spot_img
spot_img

ಭಾರತಕ್ಕೆ ಭವ್ಯ ಪರಂಪರೆ ಇದೆ. ವಿಶ್ವ ಗುರುವಾಗುವತ್ತ ಭಾರತ – ಆನಂದ ಮಾಮನಿ

Must Read

- Advertisement -

ಸವದತ್ತಿ: 75 ನೇಯ ಸ್ವಾತಂತ್ರೋತ್ಸವ ಅಮೃತ ಮಹೊತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಬಹುದಾಗಿತ್ತು. ಈ ಮಹಾಮಾರಿ ಕೋರೋನಾ ರೋಗವು ಹರಡದಂತೆ ತಡೆಗಟ್ಟಲು ಸುರಕ್ಷಿತ ಅಂತರ ಹಾಗೂ ಕಡ್ಡಾಯ ಮಾಸ್ಕ ಧರಿಸುವ ಕಟ್ಟು ನಿಟ್ಟಿನ ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗೊಳ್ಳುವ ಮೂಲಕ ಅತಿ ಸರಳವಾಗಿ ಆಚರಿಸುವಂತಾಯಿತು ಬರತಕ್ಕಂತಹ ಎಲ್ಲ ರಾಷ್ಟ್ರೀಯ ಹಬ್ಬಗಳನ್ನೂ ಸಹ ಜನಸಂದಣಿ ಸೇರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ.

ಭಾರತ ದೇಶಕ್ಕೆ ತನ್ನದೇ ಆದಂಥ ಭವ್ಯ ಪರಂಪರೆ ಇದೆ. ಅನೇಕ ಮಹನೀಯರ ತ್ಯಾಗ ಬಲಿದಾನ ಸ್ವಾತಂತ್ರ್ಯಕ್ಕೆ ಕಾರಣವಾದರೆ ಪ್ರಸಕ್ತ ಸ್ಥಿತಿಯಲ್ಲಿ ಗಡಿಯಲ್ಲಿನ ನಮ್ಮ ಸೈನಿಕರ ತ್ಯಾಗ ಬಲಿದಾನ ಕೂಡ ದೇಶ ರಕ್ಷಣೆಯಲ್ಲಿ ಮಹತ್ವ ಪಾತ್ರ ವಹಿಸಿದೆ ಎಂದು ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ ಹೇಳಿದರು.

- Advertisement -

ಅವರು ಎಸ್.ಕೆ.ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕ ಧ್ವಜಾರೋಹಣ ಹಾಗೂ ಪೋಲಿಸ ಹಾಗೂ ಗೃಹರಕ್ಷಕದಳ ಎನ್ ಸಿ ಸಿ ಘಟಕಗಳಿಂದ ಗೌರವ ರಕ್ಷೇ ಸ್ವೀಕರಿಸಿ 75 ನೆಯ ಭಾರತ ಸ್ವಾತಂತ್ರೋತ್ಸವ ದಿನಾಚರಣೆ ಅಮೃತ ಮಹೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂದೊಂದುಕಾಲವಿತ್ತು ಭಾರತದ ಬಗ್ಗೆ ಹಲವು ರಾಷ್ಟ್ರಗಳು ನೋಡುವ ದೃಷ್ಟಿಕೋನ ಕೆಳಮಟ್ಟದ್ದಾಗಿತ್ತು. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರ ದೇಶಕ್ಕೆ ಸಮರ್ಥ ನಾಯಕತ್ವ ಸಿಕ್ಕಿದೆ.ಈ ಹಿಂದೆ ಭಾರತದ ಬಗ್ಗೆ ಕೆಳಮಟ್ಟದ ವಿಚಾರ ಮಾಡುತ್ತಿದ್ದ ರಾಷ್ಟ್ರಗಳ ಧೋರಣೆ ಬದಲಾಗಿದೆ.ನವಭಾರತದ ಪರಿಕಲ್ಪನೆಯ ಕನಸನ್ನು ಹೊತ್ತು ಮುನ್ನಡೆದಿರುವ ದೇಶದ ಇಂದಿನ ಸಮರ್ಥ ನಾಯಕತ್ವವು ಅಭಿವೃದ್ಧಿಗೆ ಮುನ್ನುಡಿ ಬರೆದಿದೆ.ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಬಂದಿದೆ.ಹೊಸ ಚೈತನ್ಯದೊಂದಿಗೆ ಮುಂದಿನ ದಿನಗಳನ್ನು ಎದುರು ನೋಡಬೇಕಾಗಿದೆ.ಈಗ ಆತ್ಮ ನಿರ್ಭರ ಭಾರತಕ್ಕೆ ಪಣ ತೊಡಬೇಕಾಗಿದೆ.ಮುಂಬರುವ ವರ್ಷಗಳಲ್ಲಿ ಭಾರತ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದು ನುಡಿದರು.

ನಂತರ ವಿವಿಧ ರಂಗಗಳಲ್ಲಿ ಸೇವೆಸಲ್ಲಿಸಿದ ಮಹನೀಯರನ್ನು ತಾಲೂಕಾ ಆಡಳಿತ ವತಿಯಿಂದ ಆನಂದ ಮಾಮನಿಯವರು ಸನ್ಮಾನಿಸಿ ಗೌರವಿಸಿದರು.

- Advertisement -

ಸಮಾರಂಭದಲ್ಲಿ ಅತಿಥಿಗಳಾಗಿ ಪುರಸಭೆ ಅಧ್ಯಕ್ಷರಾದ ರಾಜಶೇಖರ ವಿ ಕಾರದಗಿ. ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ ಎಪಿಎಮ್‍ಸಿ [ಪ್ರಭಾರ] ಅಧ್ಯಕ್ಷ ಚಂದ್ರಶೇಖರ ಅಳಗೊಡಿ. ಬಸನಾಯ್ಕ ಮಲ್ಲೂರ. ಶಿವಾನಂದ ಪಟ್ಟಣಶೆಟ್ಟಿ. . ತಹಶಿಲ್ದಾರ ಪ್ರಶಾಂತ ಬಿ ಪಾಟೀಲ. ಸಿ ಪಿ ಐ ಮಂಜುನಾಥ ನಡುವಿನಮನಿ. ಪಿ ಎಸ ಐ ಶಿವಾನಂದ ಗುಡುಗನಟ್ಟಿ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ. ಪುರಸಭೆ ಮುಖ್ಯಾಧಿಕಾರಿ ಪಿ ಎಮ್ ಚನ್ನಪ್ಪನವರ. ಜಿ ಪಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ಎಸ್ ಕೆ ಪಾಟೀಲ ಮತ್ತು ಎಮ್ ಜಿ ರೇವಣಕರ. ಲೊಕೋಪಯೊಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ಎಚ್ ಎ ಕದ್ರಾಪುರಕರ. ಪ್ರಮೋದ ಮೂಡಲಗಿ. ಸಹಾಯಕ ಕೃಷಿ ನಿರ್ದೇಶಕ ಕೆ ಎನ ಮಾರಡ್ಡಿ. ತಾಲೂಕಾ ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ ಸೇರಿದಂತೆ ತಾಲೂಕಾಮಟ್ಟದ ಎಲ್ಲ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಎನ್ ಕಂಬೋಗಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ನಂತರ ತಹಶೀಲ್ದಾರ ಪ್ರಶಾಂತ ಬಿ ಪಾಟೀಲ ಸಂದೇಶ ವಾಚನ ಮಾಡಿದರು ಕೊನೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ಬಳಿಗಾರ ವಂದಿಸಿದರು.

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group