ಸಿಂದಗಿ; ಸಚ್ಚಾ ಮುಸ್ಲಿಂ ಎಂದರೆ ಹಸಿವಿನಿಂದ ಬಳಲುತ್ತಿರುವವರನ್ನು ನೋಡದೇ ಹೋಗುತ್ತಾನೋ ಆತ ಮುಸ್ಲಿಮನಾಗಲು ಸಾಧ್ಯವಿಲ್ಲ. ಜಾತಿ-ಭೇದವಿಲ್ಲದೇ ಎಲ್ಲರು ಒಂದೇ ಭಾವದಿಂದ ಮಾನವೀಯತೆ ಸಾರಿದ ಭಾರತ ದೇಶವು ಇಡೀ ಜಗತ್ತಿನಲ್ಲಿಯೇ ಭಾವೈಕ್ಯತೆಗೆ ಹೆಸರಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ ಹೇಳಿದರು.
ಪಟ್ಟಣದ ಎಫ್.ಎಂ.ಫೌಂಡೇಶನ್ ವತಿಯಿಂದ ನಿಜಾಮುದ್ದಿನ್ ಮಸಜೀದ ಸಂಗಮ ಬಾರ ಹತ್ತಿರ ಜಶ್ನೆ-ಮಿಲಾದ-ಉನ್ ನಬಿ ಹಜರತ ಮೊಹಮ್ಮದ ಪೈಗಂಬರ ರವರ ಜನ್ಮದಿನದ ಅಂಗವಾಗಿ ಸುರಕುಂಬ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರವಾದಿ ಮಹ್ಮದ ಪೈಗಂಬರ ಅವರು ಸಮಾನತೆಯ ಸಂದೇಶ ನೀಡಿದ್ದಾರೆ ಅಂಥವರ ತತ್ವಾದರ್ಶಗಳನ್ನು ನಾವೆಲ್ಲ ಮೈಗೂಡಿಸಿಕೊಂಡಾಗ ಮಾತ್ರ ಭಾವೈಕ್ಯತೆ ತೋರಿದಂತಾಗುತ್ತದೆ ಎಂದರು.
ಪಿ.ಎಸ್.ಆಯ್. ಸೋಮೇಶ ಗೆಜ್ಜೆ ಮಾತನಾಡಿ, ಮನುಷ್ಯ ತಾನೊಂದೆ ಕುಲಂ ಎನ್ನುವಂತೆ ಮಹ್ಮದ ಪೈಗಂಬರ ಅವರ ಭಾವಚಿತ್ರವಿಲ್ಲದೇ ಅವರ ಅನುಯಾಯಿಗಳಿಗೆ ಸಮಾನತೆಯ ಸಂದೇಶ ನೀಡಿದ್ದಾರೆ ಯಾವುದೇ ಜಾತಿ ಭೇದ ತೋರದೇ ನಾವೆಲ್ಲ ಒಂದೇ ಭಾವದಿಂದ ಸಾಗಬೇಕು ಎನ್ನುವ ತತ್ವವನ್ನು ಬಿತ್ತಿದ್ದಾರೆ. ಅಂತೇಯೇ ಮಹಾಪುರುಷರು ವಚನಗಳ ಸಮಾತೆ ಸಾರಿದ್ದಾರೆ ಅದಕ್ಕೆ ದೇಶದಲ್ಲಿ ಎಲ್ಲ ಕೋಮಿನ ಜನರು ಸೇರಿ ಎಲ್ಲ ಹಬ್ಬ ಹರಿದಿನಗಳನ್ನು ಒಟ್ಟಿಗೆ ಆಚರಿಸುತ್ತಿರುವುದು ಬಾವೈಕ್ಯತೆ ಎಂದು ಬಣ್ಣಿಸಬಹುದು ಎಂದು ತಿಳಿಸಿದರು.
ಗ್ರೇಡ್2 ತಹಶೀಲ್ದಾರ ಪ್ರಕಾಶ ಸಿಂದಗಿ, ರಜಾಕ ಮುಜಾವರ ಮಾತನಾಡಿದರು.
ಪುರಸಭೆ ಸದಸ್ಯರಾದ ಬಾಷಾಸಾಬ ಕೆ, ತಾಂಬೋಳಿ, ಹಣಮಂತ ಸುಣಗಾರ, ಗೊಲ್ಲಾಳಪ್ಪ ಬಂಕಲಗಿ, ರಾಜಣ್ಣಿ ನಾರಾಯಣಕರ, ಸಂದೀಪ ಚೌರ, ಶ್ರೀಶೈಲ ಬೀರಗೊಂಡ, ಶರಣಗೌಡ ಪಾಟೀಲ, ರಜಾಕ ಮುಜಾವರ, ಕಾ.ನಿ.ಪ ಅಧ್ಯಕ್ಷ ಆನಂದ ಶಾಬಾದಿ, ಪತ್ರಕರ್ತ ಪಂಡಿತ ಯಂಪೂರೆ, ಬಿ.ಜೆ.ಪಿ ಯುವ ಮುಖಂಡರಾದ ರವಿ ನಾಯ್ಕೋಡಿ, ಬಸವರಾಜ ಸಜ್ಜನ, ಮೈಬೂಬ ವಾಲೀಕಾರ(ನಟ್), ಶರಣಪ್ಪ ಸುಲ್ಪಿ, ನಿಕೀಲ ಪಾಟೀಲ(ಡಂಬಳ) ಎಫ್.ಎಂ.ಪೌಂಡೇಶನ್‍ನ ಮಾಲೀಕ ಪೈಜಾನ್ ಮಾಲಗಾಂವಕರ ವೇದಿಕೆ ಮೇಲಿದ್ದರು.
ಇಸ್ಮಾಯಿಲ್ ಶೇಖ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.