ಲಸಿಕೆ ಪ್ರಯೋಗದಲ್ಲಿ ಭಾರತ ವಿಶ್ವ ದಾಖಲೆ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಹೊಸದಿಲ್ಲಿ – ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಭಾರತ ಇಂದು ದಾಖಲೆ ನಿರ್ಮಿಸಿದೆ.

ಲಸಿಕಾಕರಣ ಆರಂಭವಾದ ಮೇಲೆ ಒಟ್ಟು ೩೨.೩೭ ಕೋಟಿ ಜನರಿಗೆ ಲಸಿಕೆ ಹಾಕಲಾಗಿದ್ದು ಇದು ಕಡಿಮೆ ದಿನಗಳಲ್ಲಿ ಅತಿ ಹೆಚ್ಚು ಲಸಿಕೆ ಹಾಕಲಾದ ಪ್ರಮಾಣವಾಗಿದೆ.ಅಷ್ಟೇ ಅಲ್ಲ ಅಮೇರಿಕಕಿಂತಲೂ ಜಾಸ್ತಿಯಾಗಿದೆ.

ಈವರೆಗಿನ ಒಟ್ಟು ಲಸಿಕೆಯ ಪ್ರಮಾಣದಲ್ಲಿ  ೩೨.೩೭ ಕೋಟಿ ಲಸಿಕೆಗಳನ್ನು ಭಾರತ ಹಾಕಿದರೆ ಅಮೇರಿಕಾ ೩೨.೩೩ ಕೋಟಿ, ಬ್ರಾಜಿಲ್ ೯.೨೯ಕೋಟಿ,ಬ್ರಿಟನ್ ೭.೬೩ ಕೋಟಿ ಹಾಗೂ ಜರ್ಮನಿ ೭.೧೪ ಕೋಟಿ ಲಸಿಕೆಗಳನ್ನು ಹಾಕಿವೆ.

- Advertisement -

ಭಾರತದಲ್ಲಿ ಇದು ಇನ್ನಷ್ಟು ಹೆಚ್ಚಾಗಬಹುದಿತ್ತು. ಆದರೆ ಕೆಲವರು ಮೋದಿ ವಿರೋಧ ಮಾಡುತ್ತ ಲಸಿಕೆಯ ಬಗ್ಗೆ ಇಲ್ಲ ಸಲ್ಲದ ವದಂತಿಗಳನ್ನು ಹರಡಿಸಿದ್ದರಿಂದ ಜನರು ಲಸಿಕೆ ಹಾಕಿಸಲು ಮುಂದೆ ಬರಲಿಲ್ಲ. ಇನ್ನು ಕೆಲವು ಹಳ್ಳಿಗಳಲ್ಲಿ ಅನಕ್ಷರತೆ ಪ್ರಮಾಣ ಜಾಸ್ತಿ ಇರುವುದರಿಂದ ಜನರು ಲಸಿಕೆ ಹಾಕಿಸಲು ಮುಂದೆ ಬರುತ್ತಿಲ್ಲ. ಲಸಿಕೆಯ ಬಗ್ಗೆ ಜಾಗೃತಿ ಸರಿಯಾಗಿ ಆಗುತ್ತಿಲ್ಲ ಎನ್ನಲಾಗಿದೆ.

ಇನ್ನು ದೇಶದಲ್ಲಿ ಲಸಿಕೆ ಹಾಕುವ ಪ್ರಮಾಣದಲ್ಲಿ ದೆಹಲಿ ೭೩.೩೯ ಲಕ್ಷ ಇದ್ದರೆ ಎರಡನೇ ಸ್ಥಾನದಲ್ಲಿ ಬೆಂಗಳೂರು ೫೯.೭೭ ಲಕ್ಷ ಡೋಸ್ ಲಸಿಕೆ ಹಾಕಿದೆ.ಕೋಲ್ಕತಾ ೩೧.೦೯ ಲಕ್ಷ ಹಾಗೂ ಕೊನೆಯಲ್ಲಿ ಹೈದರಾಬಾದ್ ನಲ್ಲಿ ೩೫.೨೩ ಲಕ್ಷ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.

ಭಾರತದಂಥ ಬ್ರಹತ್ ದೇಶದಲ್ಲಿ ಕೊರೋನಾ ಲಸಿಕೆಯೇ ತಯಾರಾಗುವ ಬಗ್ಗೆ ಸಂದೇಹಗಳಿದ್ದಾಗ ದೇಶದಲ್ಲಿಯೇ ಲಸಿಕೆ ತಯಾರು ಮಾಡಿದ್ದಲ್ಲದೆ ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ಲಸಿಕೆ ನೀಡಿದ ಮೋದಿ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ವಿಶ್ವಾದ್ಯಂತ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!