spot_img
spot_img

ಭಾರತ ಧಾರ್ಮಿಕ ಸಾಂಸ್ಕೃತಿಕ ರಾಷ್ಟ್ರವಾಗಿದೆ – ಮಾಜಿ ಶಾಸಕ ವೀರಣ್ಣ ಚರಂತಿಮಠ

Must Read

spot_img
- Advertisement -

ಹುನುಗುಂದ: ಕರ್ನಾಟಕದಲ್ಲಿ ವಿವಿಧ ಭಾಗದಲ್ಲಿ ಪ್ರತಿ ವರ್ಷದಂತೆ ಜಾತ್ರೆ ಉತ್ಸವಗಳಲ್ಲಿ ಆಯಾ ಭಾಗದ ಮಠಮಾನ್ಯಗಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಲು ಜನರಲ್ಲಿರುವ ಮನೋಭಾವನೆಯನ್ನು ಜಾಗೃತಿಗೊಳಿಸಲು ಪುರಾಣ ಪ್ರವಚನಗಳನ್ನು ಹಮ್ಮಿಕೊಳ್ಳುತ್ತಾ ಧಾರ್ಮಿಕ ಪ್ರಜ್ಞೆಯನ್ನು ಮಠಮಾನ್ಯಗಳು ಮಾಡುತ್ತಿವೆ ಎಂದು ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ರರಗಿಯಲ್ಲಿ ಪರಮ ತಪಸ್ವಿ ಲಿಂಗೈಕ್ಯ ವಿಜಯ ಮಹಾಂತ ಶಿವಯೋಗಿಗಳವರ 113ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ವಚನ ಮಹೋತ್ಸವದಲ್ಲಿ ವಚನ ಚಿಂತನಾಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಭಾರತ ಎಂದರೆ ಧಾರ್ಮಿಕ ಸಾಂಸ್ಕೃತಿಕ ರಾಷ್ಟ್ರವಾಗಿದೆ ಎಂದರಲ್ಲದೆ ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದ ಅವರು 12ನೇ ಶತಮಾನದ ಶಿವಶರಣರು ಹಾಕಿಕೊಟ್ಟ ವಚನಗಳ ಪರಿಕಲ್ಪನೆಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸುಖಮಯ ಗೊಳ್ಳುತ್ತದೆ ಎಂದು ಹೇಳಿದರು

ಹುನಗುಂದ ಹಾಗೂ ಇಲ್ಕಲ್ ತಾಲೂಕಿಗೆ ಚಿತ್ತರಗಿ ಮಠವು ಮೂಲ ಮಠವಾಗಿದೆ ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ದೊಡ್ಡ ಅಜ್ಜಾವರ ಕಾಲದಿಂದ ಇಲ್ಲಿಯವರೆಗೆ ನಿರಂತರ ಶರಣ ಸಂಸ್ಕೃತಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ ಚಿತ್ರರಗಿ ಮಠ ಶ್ರಮಿಸುತ್ತಿದೆ ಎಂದರು

- Advertisement -

ವೀರಶೈವ ಲಿಂಗಾಯತ ಮಠಗಳಿಂದ ಕಾಯಕ ದಾಸೋಹಕ್ಕೆ ಹೆಚ್ಚಿನ ಹೊತ್ತಿ ನೀಡುತ್ತಾ ಶಿಕ್ಷಣವಂತರನ್ನಾಗಿ ರೂಪಿಸುವಲ್ಲಿ ಚಿತ್ರರಗಿ ಸಂಸ್ಥಾನ ಮಠ ಬಹಳ ಕೆಲಸ ಮಾಡಿದೆ ಧಾರ್ಮಿಕ ಪ್ರಜ್ಞೆ ಈ ಸಂದರ್ಭದಲ್ಲಿ ಶ್ರೀ ಮಠವು ಹೆಚ್ಚಿನ ಒತ್ತು ನೀಡುತ್ತಿದೆ ಒಂದರಲ್ಲದೆ ಶ್ರೀ ಮಠದ ಪರಮ ಭಕ್ತ ನಾನು ನಮ್ಮ ಹಿಂದಿನ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದರಲ್ಲದೆ ಶ್ರೀಮಠದ ಪೂಜ್ಯರ ಆಶೀರ್ವಾದ ಪಡೆಯಲು ಶ್ರೀ ಮಠಕ್ಕೆ ಎಂದರು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಿರೂರಿನ ಡಾ. ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ಆಶೀರ್ವಚನದಲ್ಲಿ ಶರಣರು12ನೇ ಶತಮಾನದಲ್ಲಿ ನಡೆಸಿದ ಸಾಮಾಜಿಕ ಆಂದೋಲನಗಳು ನವ ಮನ್ಮಂತರಕ್ಕೆ ನಾಂದಿ ಹಾಡಿವೆ ಈಗ ಮತ್ತೆ ಶರಣರ ಆದರ್ಶ ಮರೆಯಾಗಿದ್ದು ಈಗ ಮತ್ತೆ ಶರಣರ ಆದರ್ಶ ಮರೆಯಾಗಿದ್ದು ಈಗ ಪನಃ ದಾರ್ಮಿಕ ಕ್ರಾಂತಿ ಆಗಬೇಕಿದೆ ಎಂದರು

ಇಂದಿನ ಯುವಕರಲ್ಲಿ ದ್ವೇಷ ಅಸೂಯೆ ಕ್ರೋಧ ಮದ ಮತ್ಸರ ಮುಂತಾದ ದುರ್ಗುಣಗಳನ್ನು ದೂರವಿಡಲು ಆಧ್ಯಾತ್ಮಿಕ ಮಾರ್ಗವೇ ರಾಜ ಮಾರ್ಗ ಎಂದು ಹೇಳಿದ ಶ್ರೀಗಳು ಧರ್ಮದ ಉಳಿವಿಗಾಗಿ ನೀವು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು

ಮುಖ್ಯ ಅತಿಥಿಗಳಾಗಿದ್ದ ಹುನಗುಂದದ ಡಾಕ್ಟರ್ ಮಹಾಂತೇಶ ಕಡಪಟ್ಟಿ ಮಾತನಾಡಿ ಮನುಷ್ಯನ ಹೃದಯವೆಂಬ ದೇಗುಲದಲ್ಲಿ ದಿವ್ಯಮೂರ್ತಿ ಸ್ಥಾಪನೆ ಆಗಬೇಕು ಧರ್ಮವನ್ನು ಜಾಗೃತಿಗೊಳಿಸುವ ಕಾರ್ಯ ನಡೆಯಬೇಕು ಧರ್ಮ ಮತ್ತು ದೇವರು ಭಾರತದ ಜೀವಾಳ ಎಂದರಲ್ಲದೆ ಜಾತಿ ಮತ ಪಂಥ ಎಂಬ ಭಾವನೆಗಳನ್ನು ತೊರೆದು ಸೇವಾ ಮನೋಭಾವ ದಿಂದ ಹಾಗೂ ಭಾವೈಕ್ಯತೆಯಿಂದ ಇಂಥ ಧಾರ್ಮಿಕ ಕಾರ್ಯಕ್ರಮವನ್ನು ಆಚರಣೆ ಮಾಡುವುದು ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಜೀವಂತವಾಗಿವೆ ಎಂದ ಅವರು ನಿತ್ಯದ ಬದುಕಿನಲ್ಲಿ ದೇವರು ಹಾಗೂ ಶರಣರನ್ನು ಪೂಜೆ ಭಾವನೆಯಿಂದ ಕಂಡು ತಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕೆಂದು ಕಡಪಟ್ಟಿಯವರು ಅಭಿಪ್ರಾಯಪಟ್ಟರು

- Advertisement -

ವೀರಭದ್ರ ಸ್ವಾಮಿಗಳು ನೀಲಾಂಬಿಕ ಬಸವ ಯೋಗಾಶ್ರಮದ ಅಧ್ಯಕ್ಷರು ಬಡಿಗೇರ ಮರ್ಚ್ ಗುಡ್ಡ ಜಾಗೀರ ಜಾಡಲದಿನ್ನಿ ತಾಲೂಕು ದೇವದುರ್ಗ ಜಿಲ್ಲಾ ರಾಯಚೂರು ಮಾತನಾಡಿ ಬಸವ ಎಂದರೆ ಬಕಾರುವ ಗುರು ಸಕಾರ ಲಿಂಗ ಓಂಕಾರಂ ಜಂಗಮ ಆಕಾರ ವಿಕಾರ ಓಂಕಾರ ನಾದವಾಗಿರುವ ಶಬ್ದವೇ ಬಸವಣ್ಣ ಯಾರೂ ಬಸವಾದಿ ಶರಣರ ವಿಚಾರಗಳನ್ನು ಮಾಡುತ್ತಾರೆ ಅವರಿಗೆ ಯಾವುದೇ ತರಹದ ತರಹದಿಂದ ಜಡ್ಡು ಬರುವುದಿಲ್ಲ ಶರಣರ ನುಡಿಗಳು ಶರಣರ ನಡೆಗಳು ಶರಣರ ಅನುಭವಗಳನ್ನು ಪ್ರತಿಪಾದಿಸಬೇಕು ಅಂದಾಗ ನಿಮ್ಮ ಜೀವನ ಸಾರ್ಥಕವಾಗುತ್ತದೆ ಇವತ್ತು ಬಸವಣ್ಣನವರ ಕಾರ್ಯ ಬಹಳ ದೊಡ್ಡ ಕಾರ್ಯ ಏಕೆಂದರೆ ಜಾತಿ ಬೇರುಗಳನ್ನು ಕಿತ್ತು ಹಾಕಿದವರು ಬಸವಣ್ಣನವರು ನಾವು ಈ ಮಠಕ್ಕೆ ಭಕ್ತಿಯಿಂದ ಬಂದ ಮಾಡಿದೆ ಎನ್ನಬಾರದು ನಾನು ನೀಡಿದೆ ಎನ್ನ ಬಾರದು ಎಂದು ಅವರು ತಿಳಿಸಿದರು

ಚಿತ್ತರಗಿ ಶ್ರೀಮಠದ ಪರಂಪರೆಯಲ್ಲಿ ಲಿಂಗೈಕ್ಯ ವಿಜಯ ಮಹಾಂತ ಶಿವಯೋಗಿಗಳವರು ಮತ್ತು ಲಿಂಗೈಕ್ಯ ವಿಜಯಮಹಾಂತ ಅಪ್ಪಗಳು ತದನಂತರ ಗುರುಮಾಂತ ಶ್ರೀಗಳು ಬಸವ ಪರಂಪರೆಯಲ್ಲಿ ಬೆಳೆದು ಬಂದಿದ್ದು ಜಾತಿಭೇದವನ್ನು ಕಿತ್ತಿ ಹಾಕಿದ ಶ್ರೀ ಮಠವಾಗಿದೆ ಎಂದು ತಿಳಿಸಿದರು

ಕಾರ್ಯಕ್ರಮದ ಸಾನ್ನಿಧ್ಯ ಶ್ರೀ ಮಠದ ಪೂಜ್ಯ ಗುರುಮಹಾಂತ ಶ್ರೀಗಳು ವಹಿಸಿದ್ದರು ವೇದಿಕೆಯಲ್ಲಿ ಹಡಗಲಿ ನಿಡಗುಂದಿಯ ರುದ್ರಮುನಿಶ್ರೀಗಳು ವಿಜಯಪುರದ ಮಹಾಂತ ದೇವರು ಉಪಸ್ಥಿತರಿದ್ದರು

ಇದೇ ಕಾರ್ಯಕ್ರಮದಲ್ಲಿ ಚಿತ್ರರಗಿ ಗ್ರಾಮದ ಹಿರಿಯರಾದ ಲೇಖಕ ಶೇಖರ್ ಗೌಡ ಎಸ್ ಗೌಡರವರ ಮಹಾಂತಜೋಳಿಗೆಯ ಕೈಪಿಡಿ ಭಾಗ-3 ತಮ್ಮ ಕೃತಿಯ ಬಗ್ಗೆ ಮಾತನಾಡಿ ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.

ಸನ್ಮಾನ : ಶ್ರೀಮಠದ ಗೌರವ ಸತ್ಕಾರ ವನ್ನು ಬೆಂಗಳೂರಿನ ಸಿವಿಲ್ ನ್ಯಾಯಾಧೀಶ ಹುನಗುಂದ ತಾಲೂಕಿನ ಗಂಗೂರು ಗ್ರಾಮದ ಭಾಗ್ಯಶ್ರೀ ದುರ್ಗಪ್ಪ ಮಾದರ ಹಾಗೂ ಮೈಸೂರಿನಲ್ಲಿ ಪಿಎಸ್ಐ ತರಬೇತಿಯಲ್ಲಿರುವ ಮಾಳವ್ವ ಯಲ್ಲಪ್ಪ ಹಾದಿಮನಿ ಪಡೆದರು ಮಹಾಂತ ಜೋಳಿಗೆ ಕೈಪಿಡಿ ಭಾಗ 3 ಪುಸ್ತಕಕ್ಕೆ ಲಿಂಗೈಕ್ಯ ಬಸಪ್ಪ ನಿಂಗಪ್ಪ ಬಾಲರೆಡ್ಡಿ ಇವರ ಸಂಸ್ಕರಣೆಯಲ್ಲಿ ಧನಸಹಾಯ ಮಾಡಿದ ಪುತ್ರ ನಿವೃತ್ತ ದೈಹಿಕ ಶಿಕ್ಷಣ ಪರರ್ವೀಕ್ಷಕರಾದ ನಿಂಗಣ್ಣ ಬಸಪ್ಪ ಬಾಲರೆಡ್ಡಿ ಹಾಗೂ ಸಂಗಣ್ಣ ಬಾಲ ರೆಡ್ಡಿ ಸಹೋದರರನ್ನು ಶ್ರೀಮಠದಿಂದ ಸತ್ಕರಿಸಲಾಯಿತು

ಬಸನಗೌಡ ಬೇವುರು ಸ್ವಾಗತಿಸಿದರು ಸಂಗಣ್ಣ ನಿಂಗನಗೌಡ್ರು ನಿರೂಪಿಸಿದರು ವಂದಿಸಿದರು ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group