spot_img
spot_img

ಜೈ ಹೋ ಜನತಾ ವೇದಿಕೆ ಮೂಡಲಗಿ ತಾಲೂಕಾ ಘಟಕದ ಉದ್ಘಾಟನೆ; ಸೈನಿಕನಿಗೆ ಸತ್ಕಾರ

Must Read

- Advertisement -

ಮೂಡಲಗಿ – ಈವರೆಗೂ ೧೫ ವರ್ಷ ದೇಶಸೇವೆ ಮಾಡಿ ಬಂದಿದ್ದೇನೆ ಈಗ ಪೊಲೀಸ್ ಇಲಾಖೆ ಸೇರಿ ಜನಸೇವೆ ಮಾಡುವ ಗುರಿ ಇದೆ. ಸಮಾಜದಲ್ಲಿ ನಡೆಯುವ ಮೋಸ ವಂಚನೆಗಳನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸೈನಿಕ ಎಮ್ ಎಸ್ ಸವದಿ ಹೇಳಿದರು.

ಗುರ್ಲಾಪೂರದಲ್ಲಿ ನಡೆದ ಜೈ ಹೋ ಜನತಾ ವೇದಿಕೆಯ ಮೂಡಲಗಿ ತಾಲೂಕಾ ಘಟಕದ ಉದ್ಘಾಟನಾ ಸಮಾರಂಭವನ್ನು ಆರಂಭಿಸಿ ಅವರು ಮಾತನಾಡಿದರು.

- Advertisement -

ಅನಾಥ ಮಕ್ಕಳ ಸಂರಕ್ಷಣೆ ಮಾಡಬೇಕೆಂಬ ಆಶೆಯಿದೆ. ಒಂದು ಎಕರೆ ಭೂಮಿ ತೆಗೆದುಕೊಂಡಿದ್ದೇನೆ ಅದನ್ನು ಅನಾಥ ಮಕ್ಕಳು ಹಾಗೂ ವೃದ್ಧರಿಗಾಗಿ ಬಿಟ್ಟುಕೊಡಲು ನಿರ್ಧರಿಸಿದ್ದೇನೆ. ದಾನಿಗಳ ನೆರವಿನಿಂದ ಅದನ್ನು ಯಶಸ್ವಿಯಾಗಿ ಪೂರೈಸುತ್ತೇನೆ. ನಾವು ಏನೇ ಗಳಿಸಿದರೂ ಅದನ್ನೆಲ್ಲ ಇಲ್ಲಿಯೇ ಬಿಟ್ಟು ಹೋಗಬೇಕು. ಜೈಹೋ ಜನತಾ ವೇದಿಕೆಯು ಕೂಡಾ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಯಶಸ್ವಿಯಾಗಲಿ ಎಂದರು.

ರವಿ ಮಹಾಲಿಂಗಪೂರ ಮಾತನಾಡಿ, ಒಂದು ಸಂಘಟನೆಯಿಂದ ನಾವು ಸಾಮಾಜಿಕ ಕೆಲಸಗಳನ್ನು ಮಾಡಬಹುದು. ಗ್ರಾಮಗಳಿಂದ ಹಿಡಿದು, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಂಘಟನೆ ಕೆಲಸ ಮಾಡಬೇಕು. ಪದಾಧಿಕಾರಿಗಳು ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಲ್ಲಿ ಒಂದು ಒಳ್ಳೆಯ ಸಂಘಟನೆಯಾಗಿ ಇದು ಬೆಳೆಬಲ್ಲದು ಎಂದರು.

ವಸಂತ ಅಂದಾನಿ ಮಾತನಾಡಿ, ಯಾವುದೇ ಸಮಸ್ಯೆಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಈ ಸಂಘಟನೆಯ ಶಲ್ಯ ಹಾಗೂ ಗುರುತಿನ ಚೀಟಿಗೆ ಮಹತ್ವವಿದೆ ಇದು ಯಾವ ಸದಸ್ಯರಿಂದಲೂ ದುರುಪಯೋಗವಾಗಬಾರದು ಎಂದರು.

- Advertisement -

ಪತ್ರಕರ್ತ ಉಮೇಶ ಬೆಳಕೂಡ ಮಾತನಾಡಿ, ಸಂಘದ ಧ್ಯೇಯೋದ್ದೇಶಗಳನ್ನು ಸ್ಪಷ್ಟಪಡಿಸಿಕೊಂಡು ಸಾಮಾಜಿಕ ಸುಧಾರಣೆಯಂಥ ಕೆಲಸ ಮಾಡುವಾಗ ಆವೇಶಕ್ಕೆ ಒಳಗಾಗದೆ ಇರಬೇಕು. ಭ್ರಷ್ಟಾಚಾರ, ಸಾಮಾಜಿಕ ಪಿಡುಗು ನಿವಾರಣೆ, ಬಡವರಿಗೆ ನೆರವಾಗುವಂಥ ಕಾರ್ಯಗಳನ್ನು ಜೈ ಹೋ ಜನತಾ ವೇದಿಕೆ ಮಾಡುತ್ತ ಉನ್ನತ ಮಟ್ಟಕ್ಕೇರಲಿ ಎಂದು ಹಾರೈಸಿದರು.

ಗೌರವಾಧ್ಯಕ್ಷ ಶಿವಲಿಂಗ ಹೊಸತೋಟ ಹಾಗೂ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಸುಭಾಸ ರಡರಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಸದಸ್ಯರಿಗೆ ಗುರುತಿನ ಚೀಟಿ, ಪ್ರಮಾಣಪತ್ರ ಹಾಗೂ ಶಲ್ಯಗಳನ್ನು ನೀಡಲಾಯಿತು.

ಸಮಾರಂಭದಲ್ಲಿ ಜೈ ಹೋ ಜನತಾ ವೇದಿಕೆಯ ಕುಡಚಿ ಕ್ಷೇತ್ರದ ಅಧ್ಯಕ್ಷ ಪ್ರಶಾಂತ ಹಿರೇಮಠ, ದಾನಪ್ಪ ಚಿಂಚಣಿ, ಅಬ್ದುಲ ಪೈಲವಾನ, ಅಜಿತ ಕಂಕಣವಾಡಿ, ಮುಸ್ತಫಾ ಬಳಿಗಾರ, ಶಿವಾನಂದ ಮೇಟಿ, ಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ವಿಠ್ಠಲ ಗೌರವಗೋಳ, ಶಿವಲಿಂಗ ಮೂಲಿಮನಿ, ಪ್ರಶಾಂತ ಅಂದಾನಿ, ಮುತ್ತು ಕೊಳವಿ, ಮಸ್ತಾನ ಜಾತಗಾರ, ಗಜಾನನ ಕದಮ್, ರವಿ ಮಹಾಲಿಂಗಪೂರ, ಆದಮ್ ದೊಡಮನಿ, ಸುಭಾಸ ಕಾಮಕರ,ಸದ್ದಾಮ ಜಾತಗಾರ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸೈನಿಕ ಎಮ್ ಎಸ್ ಸವದಿಯವರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು.

ವಸಂತ ಅಂದಾನಿ ಕಾರ್ಯಕ್ರಮ ನಿರೂಪಿಸಿದರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group