ಸಿಂದಗಿ: ವಿದ್ಯಾರ್ಥಿಗಳು ಅತ್ಯುತ್ತಮ ಸರ್ವತೋಮುಖ ಬೆಳವಣಿಗೆ ಹೊಂದಿ ಹೊರಹೊಮ್ಮಲು ವಿದ್ಯಾರ್ಥಿ, ಶಿಕ್ಷಕರು ಹಾಗೂ ಪಾಲಕರು ಈ ಮೂರು ಕೊಂಡಿಯಾಗಿ ಕೆಲಸ ಮಾಡಿದರೆ ಮಾತ್ರ ಮಗುವು ಅತ್ಯುತ್ತಮ ಶಿಕ್ಷಣ ಪಡೆಯಲು ಯಶಸ್ವಿಯಾಗುತ್ತದೆ ಎಂದು ಶಿಕ್ಷಣ ತಜ್ಞರು ಹಾಗೂ ಬೆಂಗಳೂರ ರೂಟ್ಸ ಎಜುಕೇಶನ ಅಕಾಡೆಮಿಯ ವಿನಯ ಪಾಟೀಲ ಹೇಳಿದರು.
ಪಟ್ಟಣದ ಹೊರವಲಯದ ಜೇವರ್ಗಿ ರಸ್ತೆಯಲ್ಲಿರುವ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲನಲ್ಲಿ ನಡೆದ ಪಿ.ಟಿ.ಎಮ್ ಸಮಾರಂಭವು ಪೋಷಕ, ಶಿಕ್ಷಕ, ವಿಧ್ಯಾರ್ಥಿ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳಿಗೆ ಕಳೆದ ಎರಡು ವರ್ಷದ ನಂತರ ಉಲ್ಲಾಸವನ್ನು ತುಂಬಲು, ಮಾನಸಿಕ, ದೈಹಿಕ, ಶೈಕ್ಷಣಿಕವಾಗಿ ಸರ್ವೋತೊಮುಖ ಬೆಳವಣಿಗೆಗೆ ಪ್ರೇರಣೆಯಾಗಿ ವಿದ್ಯಾಥಿಗಳಿಗೆ ಅತ್ಯುತ್ತಮ ಸಂದೇಶವನ್ನು ನೀಡಿದರು ಹಾಗೂ ಮಕ್ಕಳೊಂದಿಗೆ ಸಂವಾದ ಮಾಡುವ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಿದರು. ನಂತರ ಪೋಷಕರಿಗೆ ಮಕ್ಕಳೊಂದಿನ ಸಂಬಂಧವನ್ನು ಯಾವ ರೀತಿಯಾಗಿ ಇರಬೇಕೆಂಬುದು ಮತ್ತು ಪೋಷಕರ ಪ್ರಮುಖ ಪಾತ್ರವೇನೆಂಬುದನ್ನು ಅನೇಕ ಉದಾಹರಣೆಗಳ ಮೂಲಕ ಶಿಕ್ಷಕರಿಗೆ, ಪೋಷಕರಿಗೆ, ವಿದ್ಯಾರ್ಥಿಗಳಿಗೆ ಅವರವರ ಕರ್ತವ್ಯ ಜವಾಬ್ದಾರಿ ನಿಭಾಯಿಸಲು ಸಲಹೆಗಳನ್ನು ನೀಡಿದರು.