- Advertisement -
ಬೀದರ – ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಮಾಡಿದ್ದ ನಾಲ್ವರು ಯುವಕರನ್ನು ಮುಡಬಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕಲ್ಕೋರಾ ಗ್ರಾಮದಲ್ಲಿ ಈ ಯುವಕರು ಡಾ. ಅಂಬೇಡ್ಕರ್ ಭಾವವಿತ್ರಕ್ಕೆ ಅಪಮಾನ ಮಾಡಿದ್ದರಲ್ಲದೆ ಅದನ್ನು ಇನ್ಸ್ಟಾಗ್ರಾಮ್ ಮೂಲಕ ಅಪಮಾನದ ವಿಡಿಯೋ ಹಂಚಿಕೊಂಡಿದ್ದರು.
mrk_777_king5 ಇನ್‌ಸ್ಟಾಗ್ರಾಮ್ ಐಡಿ ಮೂಲಕ ವೈರಲ್ ಆಗಿದ್ದ ವಿಡಿಯೋ. ಕಲ್ಕೋರಾ ಗ್ರಾಮದ ಯುವಕರಿಂದ ಅಪಮಾನದ ವಿಡಿಯೋ ವೈರಲ್ ಆಗಿದ್ಡು ಮುಡಬಿ ಠಾಣೆಯಲ್ಲಿ ಕಲಂ 189(2), 353(2), 298, 190 ಬಿಎನ್‌ಎಸ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಮುಡಬಿ ಪೊಲೀಸರು.5 ಜನರ ವಿರುದ್ದ ಪ್ರಕರಣ ದಾಖಲಿಸಿ, 4 ಜನರ ಬಂಧನ ಮಾಡಿದ್ದಾರೆ.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ