- Advertisement -
ಬೀದರ – ರಾಜ್ಯ ಸರ್ಕಾರ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಮುಳುಗಡೆ ಸಂತ್ತಸ್ತರು ಕೇಶ ಮುಂಡನ ಮಾಡಿಕೊಂಡು ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಪ್ರತಿಭಟನೆ ನಡೆಸಿದರು.
76 ದಿವಸಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ.
- Advertisement -
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ನಾವು ಸಂತ್ರಸ್ತರು ಮೂವತ್ತು ವರ್ಷಗಳಿಂದ ಸತತವಾಗಿ ಪ್ರತಿಭಟನೆ ಮಾಡತ್ತಾ ಬಂದಿದ್ದರೂ ಕೂಡ ಯಾವುದೇ ಸರ್ಕಾರ ನಮ್ಮ ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡಲಿಲ್ಲ ಇಪ್ಪತ್ತೆಂಟು ಗ್ರಾಮಗಳ ಸಂತ್ರಸ್ತರು ಇನ್ನೂ ತೊಂದರೆ ಅನುಭವಿಸುತ್ತಿದ್ದೇವೆ. ಅಧಿವೇಶನದಲ್ಲಿ ಯಾರೂ ನಮ್ಮ ಕಾರಂಜಾ ಮುಳಗಡೆ ಸಂತ್ರಸ್ತರ ಬಗ್ಗೆ ಮಾತು ಆಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ