spot_img
spot_img

ಸತೀಶ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Must Read

- Advertisement -

ಮೂಡಲಗಿ: ಸತೀಶ ಶುಗರ್ಸ್ ಕಾರ್ಖಾನೆಯು ರೈತಬಾಂಧವರ ಸಮಸ್ಯೆಗಳಿಗೆ ಸೋದರ ಭಾವನೆಯಿಂದ ಸ್ಪಂದಿಸುವ ಮೂಲಕ ಉತ್ತಮ ಸಂಬಂಧವನ್ನು ಹೊಂದಿದೆ ಎಂದು ತಳಕಟ್ನಾಳ ಪ್ರಗತಿಪರ ರೈತರಾದ ಆನಂದ ಕಲ್ಲೋಪಂತ ಕುಲಕರ್ಣಿ ಹೇಳಿದರು.

ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ ಜರುಗಿದ ೭೮ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಾರ್ಖಾನೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ವೀರೂ ತಳವಾರ ಮಾತನಾಡಿ, ದೇಶದ ಬೆನ್ನೆಲುಬಾದ ರೈತ ಬಾಂಧವರು ಮತ್ತು ಗಡಿ ಕಾಯುವ ಸೈನಿಕರ ಸೇವೆಯನ್ನು ಪ್ರತಿಯೊಬ್ಬರು ಗೌರವಿಸಬೇಕು, ದೇಶದ ಪ್ರತಿಯೊಬ್ಬ ಪ್ರಜೆಯೂ ಜಾತಿ-ಮತ, ಮೇಲು-ಕೀಳು, ಸಾಮಾಜಿಕ ಅಸ್ಪೃಶ್ಯತೆ ಇತ್ಯಾದಿ ಅನಿಷ್ಟ ಪದ್ದತಿಗಳಿಂದ ಹೊರ ಬಂದು ತನ್ನ ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಅರಿತು ಸಮಾನತೆಯಿಂದ ನಡೆದುಕೊಂಡಲ್ಲಿ ಮಾತ್ರ ದೇಶದ ಪ್ರಗತಿಗೆ ನಾಂದಿಯಾಗುತ್ತದೆ. ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ವೇದವಾಕ್ಯಕ್ಕೆ ಸಾಕ್ಷಿಯೆಂಬಂತೆ ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲಿಯೂ ಮುಂಚೂಣಿ ಸ್ಥಾನದಲ್ಲಿದ್ದಾರೆ. ಈ ದಿಸೆಯಲ್ಲಿ ಎಲ್ಲ ಪಾಲಕರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡ ಬೇಕೆಂದರು.

- Advertisement -

ರೈತಬಾಂಧವರು, ಕಾರ್ಮಿಕರ ನಿರಂತರ ಸಹಕಾರದಿಂದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಚಿವ ಸತೀಶ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಸತೀಶ ಶುರ‍್ಸ್ ಸಂಸ್ಥೆಯು ಸಕ್ಕರೆ, ಸಹ-ವಿದ್ಯುತ್, ಇಥೇನಾಲ್ ಮತ್ತು ಸ್ಟೀಲ್ ಉತ್ಪಾದನಾ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿಯೂ ಸಹ ಸಂಸ್ಥೆಯ ಪ್ರಗತಿಗಾಗಿ ಕಾರ್ಖಾನೆಯ ರೈತ ಬಾಂಧವರು ಮತ್ತು ಕಾರ್ಮಿಕ ವರ್ಗದವರು ಸಹಕರಿಸಬೇಕು ಎಂದು ವಿನಂತಿಸಿದರು.

ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಪಿ.ಡಿ.ಹಿರೇಮಠ ಅಧ್ಯಕ್ಷತೆಯ ವಹಿಸಿದ್ದರು. ನಾಗನೂರದ ಪ್ರಗತಿ ಪರ ರೈತ .ಶಿವಪ್ಪಾ ಭೀಮಪ್ಪಾ ಹೊಸಮನಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಕಾರ್ಖಾನೆಯ ಮಧ್ಯಸಾರ ಘಟಕದ ಪ್ರಧಾನ ವ್ಯವಸ್ಥಾಪಕ ಮಹೇಶ ಜಿ.ಆರ್ ಮಾತನಾಡಿ, ವೃತ್ತಾಕಾರದ ಜೈವಿಕ ಅರ್ಥ ವ್ಯವಸ್ಥೆಯ ಅನುಷ್ಟಾನದೊಂದಿಗೆ ನಾಡಿನ ರೈತರ ಮತ್ತು ಕಾರ್ಖಾನೆಗಳ ಉನ್ನತಿ ಸಾಧಿಸಲು ಹಾಗೂ ದೇಶದ ಸುಸ್ಥಿರ ಅಭಿವೃದ್ದಿಗಾಗಿ ಕೈ ಜೋಡಿಸೋಣ. ನಮ್ಮ ಸಂಸ್ಥೆಯು ಯಾವಾಗಲೂ ರೈತ ಸ್ನೇಹಿಯಾಗಿದೆ ಎಂದರು.

- Advertisement -

ಸಮಾರಂಭದಲ್ಲಿ ಸನ್ ೨೦೨೩-೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿ.ಯು.ಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆಯಾದ ಕಾರ್ಖಾನೆಯ ಕಾರ್ಮಿಕ ವ ಸಿಬ್ಬಂದಿಯವರ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ಧನದ ಚೆಕ್ ಮತ್ತು ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರಾದ ಪಿ.ಡಿ.ಹಿರೇಮಠ, ವೀರು ತಳವಾರ, ಪ್ರಧಾನ ವ್ಯವಸ್ಥಾಪಕರುಗಳಾದ ಮಲ್ಲಿಕಾರ್ಜುನ ಸಸಾಲಟ್ಟಿ, ಮಹೇಶ ಜಿ.ಆರ್, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳಾದ ಅರುಣಚೌಗಲಾ, ಸುರೇಶ ಬೋಸಲೆ ಹಾಗೂ ಹಿರಿಯ ಅಧಿಕಾರಿಗಳು ಮತ್ತು ಕಾರ್ಮಿಕ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಉಪ ವ್ಯವಸ್ಥಾಪಕ ಸದಾಶಿವ ಮಾಲಗಾರ ನಿರೂಪಿಸಿದರು, ಆಡಳಿತ ವಿಭಾಗದ ವ್ಯವಸ್ಥಾಪಕ ಗಿರೀಶ ಸೋನವಾಲಕರ ವಂದಿಸಿದರು.

- Advertisement -
- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group