ಸಿಂದಗಿ: ದೇಶಾಭಿಮಾನ ಶಿಸ್ತು ಸೇವಾ ಮನೋಭಾವನೆ ಹಾಗೂ ರಾಷ್ಟ್ರಧ್ವಜ ರಾಷ್ಟ್ರಗೀತೆ ಕುರಿತಾದ ತರಬೇತಿ ನೀಡುತ್ತಿರುವ ಭಾರತ್ ಸೇವಾದಳ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಐ ಎಸ್ ಟಕ್ಕೆ ಹೇಳಿದರು.
ಪಟ್ಟಣದ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಲಾದ ತಾಲೂಕ ಮಟ್ಟದ ಭಾರತ ಸೇವಾದಳ ಶಿಕ್ಷಕ ಮಿಲಾಪ್ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ತಾಲೂಕಿನಲ್ಲಿ ಪ್ರತಿ ಶಾಲೆಗಳಲ್ಲಿ ಅದರಲ್ಲೂ ಪ್ರೌಢಶಾಲೆಗಳಲ್ಲಿ ಭಾರತ್ ಸೇವಾದಳ ಘಟಕ ಕಡ್ಡಾಯವಾಗಿ ಇರಬೇಕಾಗಿದೆ. ಹಾಗೆ ಪ್ರೌಢಶಾಲಾ ಮುಖ್ಯ ಗುರುಗಳಿಗೆ ಹಾಗೂ ಪ್ರಾಥಮಿಕ ಶಾಲಾ ಮುಖ್ಯಗುರುಗಳಿಗೆ ಹಾಗೂ ಸಿ ಆರ್ ಪಿ ಬಿ ಆರ್ ಪಿ ಗಳಿಗೆ ರಾಷ್ಟ್ರಧ್ವಜ ರಾಷ್ಟ್ರಗೀತೆ ಕುರಿತಾದ ಪ್ರಾಯೋಗಿಕ ತರಬೇತಿಯನ್ನು ಆಯೋಜಿಸಲಾಗುವುದು ಎಂದರು.
ಸೇವಾದಳದ ತಾಲೂಕ ಕೋಶಾಧ್ಯಕ್ಷ ವಿಶ್ರಾಂತ ಪ್ರಾಚಾರ್ಯ ಎಸ್.ಎಸ್.ಪಾಟೀಲ ಮಾತನಾಡಿ, ದೇಶದಲ್ಲಿ ಇಂದು ಅನ್ಯ ಭಾಷೆಗಳ ಪ್ರಭಾವದಿಂದ ರಾಷ್ಟ್ರಪ್ರೇಮ ಮರಿಚಿಕೆಯಾಗುತ್ತಿದ್ದು ಕಾರಣ ಪ್ರತಿ ಶಾಲೆಗಳಲ್ಲಿ ಮಕ್ಕಳಿಗೆ ರಾಷ್ಟ್ರಗೀತೆ ನಾಡಗೀತೆ ಸುಶ್ರಾವ್ಯವಾಗಿ ಹಾಡುವುದನ್ನು ಎಲ್ಲ ಶಿಕ್ಷಕರು ಕಲಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ್ ಸೇವಾದಳದ ತಾಲೂಕ ಅಧ್ಯಕ್ಷ ಚಂದ್ರಶೇಖರ್ ನಾಗೂರ ಅವರು ಮಾತನಾಡಿ, ತಾಲೂಕಿನಲ್ಲಿ ನಡೆಯುವ ಪ್ರತಿ ಸೇವಾದಳದ ಕಾರ್ಯಕ್ರಮಗಳಿಗೆ ತನು ಮನ ಧನದಿಂದ ಸಹಾಯ ಮಾಡುವುದಾಗಿ ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಸವದಳದ ಅಧ್ಯಕ್ಷ ಶಿವಾನಂದ ಕಲಬುರಗಿ ಹಾಗೂ ಮುಖ್ಯಗುರು ಶರಣಬಸಪ್ಪ ಲಂಗೋಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾರತ್ ಸೇವಾದಳದ ತಾಲೂಕು ಉಪಾಧ್ಯಕ್ಷ ಗುರಣ್ಣ ಬಸರಕೋಡ, ಸದಸ್ಯರುಗಳಾದ ಎಸ್.ಬಿ.ಚಾಗಶೆಟ್ಟಿ, ಶ್ಯಾಮಲಾ ಮಂದೇವಾಲ, ಶ್ರೀಮತಿ ಎಸ್.ಎಸ್.ಕುಂಬಾರ, ಡಿ ಸಿ ಜಾದವ, ಜಿಲ್ಲಾ ಸಮಿತಿ ಸದಸ್ಯ ಶ್ರೀಶಾಂತ್ ಕುಂಬಾರ, ಬಿ ಆರ್ ಪಿ ಬಿರಾದರ, ಪ್ರೌಢಶಾಲೆಯ ಮುಖ್ಯ ಗುರು ಶಿವಾನಂದ ಶಾಪುರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭಾರತ ಸೇವಾದಳದ ವಲಯ ಸಂಘಟಿಕ ನಾಗೇಶ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು, ಆರ್ ಆರ್ ನಿಂಬಾಳಕರ ನಿರೂಪಿಸಿದರು, ಎಸ್ ಡಿ ಕುಂಬಾರ್ ಸ್ವಾಗತಿಸಿದರು. ಡಿ.ಸಿ ಜಾದವ್ ವಂದಿಸಿದರು, ಎಂ.ಜಿ ಸಿಂಗೆ ಗೌರವ ರಕ್ಷೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕಿನಿಂದ 45 ಜನ ಶಿಕ್ಷಕರು ಭಾಗವಹಿಸಿದ್ದರು.