ಮಹಿಳಾ ಜಾಗೃತಿ ವೇದಿಕೆಯ ಉದ್ಘಾಟನೆ
ಸಿಂದಗಿ: ಮಹಿಳೆಯರ ಅಬಲೆಯರಲ್ಲ ಸಬಲೆಯರು ಎನ್ನುವ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಲು ಮಹಿಳಾ ಜಾಗೃತಿ ವೇದಿಕೆ ಅಸ್ಥಿತ್ವಕ್ಕೆ ಬಂದಿರುವುದು ಸ್ವಾಗತಾರ್ಹ ಎಂದು ಇನ್ನರವೀಲ್ ರೊಟರಿ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನಾ ಮನಗೂಳಿ ಹೇಳಿದರು.
ಪಟ್ಟಣದಲ್ಲಿ ಮಹಿಳಾ ಜಾಗೃತಿ ವೇದಿಕೆಯ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಅಸಹಾಯಕ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹೋರಾಟ ಮಾಡುವ ಉದ್ದೇಶ ಇಟ್ಟುಕೊಂಡಿದೆ ಈ ಮಹಿಳೆ ಜಾಗೃತಿ ವೇದಿಕೆ ಹುಟ್ಟಿಕೊಂಡಿದ್ದು ಯಾವುದೇ ಸಂದರ್ಭದಲ್ಲಿ ಸಹಾಯಕ್ಕೆ ಎಂದರು.
ಸಂಗಮ ಸಂಸ್ಥೆಯ ನಿರ್ಧೇಶಕಿ ಸಿಂತಿಯಾ ಡಿ.ಮೆಲ್ಲೋ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದೃಶ್ಯ ಮಾಧ್ಯಮ ಹಾಗೂ ಮೊಬಾಯಿಲ್ ಸಂಸ್ಕೃತಿಯಿಂದ ದಾರಿ ತಪ್ಪುತ್ತಿದ್ದಾರೆ ನಾವು ಹಿಂದಿನ ಹಿರಿಯರ ಪದ್ದತಿಯನ್ನು ಮರೆತ್ತಿದ್ದೇವೆ ಅಂದು ಗಂಡು-ಹೆಣ್ಣೂ ತಾರತಮ್ಯವಿಲ್ಲ ದುಡಿಮೆ ಮಾಡಿ ಸಮನಾಗಿ ಜೀವನ ನಡೆಸುತ್ತಿದ್ದರು ಆದರೆ ಇಂದು ಗಂಡ ದುಡಿದು ಬಂದರು ಕೂಡಾ ಅವರಿಗೆ ಸಮಯಕ್ಕೆ ತಕ್ಕಂತೆ ಕಾರ್ಯಪ್ರವೃತ್ತರಾಗದ ಕಾರಣ ಗಂಡಸರು ಕೂಡಾ ಕೆಟ್ಟ ಚಟಗಳಿಗೆ ಅಂಟಿಕೊಳ್ಳುತ್ತಿದ್ದಾರೆ ಇದಕ್ಕೆ ಹೆಣ್ಣು ಮಕ್ಕಳೇ ಕಾರಣರಾಗಿದ್ದೇವೆ ಟೀವಿಗಳಲ್ಲಿ ಬರುವ ದಾರಾವಾಹಿಗಳನ್ನು ಅನುಕರಣೆ ಮಾಡದೇ ಚಿಕ್ಕ ಸಂಸಾರ ಚೊಕ್ಕ ಸಂಸಾರವನ್ನು ಬೆಳೆಸುವ ನಿಟ್ಟಿನಲ್ಲಿ ಜಾಗೃತರಾಗಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಮಹಿಳಾ ಜಾಗರಣಾ ವೇದಿಕೆಯ ಸಂಚಾಲಕಿ ಶೈಲಜಾ ಸ್ಥಾವರಮಠ, ಶಾರದಾ ಮಂಗಳೂರ, ಮಹಿಳಾ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನೀಲಮ್ಮ ಯಡ್ರಾಮಿ, ತಾಲೂಕಾಧ್ಯಕ್ಷೆ ಜಯಶ್ರೀ ಹದನೂರ, ಅನ್ನಪೂರ್ಣಾ ಹೊಟಗಾರ, ಮಹಾನಂದಾ ಬಮ್ಮಣ್ಣಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾರದಾ ಬೇಟಗೇರಿ, ಕೀರ್ತಿ ಚಂದಾನವರ, ಗೌಶೀಯಾ ಶೇಖ, ಸುಭದ್ರಾ ಮೇಲಿನಮನಿ, ಲಕ್ಕಮ್ಮ ಬಿರಾದಾರ, ಲಕ್ಷ್ಮಿ ಕಲಾಲ, ಸರಸ್ವತಿ ಮಾಶಾಳ, ಗಂಗು ಲಾತೂರ, ಜಯಶ್ರೀ ನಾಟೀಕಾರ, ಸಾವಿತ್ರಿ ಅರಳಗುಂಡಗಿ, ಸುಮಾ ಗೂಳೂರ ಸೇರಿದಂತೆ ಅನೇಕರಿದ್ದರು.