ಸಿಂದಗಿ; ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೂಡಾ ಕಳ್ಳತನ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ ದರೋಡೆಕೋರರನ್ನು ಬಂಧಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಕಳ್ಳರ ಹಾವಳಿ ತಪ್ಪಿಸಲು ಮುಂಜಾಗೃತ ಕ್ರಮವಾಗಿ ಮಠ ಮಂದಿರ, ದೇವಸ್ಥಾನ, ಹಾಗೂ ಅಂಗಡಿ, ಮುಂಗಟ್ಟುಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳುವುದರಿಂದ ಪೊಲೀಸ ಇಲಾಖೆಗೆ ಸಹಕಾರ ನೀಡಬೇಕು ಎಂದು ಪ್ರೊಬೆಷನರಿ ಡಿ.ವಾಯ್‌ಎಸ್‌ಪಿ ಮರ್ತಜಾ ಖಾದ್ರಿ ಸೂಚಿಸಿದರು.
ಮೋರಟಗಿ ಗ್ರಾಮದ ಹೊರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡ ದಲಿತ ಕುಂದುಕೊರತೆ ಸಭೆಯಲ್ಲಿ ಬಾಗವಹಿಸಿ ಅವರು ಮಾತನಾಡಿ, ಮೋರಟಗಿ ಹೊರಠಾಣೆಗೆ ೧೪ ಹಳ್ಳಿಗಳು ಒಳಪಡುತ್ತವೆ ತಮ್ಮ ತಮ್ಮ ಗ್ರಾಮಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಮುಕ್ತವಾಗಿ ಪೊಲೀಸ್ ಠಾಣೆಗೆ ಬೀಟ್ ಪೊಲೀಸರಿಗೆ ಅಥವಾ ೧೧೨ ಗೆ ಕರೆಮಾಡಿ ತಿಳಿಸಬೇಕು ತಾವುಗಳು ಭಯಪಡುವ ಅವಶ್ಯವಿಲ್ಲ ತಾವು ತಿಳಿಸಿದ ವಿಷಯ ಇಲಾಖೆ ಗೌಪ್ಯ್ರವಾಗಿ ಇಡಲಾಗುವುದು ಎಂದರು.
ನಂತರ ಪಿಎಸ್‌ಐ ಆರಿಫ್ ಮುಶಾಪುರಿ ಮಾತನಾಡಿ, ದಿನದಿಂದ ದಿನಕ್ಕೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಅಪಘಾತ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ ತಮ್ಮ ಪ್ರಾಣ ರಕ್ಷಣೆಗೆ ಹೆಲ್ಮೆಟ್ ಕಡ್ಡಾಯವಾಗಿ ಬಳಸಿ ವಾಹನ ಚಲಿಸಬೇಕು ಯಾವುದೇ ಕಾರಣಕ್ಕೂ ಇನ್ಶೂರೆನ್ಸ್ ಕಟ್ಟುವುದು ಮರೆಯಬೇಡಿ ಎಂದು ಸಲಹೆ ನೀಡಿದರು.
ಕಾಟಾಚಾರದ ದಲಿತ ಕುಂದುಕೊರತೆ ಸಭೆ; ಮೊರಟಗಿ ಠಾಣಾ ವ್ಯಾಪ್ತಿಗೆ ಒಳಪಡುವ ೧೪ ಹಳ್ಳಿಗಳ ಜನರಿಗೆ ಯಾವುದೇ ಮಾಹಿತಿ ನೀಡದೇ ಬರೀ ಮೊರಟಗಿ ಗ್ರಾಮಕ್ಕೆ ಮಾತ್ರ ಸಿಮಿತವಾದ ಸಭೆ ನಡೆಸಿ ಸರಕಾರಿ ಕಾರ್ಯಕ್ರಮವನ್ನು ಒಂದೇ ಮೊಟಕುಗೊಳಿಸಿದ್ದು ಇದೊಂದು ಸರಕಾರಿ ದಾಖಲೆಗಾಗಿ ರೂಪಿಸಿ ಕೈ ತೊಳೆದುಕೊಂಡ ಕಾಟಾಚಾರದ ದಲಿತ ಕುಂದುಕೊರತೆ ಸಭೆಯಾಗಿದೆ ಎಂದು ಮೊರಟಗಿ ಗ್ರಾಮಕ್ಕೆ ಸಂತೆಗಾಗಿ ಆಗಮಿಸಿದ ಹಲವಾರು ಗ್ರಾಮಗಳ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವುದು ಕೇಳಿ ಬರುತ್ತಿತ್ತು.
ಸಭೆಯಲ್ಲಿ ಮಾಜಿ ಸೈನಿಕ ಎಂ.ಟಿ ಸಿಂಗೆ, ರವಿ ನಡುವಿನಕೇರಿ, ಧರ್ಮರಾಜ ಎಂಟಮನ, ಹಾವಣ್ಣ ಕಕ್ಕಳಮೆಲಿ, ಶ್ರೀಮಂತ ಮಳಗಿ, ನಿಂಗಣ್ಣ ವಾಲಿಕಾರ, ಚನ್ನಪ್ಪ ಬಳಗಾನೂರ, ಬಿಟ್ ಪೊಲೀಸ್ ಸಿಬ್ಬಂದಿಗಳಾದ ಭೀಮು ಲಮಾಣಿ, ನಿಂಗಪ್ಪ ಪೂಜಾರಿ ಇದ್ದರು.