ಕೋಟ್ಯಂತರ ರೂ. ಆದಾಯ ತೆರಿಗೆ ವಂಚನೆ; ವಂಚಕ‌ನ ಬಂಧನ

Must Read

ಬೀದರ – ಸನ್ 2020-25ರವರೆಗೆ ಸರ್ಕಾರಕ್ಕೆ ಸುಮಾರು 9.25 ಕೋಟಿ ರೂ. ತೆರಿಗೆ ವಂಚನೆ ಮಾಡಿದ್ದ ಬೀದರ್‌ನ ನಿವಾಸಿ ರಾಹುಲ್ ಕಿಶನ್‌ರಾವ್ ಕುಲಕರ್ಣಿ ಎಂಬುವವನನ್ನು ಬಂಧಿಸಲಾಗಿದ್ದು ಇಂಥ ಪ್ರಕರಣ ಕಲ್ಯಾಣ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆಯೆನ್ನಲಾಗಿದೆ.

ಹೈದ್ರಾಬಾದ್‌ನಲ್ಲಿ ರಾಹುಲ್‌ ಕುಲಕರ್ಣಿಯನ್ನು ಬಂಧಿಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು. ಕಲಬುರಗಿ ಪೂರ್ವ ವಲಯ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತೆ ಯಾಸ್ಮೀನ್ ವಾಲಿಕಾರ್ ಈ ಮಾಹಿತಿ ನೀಡಿದ್ದಾರೆ.
ಆರೋಪಿ ರಾಹುಲ್ ಸರಕು ಅಥವಾ ಸೇವೆಗಳನ್ನ ಪೂರೈಸದೇ ನಕಲಿ ಬಿಲ್ಲು ಸೃಷ್ಟಿಸಿ ತೆರಿಗೆ ವಂಚಿಸುತ್ತಿದ್ದ.
ಸನ್ 2020-25ರವರೆಗೆ ಸರ್ಕಾರಕ್ಕೆ 9.25 ಕೋಟಿ ರೂ. ತೆರಿಗೆ ವಂಚಿಸಿದ್ದಾನೆ.

ನಕಲಿ ಬಿಲ್ಲು ಸೃಷ್ಟಿಸಿ 132 ಗುತ್ತಿಗೆದಾರರಿಗೆ ತೆರಿಗೆಯ ಕ್ಲೇಮ್‌ಗೆ ಸಹಕರಿಸುತ್ತಿದ್ದ‌. ತನ್ನ ಕುಟುಂಬ ಸದಸ್ಯರು ಸೇರಿ ಸ್ನೇಹಿತರ ಹೆಸರಿನಲ್ಲಿ ಸಿಮೆಂಟ್ ಮಾರಾಟ ಮಾಡ್ತೀನಿ ಅಂತಾ 4 ಲೈಸೆನ್ಸ್ ಪಡೆದಿದ್ದ. ಬೀದರ್, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಗುತ್ತಿಗೆದಾರರಿಗೆ ನಕಲಿ ಬಿಲ್ಲು ಕೊಡುತ್ತಿದ್ದ. ನಕಲಿ ಬಿಲ್ಲು ನೀಡಿ ನಕಲಿ ಹೂಡುವಳಿ ತೆರಿಗೆಯ ಕ್ಷೇಮ್‌ಗೆ ಸಹಕರಿಸುತ್ತಿದ್ದನೆನ್ನಲಾಗಿದೆ.

ಈತನಿಂದ ಈಗಾಗಲೇ ಮೂರೂವರೆ ಕೋಟಿ ರೂ. ವಸೂಲಿ ಮಾಡಲಾಗಿದೆ. ನಕಲಿ ಹೂಡುವಳಿ ತೆರಿಗೆ ಪಡೆದಿರುವ ಎಲ್ಲರ ಮೇಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಕಲಬುರಗಿ ಪೂರ್ವ ವಲಯ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತೆ ಯಾಸ್ಮೀನ್ ವಾಲಿಕಾರ್ ತಿಳಿಸಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ವಿದ್ಯಾರ್ಥಿಗಳು ತಂತ್ರಜ್ಞಾನದಿಂದಾಗಿ ದಾರಿ ತಪ್ಪಬಾರದು – ಲಕ್ಷ್ಮಿ ಸಾಲೊಡಗಿ

ಸಿಂದಗಿ - ಇಂದಿನ ಯುವ ಜನಾಂಗ ಮೊಬೈಲ್ ಅವಲಂಬಿತ ಜಗತ್ತಿನಲ್ಲಿದೆ. ಎಲ್ಲವೂ ಅಂಗೈನಲ್ಲಿಯೇ ಹಿಡಿದಿಟ್ಟುಕೊಳ್ಳುವ ಮನೋಭಾವದ ವಯಸ್ಸಿನ ಹದಿ ಹರೆಯದವರು ತಂತ್ರಜ್ಞಾನಗಳ ಪ್ರಭಾವಕ್ಕೆ ಒಳಗಾಗಿ ಹಾದಿ...

More Articles Like This

error: Content is protected !!
Join WhatsApp Group