾಚರಣೆ ಸಮಾರಂಭವು ರವಿವಾರ ದಿ 26 ರಂದು ಮುಂಜಾನೆ 11 ಘಂಟೆಗೆ ಬೆಳಗಾವಿ ನಗರದ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಲಿದೆ, ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಏಳು ವಲಯದಲ್ಲಿ ಸಾಧನೆ ಮಾಡಿದ 40ಜನ ಶಿಕ್ಷಕಿಯರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ವಿತರಣೆ ಸನ್ಮಾನ ನಡೆಯಲಿದೆ.
ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ರಾಯವ್ವಗೋಳ ನೆರವೇರಿಸುವರು, ಜ್ಯೋತಿ ಪ್ರಜ್ವಲನೆಯನ್ನು ಸಂಘದ ರಾಜ್ಯಾಧ್ಯಕ್ಷರಾದ ಡಾ ಲತಾ ಮುಳ್ಳೂರ ರವರು ಮಾಡುವರು, ಪ್ರಶಸ್ತಿ ವಿತರಣೆಯನ್ನು ಡಿ ಡಿ ಪಿ ಐ ಬಸವರಾಜ ನಾಲತವಾಡ, ಪಿ ಎಸ್ ಐ ಏ ರುಕ್ಮಿಣಿ, ಡಾ, ಕೆ ಎಸ್ ಲಕ್ಷ್ಮೀ ರವರು ಮಾಡುವರು.
ಮುಖ್ಯ ಅತಿಥಿ ಗಳಾಗಿ ಬಿ ಇ ಓ ಗಳಾದ ರವಿ ಭಜಂತ್ರಿ, ಎಸ್ ಪಿ ದಾಸಪ್ಪನವರ, ಸಂಘಟನೆ ಗಳ ಮುಖಂಡರುಗಳಾದ ಶಂಕರ ಗೋಕಾವಿ, ರಾಜಶ್ರೀ ಸಜ್ಜೆಶ್ವರ, ಎಸ್ ಡಿ ಗಂಗಣ್ಣವರ, ಶಿವಾನಂದ ಕುಡಸೋಮಣ್ಣವರ, ವಾಯ್ ಬಿ ಕಡಕೋಳ, ಅನ್ವರ ಲಂಗೋಟಿ, ಆಸೀಫ್ ಅತ್ತಾರ, ಸುರೇಶ ಸಕ್ರೆಣ್ಣವರ, ಬಸವರಾಜ ಸುಣಗಾರ ರವರು ಆಗಮಿಸುವರು, ಸಂಘದ ಜಿಲ್ಲಾಧ್ಯಕ್ಷೆ ನಸ್ರಿನ್ಬಾನು ಕಾಶಿಮನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ