- Advertisement -
ಬೀದರ – ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ ಭಾವಚಿತ್ರಕ್ಕೆ ಯಾರೋ ಕಿಡಿಗಳು ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ ಪ್ರಸಂಗದಿಂದಾಗಿ ಕೆಲಹೊತ್ತು ಉಧ್ವಿಘ್ನ ಪರಿಸ್ಥಿತಿ ಎದುರಾಗಿತ್ತು.
ಬೀದರ ತಾಲೂಕಿನ ವಿಳಾಸಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ತಕ್ಷಣವೇ ಜಿಲ್ಲಾ ಎಸ್ ಪಿ ಪ್ರದೀಪ ಗುಂಟಿಯವರು ಸ್ಥಳಕ್ಕೆ ಭೇಟಿ ನೀಡಿ ಹಾರ ತೆರವುಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ತಡರಾತ್ರಿ ಯಾರೂ ದುಷ್ಕರ್ಮಿಗಳು ಈ ದುಷ್ಕೃತ್ಯ ಕೈಗೊಂಡಿದ್ದು ಸ್ಥಳಕ್ಕೆ ಜನವಾಡ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ಘಟನೆಯಿಂದ ಗ್ರಾಮದ ದಲಿತ ಪರ ಸಂಘಟನೆಗಳು ಆಕ್ರೋಶಗೊಂಡಿದ್ದು ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದರು.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ