spot_img
spot_img

ಚಿಕ್ಕಮಕ್ಕಳ ಮತ್ತು ಪರಿಪಾಲಕರ ವಾರ್ಡ ನ ನೂತನ ಕಟ್ಟಡ ಹಾಗೂ ಆಮ್ಲಜನಕ ಘಟಕ ಉದ್ಘಾಟನೆ

Must Read

ಸಿಂದಗಿ: ಕಳೆದ ಕೊವಿಡ್ ಸಂದರ್ಭದಲ್ಲಿ ಜನರಿಗೆ ಆಕ್ಸಿಜನ್ ಸಿಗದಿರುವ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ರೂ 25 ಲಕ್ಷ ಮತ್ತು ತುರ್ತು ಸೇವೆಗೆ ವಾಹನ್ ಸೌಲಭ್ಯಕ್ಕೆ ರೂ 15 ಲಕ್ಷ ಅನುದಾನ ನೀಡಿದ್ದು ಸರಕಾರ ಜನಪರ ಯೋಜನೆಗೆ ಸ್ಪಂಧಿಸಿ ಕಾರ್ಯನಿರ್ವಹಿಸುತ್ತದೆ ಎನ್ನುವಕ್ಕೆ ಸತ್ಯ ಸಾಕ್ಷಿ ಇದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಸನ್ 2021-22 ನೇ ಸಾಲಿನ ವಿಧನ ಪರಿಷತ್ತ ಸದಸ್ಯ ಅರುಣ ಶಹಾಪುರ ಅವರ ಪ್ರದೇಶಾಭಿವೃದ್ಧಿ ಯೋಜನೆಯಡಿ ತಾಲೂಕಾ ಆಸ್ಪತ್ರೆಗೆ ಚಿಕ್ಕಮಕ್ಕಳ ಮತ್ತು ಪರಿಪಾಲಕರ ವಾರ್ಡ ಕಾಣಿಕೆ ನೀಡಿದ ಬೆಂಗಳೂರ ಯೂನಿಟೇಡ್ ಸಂಶೋಧನಾ ಕೇಂದ್ರದ ರೂ.1 ಕೋಟಿ 20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡ ಹಾಗೂ ಅಮ್ಲಜನಕ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಕಾಣಿಕೆ ನೀಡಿದ ಸಂಸ್ಥೆಯನ್ನು ನೆನೆಪಿಸದ ಸಚಿವ; ತಾಲೂಕು ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ಮತ್ತು ಪರಿಪಾಲಕರ ವಾರ್ಡ ಕಟ್ಟಡಕ್ಕೆ ಕಾಣಿಕೆ ನೀಡಿದ ಬೆಂಗಳೂರ ಯೂನಿಟೇಡ್ ಸಂಶೋಧನಾ ಕೇಂದ್ರವು ರೂ.1 ಕೋಟಿ 20 ಲಕ್ಷ ಹಣ ನೀಡಿದೆ ಆ ಸಂಸ್ಥೆಗೆ ಸೌಜನ್ಯಕ್ಕಾದರು ಸರಕಾರದ ಪ್ರತಿನಿಧಿಯಾಗಿ ಅಭಿನಂದಿಸಬೇಕಿತ್ತು ಆದರೆ ಸರಕಾರದ ಪ್ರತಿನಿಧಿಗಳನ್ನು ಹೊಗಳಿದ್ದು ಆ ಸಂಸ್ಥೆಯ ಸಿಬ್ಬಂದಿಗೆ ಅವಮಾನಿಸಿದಂತಾಗಿದೆ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿರುವುದು ಕೇಳಿ ಬರುತ್ತಿತ್ತು.

ಈ ಸಂದರ್ಭದಲ್ಲಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾಮಣ್ಣವರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ತಹಶೀಲ್ದಾರ ನಿಂಗಣ್ಣ ಬಿರಾದಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಡಿಎಚ್‍ಓ ಡಾ ಆರ್.ಎಚ್.ಯರಗಲ್, ಟಿಎಚ್‍ಓ ಡಾ ಆರ್.ಎಸ್. ಇಂಗಳೆ. ಬೆಂಗಳೂರ ಯೂನಿಟೇಡ್ ಸಂಶೋಧನಾ ಕೇಂದ್ರದ ಪೀಟರ್ ಸೈಮನ್, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಅಶೋಕ ಅಲ್ಲಾಪುರ, ಸಿದ್ದು ಬುಳ್ಳಾ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಆಸ್ಪತ್ರೆ ಸಿಬ್ಬಂದಿ ರಾಜಶೇಖರ ನರಗೋದಿ ಸ್ವಾಗತಿಸಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!