ಮೂಡಲಗಿ: ಹೊಸ ಸಂಘಗಳ ರಚನೆ ಮತ್ತು ನಿಷ್ಕ್ರಿಯಗೊಂಡ ಹಳೆಯ ಸಂಘಗಳನ್ನು ಬಲವರ್ಧನೆಗೊಳಿಸುವ ಜವಾಬ್ದಾರಿ ನಮ್ಮ ಯುವಕರ ಕೈಯಲ್ಲಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು.
ಅವರು ಮೂಡಲಗಿ ತಾಲೂಕಿನ ಖಂಡ್ರಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ಮಹರ್ಷಿ ವಾಲ್ಮೀಕಿ ಮಹಿಳಾ ಮಂಡಲ ನೋಂದಣಿ ಪ್ರಮಾಣ ಪತ್ರ ವಿತರಿಸಿ ಹಾಗೂ ಸಂಘದ ಉದ್ಘಾಟನೆ ಮಾಡಿ ಮಾತನಾಡುತ್ತಾ, ಹಲವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರಬೇಕು. ನಮ್ಮ ಸಮಾಜದಲ್ಲಿ ಶೋಷಿತ ವರ್ಗದವರಿಗೆ ಅವಕಾಶ ಕಲ್ಪಿಸಿಕೊಡಲು ಕೆಲಸ ಮಾಡಬೇಕು ಹಾಗೂ ನಮ್ಮ ಭಾಗದ ಶಾಸಕರು ಹಾಗೂ ಕೆ ಎಮ್ ಎಪ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಂದಾಳತ್ವದಲ್ಲಿ ಸರ್ವ ಸಮಾಜಗಳನ್ನು ಒಗ್ಗೂಡಿಸಿ ಸಂಘಗಳನ್ನು ಮಾಡುತ್ತಾ ಅವುಗಳ ಅಬಿವೃದ್ದಿಗೆ ನಿರಂತರ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.
ಶ್ರೀ ಭಗೀರಥ ಯುವತಿ ಮಂಡಲದ ಅಧ್ಯಕ್ಷೆ ಕಸ್ತೂರಿ ಹೆಗ್ಗಾಣಿ ಮಾತನಾಡಿ, ಮಹಿಳೆಯರು ಎಲ್ಲಾ ರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಅದಕ್ಕಾಗಿ ಅವರಿಗೆ ವಿವಿಧ ತರಬೇತಿ ನೀಡಿ ಉತ್ತಮ ಸಂಘಟನೆ ಮಾಡುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವಾಲ್ಮೀಕಿ ಮಹಿಳಾ ಮಂಡಲದ ಅಧ್ಯಕ್ಷೆ ಶಶಿಕಲಾ ಹುಕ್ಕೇರಿ, ಎಲ್ಲಾ ಯುವತಿಯರು ಮುಖ್ಯ ವಾಹಿನಿಗೆ ಬರಬೇಕು ಮತ್ತು ಮಹಿಳೆ ಅಬಲೆಯಲ್ಲ ಸಬಲೆ ಎಂದು ಎಂದು ಹೇಳಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಕ್ಕವ್ವ ಎತ್ತಿನಮನಿ, ಬಸಪ್ಪ ಕಪರಟ್ಟಿ, ಮಾಜಿ ಸದಸ್ಯ ರಾ ತುಕಾರಾಮ ವಾಲಿಕಾರ, ಬಾಳಪ್ಪ ಜಗ್ಗಿನವರ, ಊರಿನ ಹಿರಿಯರಾದ ಬಾಳಪ್ಪ ಕಪರಟ್ಟಿ, ಶಂಕರ ಅಳಗೋಡಿ, ಊರಿನ ಯುವಕರಾದ ವಾಸು ಕಪರಟ್ಟಿ, ಹಣಮಂತ ಬಜಂತ್ರಿ, ಪುಲಕೇಶಿ ಜೋಗಿ, ಹಾಲಪ್ಪ ಮೇತ್ರಿ, ಭಾಳಪ್ಪ ನಾವಿ,ಮಹಿಳೆಯರಾದ ಲಕ್ಕವ್ವ ಬಂಟನೂರ, ಲಕ್ಕವ್ವ ಜೋಗಿ, ಅಕ್ಕವ್ವ ಪಾಟೀಲ, ರುಕ್ಕಮ್ಮ ದೇವರಮನಿ, ಸುಮ್ಮವ್ವ ಬಂಟನೂರ, ಹಾಗೂ ಮಹಿಳೆಯರು ಪದಾಧಿಕಾರಿಗಳು ಸಂಘಟಕರು ಮುಂತಾದವರು ಉಪಸ್ಥಿತರಿದ್ದರು. ವಾಲ್ಮೀಕಿ ಮಹಿಳಾ ಮಂಡಲದ ಕಾರ್ಯದರ್ಶಿ ಲಕ್ಷ್ಮಿ ಸೊಗಲದ ಸ್ವಾಗತಿಸಿದರು. ಪುಂಡಲೀಕ ವಂಟಮುರಿ ಶಿಕ್ಷಕರು ನಿರೂಪಿಸಿ ವಂದಿಸಿದರು.