ಸಿಂದಗಿ: ಭಾರತದ ಮೊದಲ ಮಹಿಳಾ ಪ್ರಧಾನಿ, ಶತ್ರು ರಾಷ್ಟ್ರಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದ ಮತ್ತು ಉಕ್ಕಿನ ಮಹಿಳೆಯೆಂದೆ ಕರೆಯಲಾಗುತ್ತಿದ್ದ ದಿ. ಶ್ರಿಮತಿ ಇಂದಿರಾಗಾಂಧಿಯವರ ಜನ್ಮದಿನ ಆಚರಿಸುತ್ತಿರುವುದು ನಮ್ಮೆಲ್ಲರ ಪುಣ್ಯ ಎಂದು ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷರಾದ ವಿಠ್ಠಲ ಜಿ ಕೊಳ್ಳೂರ ಹೇಳಿದರು.
ಪಟ್ಟಣದ ಬ್ಲಾಕ್ ಸಮಿತಿ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿ. ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಳುವವನೆ ಒಡೆಯ, ಬಡವರು, ದೀನದಲಿತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಶ್ರಮಿಸಿದ ಧೀರ ನಾಯಕಿ ದಿ. ಇಂದಿರಾ ಅವರು ನಮ್ಮಿಂದ ಮರೆಯಾದರು ಅವರು ಕೊಟ್ಟಂಥ ಆದರ್ಶಗಳನ್ನು ನಾವೆಲ್ಲಾ ಪಾಲಿಸೋಣ ಎಂದರು.
ಈ ಸಂದರ್ಭದಲ್ಲಿ ಆಲಮೇಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಯುಬ ದೇವರಮನಿ, ಎಪಿಎಮ್‍ಸಿ ಅಧ್ಯಕ್ಷ ಸಿದ್ದಣ್ಣ ಹಿರೇಕುರಬರ, ಸಂತೋಷ ಹರನಾಳ, ಮುನ್ನಾ ಬೈರಾಮಡಗಿ, ಶಿವನಗೌಡ ಬಿರಾದಾರ, ಭೀಮರಾಯ ಅಮರಗೋಳ, ಭೀಮು ವಾಲಿಕಾರ, ಯುವ ಕಾಂಗ್ರೆಸ ಅಧ್ಯಕ್ಷ ಇರ್ಪಾನ ಆಳಂದ, ಸಿಂದಗಿ ಬ್ಲಾಕ್ ಸಮಿತಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇರ್ಪಾನ ಮುಲ್ಲಾ, ಎನ್‍ಎಸ್‍ಯುಆಯ್ ಘಟಕದ ಅಧ್ಯಕ್ಷರಾದ ರಾಘವೇಂದ್ರ ಪೂಜಾರಿ, ಕಿಸಾನ ಘಟಕದ ಅಧ್ಯಕ್ಷರಾದ ಸಿದ್ದಲಿಂಗ ಗುಂಡಾಪೂರ, ಆಲಮೇಲ ಬ್ಲಾಕ್ ಸಮಿತಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಫೀಕ ಜಮಾದಾರ, ಬಿ.ಆರ್.ಹುಂಡೆಕಾರ, ಹಾಸಿಂ ಆಳಂದ, ಪರಶುರಾಮ ಕಾಂಬಳೆ, ಮಲ್ಲು ಸಾವಳಸಂಗ, ಸಲಿಂ ಕಣ್ಣಿ, ಲಕ್ಮಿಕಾಂತ ಸೂಡಿ, ಕುಮಾರ ಗೊಂದಳಿ, ಅಮೀತ ಚವ್ಹಾಣ, ದೇವೇಂದ್ರ ಪೂಜಾರಿ, ಸಿದ್ದು ಅಂಡರಗಲ್ಲ, ಮಹಿಬೂಬ ದೊಡಮನಿ, ಮಲಕಣ್ಣ ಗಡಿಗೆನವರ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.