ಕಲಬುರ್ಗಿ – ನಾವು ಹೊಡೆದಂಗೆ ಮಾಡ್ತಿವಿ, ನೀವು ಅತ್ತಂಗೆ ಮಾಡಿ ಅಂತಾ ಕಾಂಗ್ರೆಸ್ ಬಿಜೆಪಿ ಮಧ್ಯೆ ಒಳ ಒಪ್ಪಂದ ಆಗಿದೆ ಇವರು ಪರಸ್ಪರ ಕೆಸರೆರಚಾಟದಲ್ಲಿ ಸಿಡಿ ಪ್ರಕರಣವನ್ನು ಮುಚ್ಚಿ ಹಾಕಿ ಬಿಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಭಾವನೆಗಳಿಗೆ ಸಮಸ್ಯೆಗಳಿಗೆ ಎರಡು ರಾಷ್ಟ್ರೀಯ ಪಕ್ಷಗಳು ಧಕ್ಕೆಯನ್ನುಂಟು ಮಾಡುತ್ತಿವೆ. ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಬಿಜೆಪಿ ಬಳಸುತ್ತಿರುವ ಪದಗಳು ಖಂಡನೀಯ ರಾಜ್ಯದ ಜನರನ್ನ ಎರಡೂ ಪಕ್ಷಗಳು ಬೆತ್ತಲೆಗೊಳಿಸುತ್ತಿವೆ ಎಂದರು.
ಕಲಾಪಗಳಿಗೆ ಇತಿಶ್ರೀ ಹಾಡಿ ಮೊಟಕುಗೊಳಿಸಿದ್ದು ದುರಂತ. ಇವರಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಲು ಸಮಯವಿಲ್ಲ ಸಿಡಿ ಬಗ್ಗೆ ವಿನಾಕಾರಣ ಚರ್ಚೆ ಮಾಡಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಹದಿನೈದು ದಿನಗಳ ಕಾಲ ಬಸವಕಲ್ಯಾಣದಲ್ಲಿ ಠಿಕಾಣಿ ಹೂಡಲಿದ್ದೇನೆ
ಬಸವಕಲ್ಯಾಣದಲ್ಲಿ ಪ್ರತಿಯೊಂದು ಮನೆಮನೆಗಳಿಗೆ ತೆರಳಿ ಪಕ್ಷದ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗುವುದು ಎಂದರು.
ಏಕಪತ್ನಿತ್ವ ವಿಷಯ
ಏಕಪತ್ನಿತ್ವ ವಿಷಯ ಹೇಳಿರುವ ಸಚಿವರಿಗೆ ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕೆಲವರು ಕೋರ್ಟಿಗೆ ಹೋಗಿರುವ ಬಗ್ಗೆ ಪ್ರಸ್ತಾಪಿಸಿ, ನೀವು ಆ ಕೆಲಸ ಮಾಡಿಲ್ಲ ಎಂದಮೇಲೆ ಕೋಟ್೯ನಲ್ಲಿ ಸ್ಟೇ ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು ಎಂದರು.