ಬೀದರ – ಸದಾ ರಾಮ ನಾಮ ಜಪಿಸುವ ಭಾರತೀಯ ಜನತಾ ಪಕ್ಷದ ನಾಯಕರನ್ನು ಬಸವ ನಾಮ ಜಪಿಸುವಂತೆ ಮಾಡಿಸಿದೆ ಬಸವಕಲ್ಯಾಣ ಉಪ ಚುನಾವಣೆ.
ಕಳೆದ ಎರಡು ಮೂರು ದಶಕಗಳಿಂದ ರಾಮ ನಾಮ ಜಪ ವನ್ನು ಮಾಡುತಾ ಅಧಿಕಾರ ಹಿಡಿದ ನಂತರ ಭಾರತೀಯ ಜನತಾ ಪಕ್ಷದ ನಾಯಕರು ಈಗ ರಾಗ ಬದಲಿಸಿದ್ದು ಬೀದರ ಜಿಲ್ಲೆಯ ನಾಯಕರಿಗೆ ಬಸವಕಲ್ಯಾಣ ಉಪ ಚುನಾವಣೆ ಘೋಷಣೆ ಯಾದಂತೆ ಬಸವಣ್ಣನವರ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕಿಬಂದಂತಿದೆ.
ಏಕೆಂದರೆ ಬಸವಣ್ಣನವರು ಎಂದ ಅಸಡ್ಡೆ ತೋರುತ್ತಿದ್ದ ಜಿಲ್ಲೆಯ ನಾಯಕರಿಗೆ ಬಸವಕಲ್ಯಾಣ ಶಾಸಕ ದಿವಂಗತ ಬಿ ನಾರಾಯಣ ಅವರ ನಿಧನದ ನಂತರ ಬೀದರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ನಾಯಕರಿಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬರುತಿರುವದನ್ನು ನೋಡಿದರೆ ಅಧಿಕಾರಕ್ಕಾಗಿ ರಾಮನ ಹೆಸರು ಹೇಳಿಕೊಂಡ ಭಾರತೀಯ ಜನತಾ ಪಕ್ಷ ಈಗ ಬಸವಕಲ್ಯಾಣ ಕ್ಷೇತ್ರದ ತನ್ನ ಅಧಿಕಾರ ಸ್ಥಾಪಿಸಲು ಬಸವಣ್ಣನವರ ಹೆಸರಿನಲ್ಲಿ ಬಸವಕಲ್ಯಾಣ ಜನರನ್ನು ನಂಬಿಸಲು ಹೊಂಚುಹಾಕುತಿದೆ ಎಂದು ಜಿಲ್ಲೆಯ ಜನರಲ್ಲಿ ಅನುಮಾನ ಬರುತಿದೆ.
ಪಕ್ಕಾ ಸತ್ಯವಾದ ಮಾತು